ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಮೇ ತಿಂಗಳಲ್ಲಿ ಶೇ.2.7ರ ಉದ್ಯಮ ಪ್ರಗತಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮೇ ತಿಂಗಳಲ್ಲಿ ಶೇ.2.7ರ ಉದ್ಯಮ ಪ್ರಗತಿ
ಆರ್ಥಿಕ ಚೇತರಿಕೆಯ ಲಕ್ಷಣಗಳನ್ನು ತೋರಿಸುತ್ತಿರುವ ಉದ್ಯಮವು ಮೇ ತಿಂಗಳ ವ್ಯವಹಾರದಲ್ಲಿ ಶೇಕಡಾ 2.7ರ ಪ್ರಗತಿ ದಾಖಲಿಸಿದೆ. ಆದರೆ ಕಳೆದ ವರ್ಷದ ಇದೇ ತಿಂಗಳಿಗೆ ಹೋಲಿಸಿದಾಗ ಶೇಕಡಾ 1.7ರ ಕುಸಿತ ಕಂಡಿದೆ. ಕಳೆದ ವರ್ಷದ ಮೇ ತಿಂಗಳಲ್ಲಿ ಶೇಕಡಾ 4.4ರ ಫಲಿತಾಂಶ ದಾಖಲಾಗಿತ್ತು.

ಉತ್ಪಾದನಾ ವಲಯವು ಮೇ ತಿಂಗಳಲ್ಲಿ 2.5 ಹಾಗೂ ಗಣಿಗಾರಿಕೆ ಮತ್ತು ಪವರ್ ಜನರೇಷನ್ ಕ್ಷೇತ್ರವು ಕ್ರಮವಾಗಿ 3.7 ಮತ್ತು 3.3ರ ಪ್ರಗತಿ ಸಾಧಿಸಿವೆ.

ಈ ಆರ್ಥಿಕ ವರ್ಷದ ಮೊದಲ ತಿಂಗಳು ಏಪ್ರಿಲ್‌ನಲ್ಲಿ ಕೈಗಾರಿಕಾ ಪ್ರಕತಿಯು 1.2ರಷ್ಟು ದಾಖಲಾಗಿದೆ ಎಂದು ಸರಕಾರವು ಶುಕ್ರವಾರ ಬಿಡುಗಡೆ ಮಾಡಿರುವ ಕೈಗಾರಿಕಾ ಉತ್ಪಾದನಾ ವರದಿಯಲ್ಲಿ ತಿಳಿಸಿದೆ.

ಏಪ್ರಿಲ್-ಮೇ ತಿಂಗಳ ಒಟ್ಟು ಪ್ರಗತಿಯು ಶೇಕಡಾ 1.9ರಷ್ಟು ದಾಖಲಾಗಿದೆ. ಕಳೆದ ಬಾರಿ ಆರ್ಥಿಕ ಅವಧಿಯಲ್ಲಿ ಇದು ಶೇಕಡಾ 5.3ರನ್ನು ದಾಖಲಿಸಿತ್ತು.

ಬಳಕೆ ಆಧರಿತ ವರ್ಗೀಕರಣ ಐಐಪಿ ಪ್ರಕಾರ ಬಂಡವಾಳ ವಸ್ತುಗಳ ಉದ್ಯಮವು ಋಣಾತ್ಮಕ ಚಲನೆಯನ್ನು ಮುಂದುವರಿಸಿದ್ದು, ಪ್ರಸಕ್ತ ತಿಂಗಳಲ್ಲಿ ಶೇಕಡಾ 3.6ರ ಕುಸಿತ ದಾಖಲಿಸಿದೆ.

ರೆಫ್ರಿಜರೇಟರ್, ಟೆಲಿವಿಷನ್ ಮುಂತಾದುವುಗಳನ್ನೊಳಗೊಂಡ ಗೃಹೋಪಯೋಗಿ ಕ್ಷೇತ್ರವು ಗರಿಷ್ಠ ಶೇಕಡಾ 12.4ರ ಪ್ರಗತಿ ಸಾಧಿಸಿದೆ. 2008 ಮೇ ತಿಂಗಳಲ್ಲಿ ಇದರ ಪ್ರಮಾಣ ಶೇಕಡಾ 2.8ರಷ್ಟಿತ್ತು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ನನ್ನ ಗುರುತನ್ನೇ ಕಳೆದುಕೊಳ್ಳುತ್ತಿದ್ದೇನೆ: ನಿಲೇಕಣಿ
ಮುಂಬೈ-ಮಂಗಳೂರು ವಿಮಾನದಲ್ಲಿ 'ಓವರ್ ಲೋಡ್'!
ಭಾರತೀಯರು ಮಿಸ್ಡ್ ಕಾಲ್ ಸ್ಪೆಷಲಿಸ್ಟ್‌ಗಳಂತೆ..!
'ಸತ್ಯಂ' ಹಗರಣ ರೂವಾರಿಗಳಿಗೆ ಮಂಪರು ಪರೀಕ್ಷೆ
ಇನ್ಫೋಸಿಸ್ ತ್ರೈಮಾಸಿಕ ವರದಿ: ಶೇ.17ರ ಪ್ರಗತಿ
ಸತ್ಯಂ ಹಗರಣ: ಮಂಪರು ಪರೀಕ್ಷೆಗೆ ನ್ಯಾಯಾಲಯ ಸಮ್ಮತಿ