ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ತೈಲ ಬೆಲೆ ಪಾತಾಳದತ್ತ; ಬ್ಯಾರೆಲ್‌ಗೆ 62 ಡಾಲರ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ತೈಲ ಬೆಲೆ ಪಾತಾಳದತ್ತ; ಬ್ಯಾರೆಲ್‌ಗೆ 62 ಡಾಲರ್
ಜಾಗತಿಕ ಆರ್ಥಿಕ ಕುಸಿತದ ಪ್ರಭಾವಕ್ಕೊಳಗಾಗಿರುವ ತೈಲ ಮಾರುಕಟ್ಟೆಯು ಪಾತಾಳದತ್ತ ಸಾಗುತ್ತಿದ್ದು, ಬುಧವಾರ ಪ್ರತಿ ಬ್ಯಾರೆಲ್‌ವೊಂದಕ್ಕೆ 62 ಡಾಲರ್‌ಗಳನ್ನು ದಾಖಲಿಸುವ ಮೂಲಕ ಸದ್ಯದಲ್ಲಿ ಚೇತರಿಕೆ ಅಸಾಧ್ಯ ಎಂಬ ಲಕ್ಷಣಗಳನ್ನು ಬಿಂಬಿಸುತ್ತಿದೆ.

ಕಳೆದ ವಾರ ಪ್ರತೀ ಬ್ಯಾರೆಲ್‌ಗೆ 73 ಡಾಲರ್ ದಾಖಲಿಸಿದ್ದ ಕಚ್ಚಾ ತೈಲ ಬೆಲೆ ಸತತ ಆರನೇ ದಿನವೂ ಕುಸಿತ ಕಂಡಿದೆ. ಅಮೆರಿಕನ್ ಡಾಲರ್ ಪ್ರಬಲ ಮುಖಬೆಲೆ ಹೊಂದಿದ್ದರೂ ಏಷಿಯಾ ಶೇರು ಮಾರುಕಟ್ಟೆಯು ಕುಸಿತ ಅನುಭವಿಸುತ್ತಿದೆ.

ಸಿಂಗಾಪುರದ ಎಲೆಕ್ಟ್ರಾನಿಕ್ ವ್ಯವಹಾರದಲ್ಲಿ ನ್ಯೂಯಾರ್ಕ್ ಮರ್ಕಂಟೈಲ್ ಎಕ್ಸ್‌ಚೇಂಜ್‌ನ ಬೆಂಚ್‌ಮಾರ್ಕ್ ಕಚ್ಚಾ ತೈಲದ ಆಗಸ್ಟ್ ವಿತರಣೆಯು 75 ಸೆಂಟ್ಸ್‌ಗಳ ಕುಸಿತ ಕಂಡು 62.18 ಡಾಲರುಗಳನ್ನು ಪ್ರತೀ ಬ್ಯಾರೆಲ್‌ಗೆ ದಾಖಲಿಸಿದೆ. ಮಂಗಳವಾರ 1.12 ಡಾಲರುಗಳ ಕುಸಿತ ಕಂಡು 62.93 ಡಾಲರುಗಳನ್ನು ದಾಖಲಿಸಿತ್ತು.

ಲಂಡನ್‌ನಲ್ಲಿ ಐಸಿಇ ಫ್ಯೂಚರ್ಸ್ ಎಕ್ಸ್‌ಚೇಂಜ್‌ನ ಬ್ರೆಂಟ್ ದರಗಳು 68 ಸೆಂಟ್ಸ್‌ಗಳಿಗೆ ಕುಸಿದು ಪ್ರತೀ ಬ್ಯಾರೆಲ್ ಕಚ್ಚಾ ತೈಲವು 62.55 ಡಾಲರುಗಳನ್ನು ದಾಖಲಿಸಿವೆ.

ನೈಮ್ಯಾಕ್ಸ್ ವ್ಯವಹಾರದಲ್ಲಿ ಆಗಸ್ಟ್ ತಿಂಗಳ ಗ್ಯಾಸೊಲಿನ್ ವಿತರಣೆಯಲ್ಲಿ 1.56 ಸೆಂಟ್ಸ್‌ಗಳ ಕುಸಿತ ಕಂಡು ಪ್ರತೀ ಗ್ಯಾಲನ್‌ಗೆ 1.7172 ಡಾಲರ್ ಹಾಗೂ ಹೀಟಿಂಗ್ ತೈಲವು 1.53 ಸೆಂಟ್ಸ್‌ಗಳ ಕುಸಿತ ಕಂಡು 1.5854 ಡಾಲರುಗಳನ್ನು ದಾಖಲಿಸಿದೆ. ನೈಸರ್ಗಿಕ ಅನಿಲದ ಆಗಸ್ಟ್ ವಿತರಣೆಯಲ್ಲಿ ಪ್ರತೀ 1,000 ಕ್ಯೂಬಿಕ್ ಅಡಿಗೆ 6 ಸೆಂಟ್ಸ್‌ಗಳ ಕುಸಿತ ಕಂಡು 3.369 ಡಾಲರುಗಳನ್ನು ನಮೂದಿಸಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಉದ್ಯೋಗ ಖಾತರಿ ಯೋಜನೆ ಸಮಪರ್ಕವಾಗಿಲ್ಲ: ಜೋಶಿ
ತೆರಿಗೆ ಕಡಿತ ರದ್ದುಪಡಿ ಇಲ್ಲ: ವಿತ್ತ ಸಚಿವ
ಆರ್ಥಿಕ ಕುಸಿತ ತಡೆಗೆ ಬೆಂಬಲ ಅಗತ್ಯ: ಪ್ರಧಾನಿ
ಏರ್ ಇಂಡಿಯಾ ಆಡಳಿತದಲ್ಲಿ ಮೇಜರ್ ಸರ್ಜರಿ: ಪಟೇಲ್
'ಪ್ರಾಧಿಕಾರದ 15 ವಿಮಾನ ನಿಲ್ದಾಣಗಳು ಲಾಭದಲ್ಲಿವೆ'
ಮೇತಾಸ್ ಒಪ್ಪಂದಕ್ಕೆ ಆಂಧ್ರ ಸರಕಾರ ಎಳ್ಳುನೀರು