ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಬರಲಿದೆ ಗೂಗಲ್‌ನಿಂದ ಕ್ರೋಮ್ ಆಪರೇಟಿಂಗ್ ಸಿಸ್ಟಂ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬರಲಿದೆ ಗೂಗಲ್‌ನಿಂದ ಕ್ರೋಮ್ ಆಪರೇಟಿಂಗ್ ಸಿಸ್ಟಂ
ವಿಂಡೋಸ್ ನಿರ್ಮಾತೃ ಸಾಫ್ಟ್‌ವೇರ್ ದೈತ್ಯ ಮೈಕ್ರೋಸಾಫ್ಟ್ ಕಾರ್ಪೊರೇಷನ್‌ಗೆ ಸಡ್ಡು ಹೊಡೆದಿರುವ ಗೂಗಲ್ ಶೀಘ್ರದಲ್ಲೇ ತನ್ನ ಉಚಿತ ಆಪರೇಟಿಂಗ್ ಸಿಸ್ಟಂ ಬಿಡುಗಡೆ ಮಾಡುವುದಾಗಿ ಪ್ರಕಟಿಸಿದೆ.

ಪರ್ಸನಲ್ ಕಂಪ್ಯೂಟರ್‌ಗಳಿಗೆಂದು ರಚಿಸಲಾಗುವ ಇದನ್ನು ಗೂಗಲ್ ಕ್ರೋಮ್ ಆಪರೇಟಿಂಗ್ ಸಿಸ್ಟಂ ಎಂದು ಕರೆಯಲಾಗಿದೆ. ಪ್ರಮುಖವಾಗಿ ನೋಟ್‌ಬುಕ್ ಕಂಪ್ಯೂಟರ್‌ಗಳನ್ನು ಗುರಿಯಿರಿಸಿರುವ ಗೂಗಲ್ ವೇಗಕ್ಕೆ ಹೆಚ್ಚಿನ ಒತ್ತು ಕೊಡಲಿದೆ. ಅಲ್ಲದೆ ಕೆಲವೇ ಸೆಕುಂಡುಗಳಲ್ಲಿ ವೆಬ್‌ಸೈಟ್ ವೀಕ್ಷಣೆಗೆ ಸಾಧ್ಯವಾಗುವಂತೆ ಸಾಫ್ಟ್‌ವೇರ್ ರೂಪಿಸುತ್ತೇವೆ ಎಂದು ಗೂಗಲ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಗೂಗಲ್ ಕ್ರೋಮ್ ಬ್ರೌಸರನ್ನು ಆಧರಿಸಿದ ಗೂಗಲ್ ಆಪರೇಟಿಂಗ್ ಸಿಸ್ಟಂ ಆರಂಭದಲ್ಲಿ ಚಿಕ್ಕ ಲ್ಯಾಪ್‌ಟಾಪ್‌ಗಳನ್ನು ತಲುಪುವ ಗುರಿ ಹೊಂದಿದೆ ಎಂದು ಗೂಗಲ್‌ನ ಉತ್ಪಾದನಾ ವಿಭಾಗದ ಉಪಾಧ್ಯಕ್ಷ ಸುಂದರ್ ಪಿಚಾಯ್ ತಿಳಿಸಿದ್ದಾರೆ.

ಕ್ರೋಮ್ ಅಪರೇರಿಂಟ್ ಸಿಸ್ಟಂ ವೇಗವಾಗಿ, ಯಾವುದೇ ತ್ರಾಸವಿಲ್ಲದೆ ಮತ್ತು ಕೆಲವೇ ಸೆಕುಂಡುಗಳಲ್ಲಿ ಕಾರ್ಯಪ್ರವೃತ್ತವಾಗುವಂತೆ ರೂಪಿಸಲಾಗುತ್ತದೆ. ಅಲ್ಲದೆ ಎಲ್ಲಾ ವಿಧದ ವೈರಸ್‌ಗಳನ್ನು ತಡೆಯುವ ಸಾಮರ್ಥ್ಯವನ್ನು ಇದು ಹೊಂದಿರುತ್ತದೆ. ನಮ್ಮ ಗುರಿ ಹೆಚ್ಚಾಗಿ ವೆಬ್‌ಸೈಟ್ ವೀಕ್ಷಿಸುವವರು ಎಂದು ಸುಂದರ್ ವಿವರಿಸಿದ್ದಾರೆ.

2010ರ ಅಂತ್ಯದಲ್ಲಿ ಬಿಡುಗಡೆ ಮಾಡುವ ಭರವಸೆ ನೀಡಿರುವ ಗೂಗಲ್ ತನ್ನ ಕ್ರೋಮ್ ಆಪರೇಟಿಂಗ್ ಸಿಸ್ಟಂನಲ್ಲಿ ಲಿನಕ್ಸ್‌ನ ಕೆಲವು ಅಂಶಗಳನ್ನು ಹೊಂದಲಿದೆ. ಅದಕ್ಕಾಗಿ ಕಂಪನಿಯ ಜತೆ ಒಪ್ಪಂದವನ್ನೂ ಮಾಡಿಕೊಳ್ಳಲಿದೆ. ಈ ಆಪರೇಟಿಂಗ್ ಸಿಸ್ಟಂ ಎಕ್ಸ್86 ಮತ್ತು ಎಆರ್‌ಎಂ ಪ್ರೊಸೆಸರ್‌ಗಳನ್ನು ಹೊಂದಿರುವ ಕಂಪ್ಯೂಟರ್‌ಗಳಲ್ಲಿ ಕಾರ್ಯನಿರ್ವಹಿಸುತ್ತದೆ.

2008ರಲ್ಲಿ ಗೂಗಲ್ ಕ್ರೋಮ್ ಬ್ರೌಸರ್ ಬಿಡುಗಡೆ ಮಾಡಿ ಅಚ್ಚರಿ ಹುಟ್ಟಿಸಿದ್ದ ಗೂಗಲ್ ಮೊಬೈಲ್‌ಗಳಿಗಾಗಿ 'ಅನ್‌ಡ್ರಾಯ್ಡ್' ಎಂಬ ಆಪರೇಟಿಂಗ್ ಸಿಸ್ಟಂ ರೂಪಿಸಿದ್ದು, ಕ್ರೋಮ್ ಆಪರೇಟಿಂಗ್ ಸಿಸ್ಟಂಗಿಂತ ಅದು ಭಿನ್ನ ಎಂದು ಸ್ಪಷ್ಟಪಡಿಸಿದೆ.

ಪ್ರಸಕ್ತ ವಿಶ್ವದ ಶೇಕಡಾ 70ರಷ್ಟು ಕಂಪ್ಯೂಟರ್‌ಗಳಲ್ಲಿ ವಿಂಡೋಸ್ ಆಪರೇಟಿಂಗ್ ಸಿಸ್ಟಂ ಅಧಿಪತ್ಯ ಹೊಂದಿದೆ. ಉಳಿದ ಭಾಗವನ್ನು ಆಪಲ್ ಮತ್ತು ಲಿನಕ್ಸ್‌ಗಳು ಹೊಂದಿವೆ. ಆ ಸಾಲಿಗೆ ಮತ್ತೊಂದು ಸೇರ್ಪಡೆ ಗೂಗಲ್ ಕ್ರೋಮ್ ಆಪರೇಟಿಂಗ್ ಸಿಸ್ಟಂ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ವಿಮಾನ ನಿಲ್ದಾಣ ಒಪ್ಪಂದ ಉಳಿಸಿಕೊಂಡ ಮೇತಾಸ್
ಏರ್ ಇಂಡಿಯಾ ರಕ್ಷಣೆಗೆ ರತನ್ ಟಾಟಾ?
ತೈಲ ಬೆಲೆ ಪಾತಾಳದತ್ತ; ಬ್ಯಾರೆಲ್‌ಗೆ 62 ಡಾಲರ್
ಉದ್ಯೋಗ ಖಾತರಿ ಯೋಜನೆ ಸಮಪರ್ಕವಾಗಿಲ್ಲ: ಜೋಶಿ
ತೆರಿಗೆ ಕಡಿತ ರದ್ದುಪಡಿ ಇಲ್ಲ: ವಿತ್ತ ಸಚಿವ
ಆರ್ಥಿಕ ಕುಸಿತ ತಡೆಗೆ ಬೆಂಬಲ ಅಗತ್ಯ: ಪ್ರಧಾನಿ