ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಏರ್ ಇಂಡಿಯಾ ಆಡಳಿತದಲ್ಲಿ ಮೇಜರ್ ಸರ್ಜರಿ: ಪಟೇಲ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಏರ್ ಇಂಡಿಯಾ ಆಡಳಿತದಲ್ಲಿ ಮೇಜರ್ ಸರ್ಜರಿ: ಪಟೇಲ್
ಏರ್ ಇಂಡಿಯಾದ ಉನ್ನತ ಆಡಳಿತದಲ್ಲಿ ಮುಂದಿನ 30 ದಿನಗಳ ಅವಧಿಯಲ್ಲಿ ಪರಿಷ್ಕರಣೆ ಕಾರ್ಯವನ್ನು ಮಾಡಲಾಗುತ್ತದೆ ಎಂದಿರುವ ಕೇಂದ್ರ ನಾಗರಿಕ ವಿಮಾನಯಾನ ಖಾತೆ ಸಚಿವ ಪ್ರಫುಲ್ ಪಟೇಲ್, ಕೆಲವು ಪ್ರಮುಖ ತಲೆಗಳನ್ನು ಉರುಳಿಸುವ ಮುನ್ಸೂಚನೆಯನ್ನೂ ನೀಡಿದ್ದಾರೆ.

ಏಳು ಸ್ವತಂತ್ರ ನಿರ್ದೇಶಕರನ್ನು ಏರ್ ಇಂಡಿಯಾ ಮಂಡಳಿಗೆ ಸೇರಿಸಲಾಗುತ್ತದೆ ಎಂದಿರುವ ನಾಗರಿಕ ವಿಮಾನಯಾನ ಇಲಾಖೆಯ ಮೂಲಗಳು, ಕೆಲವು ಅಂತಾರಾಷ್ಟ್ರೀಯ ಪ್ರತಿಷ್ಠಿತರನ್ನು ನೇಮಿಸಲಾಗುತ್ತದೆ ಎಂದಿವೆ.

ಅಲ್ಲದೆ ಜಾಗತಿಕ ಜಾಹಿರಾತಿನ ಮೂಲಕ ಹೊಸ ಕಾರ್ಯ ನಿರ್ವಾಹಕಾಧಿಕಾರಿಯನ್ನೂ ಏರ್ ಇಂಡಿಯಾಕ್ಕೆ ನೇಮಿಸಲಾಗುತ್ತದೆ ಎಂದೂ ಮೂಲಗಳು ತಿಳಿಸಿವೆ.

ಮುಂದಿನ 30 ದಿನಗಳಲ್ಲಿ ಏರ್ ಇಂಡಿಯಾದ ಉನ್ನತ ಆಡಳಿತವನ್ನು ಪುನರ್ನೇಮಕ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ನಿರ್ದೇಶಕರು ಹುದ್ದೆಯನ್ನು ತೆರವುಗೊಳಿಸುವಂತೆ ಸೂಚಿಸಲಾಗುತ್ತದೆ. ವೃತ್ತಿಪರ ಮುಖ್ಯ ನಿರ್ವಹಣಾಧಿಕಾರಿಯನ್ನೂ ಸಿಎಂಡಿ ಅಡಿಯಲ್ಲಿ ನಿಯುಕ್ತಿಗೊಳಿಸಲಾಗುವುದು. ಜವಾಬ್ದಾರಿಯುತ ಸ್ಥಾನದಲ್ಲಿರುವ ಸಿಎಂಡಿ ಅರವಿಂದ್ ಜಾದವ್ ತನ್ನ ಸ್ಥಾನದಲ್ಲೇ ಮುಂದುವರಿಯಲಿದ್ದಾರೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.

"ಮುಂದಿನ 30 ದಿನಗಳಲ್ಲಿ ಏರ್ ಇಂಡಿಯಾದಲ್ಲಿ ನೀವು ಪ್ರಮುಖ ಬದಲಾವಣೆಗಳನ್ನು ಕಾಣಲಿದ್ದೀರಿ. ಮಂಡಳಿಯಲ್ಲೇ ಪ್ರಮುಖ ಬದಲಾವಣೆಗಳನ್ನು ನೋಡಬಹುದಾಗಿದೆ. ಕೆಲವು ತಲೆಗಳೂ ಉರುಳಲಿವೆ. ಉನ್ನತ ಮಟ್ಟದ ಪ್ರಾಮಾಣಿಕ ಹಾಗೂ ಉದ್ಯಮದಲ್ಲಿ ತಮ್ಮ ಛಾಪನ್ನೊತ್ತಿರುವವರನ್ನು ನಾವು ಆಡಳಿತದಲ್ಲಿ ತರಲಿದ್ದೇವೆ" ಎಂದು ಸಚಿವ ಪಟೇಲ್ ತಿಳಿಸಿದ್ದಾರೆ.

ಸರಕಾರವು ಆಡಳಿತ ಮಂಡಳಿಯಲ್ಲಿನ ಬದಲಾವಣೆಯಲ್ಲದೆ ಸದ್ಯದಲ್ಲಿಯೇ ಆಂಶಿಕ ಬಂಡವಾಳ ಹಿಂತೆಗೆತಕ್ಕೂ ಬೆಂಬಲ ನೀಡಲಿದೆ. ಆ ಮೂಲಕ ಮುಂದಿನ 24 ತಿಂಗಳುಗಳಲ್ಲಿ ವಿಮಾನಯಾನ ಸಂಸ್ಥೆಯನ್ನು ಆರ್ಥಿಕ ಸಂಕಷ್ಟದಿಂದ ಹೊರ ತರುವ ಉದ್ದೇಶ ಸರಕಾರದ್ದು ಎಂದು ಪಟೇಲ್ ತಿಳಿಸಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
'ಪ್ರಾಧಿಕಾರದ 15 ವಿಮಾನ ನಿಲ್ದಾಣಗಳು ಲಾಭದಲ್ಲಿವೆ'
ಮೇತಾಸ್ ಒಪ್ಪಂದಕ್ಕೆ ಆಂಧ್ರ ಸರಕಾರ ಎಳ್ಳುನೀರು
ಎಕ್ಸ್‌ಪ್ಲೋರರ್ ಮೂಲಕ ಹ್ಯಾಕ್ ಮಾಡಬಹುದು: ಮೈಕ್ರೋಸಾಫ್ಟ್
ಇದು ತಮಾಷೆಯಲ್ಲ; ಮೂತ್ರದಿಂದ ಕಾರು ಓಡುತ್ತೆ..!
ಈ ವರ್ಷ ಇನ್ನಷ್ಟು ಉತ್ತೇಜನ ಅನಗತ್ಯ: ಮಾಂಟೆಕ್
ಬರಲಿದೆ 'ಸರಳ್'ನ ಸರಳೀಕೃತ ಅವತಾರ