ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಡಾಲರ್ ವಿರುದ್ಧ 9 ಪೈಸೆಗಳ ಏರಿಕೆ ಕಂಡ ರೂಪಾಯಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಡಾಲರ್ ವಿರುದ್ಧ 9 ಪೈಸೆಗಳ ಏರಿಕೆ ಕಂಡ ರೂಪಾಯಿ
ಏಷಿಯನ್ ಶೇರು ಮಾರುಕಟ್ಟೆಗಳ ಪ್ರಭಾವ ಮತ್ತು ಬಂಡವಾಳ ಒಳಹರಿವಿನಿಂದಾಗಿ ಮಾರುಕಟ್ಟೆಯು ಗರಿಷ್ಠ ಮಟ್ಟದಲ್ಲೇ ಆರಂಭವಾಗುವ ನಿರೀಕ್ಷೆಗಳಿದ್ದ ಹೊರತಾಗಿಯೂ ರಫ್ತುದಾರರು ಡಾಲರು ವ್ಯವಹಾರದಲ್ಲಿ ಹೆಚ್ಚಿನ ಒಲವು ತೋರಿಸಿದ ಕಾರಣ ಶುಕ್ರವಾರ ಡಾಲರ್ ಎದುರು ರೂಪಾಯಿ 9 ಪೈಸೆಗಳ ಚೇತರಿಕೆ ಕಂಡಿದ್ದು, 48.61 ರೂಪಾಯಿಗಳನ್ನು ತಲುಪಿದೆ.

ಇತರ ದೇಶಗಳ ಮೌಲ್ಯಗಳೆದುರೂ ಡಾಲರ್ ಕುಸಿತ ಕಂಡದ್ದು ಕೂಡ ಭಾರತೀಯ ರೂಪಾಯಿ ಸುಧಾರಣೆಗೆ ಕಾರಣವಾಗಿದೆ.

ಇಂಟರ್‌ಬ್ಯಾಂಕ್ ಫಾರಿನ್ ಎಕ್ಸ್‌ಚೇಂಜ್ (ಫಾರೆಕ್ಸ್) ಮಾರುಕಟ್ಟೆಯ ದೇಶೀಯ ಘಟಕವು ಪ್ರತೀ ಡಾಲರ್‌ಗೆ 48.61 ರೂಪಾಯಿಗಳನ್ನು ದಾಖಲಿಸಿದ್ದನ್ನು ತಿಳಿಸಿದೆ.

ಗುರುವಾರದ ವ್ಯವಹಾರದಲ್ಲಿ 48.70/72 ರೂಪಾಯಿಗಳನ್ನು ದಾಖಲಿಸಿದ್ದ ಮಾರುಕಟ್ಟೆ ಶುಕ್ರವಾರದ ವ್ಯವಹಾರದಲ್ಲಿ ಒಂಬತ್ತು ಪೈಸೆಗಳ ಏರಿಕೆ ಕಂಡಿದೆ. ಮುಂಬೈ ಶೇರು ಮಾರುಕಟ್ಟೆಯು ಫ್ಲಾಟ್ ಮುಕ್ತಾಯ ಕಂಡ ಕಾರಣ ಗುರುವಾರ ರೂಪಾಯಿಯು ಡಾಲರ್ ವಿರುದ್ಧ 18 ಪೈಸೆಗಳ ಏರಿಕೆ ದಾಖಲಿಸಿತ್ತು.

ಏಷಿಯನ್ ಮಾರುಕಟ್ಟೆ ಸೇರಿದಂತೆ ಜಪಾನ್ ಶೇರು ಮೌಲ್ಯಗಳು ಕೂಡ ಇಂದು ಗರಿಷ್ಠ ಮಟ್ಟದಲ್ಲೇ ಆರಂಭ ಕಂಡವು. ಬೆಂಚ್‌ಮಾರ್ಕ್ ನಿಕ್ಕಿ-225 ಸೂಚ್ಯಂಕವು 71.48 ಅಂಕಗಳ ಏರಿಕೆ ದಾಖಲಿಸಿ ಬೆಳಗ್ಗಿನ ವ್ಯವಹಾರದಲ್ಲಿ 9.362.52 ಅಂಕಗಳನ್ನು ದಾಖಲಿಸಿತ್ತು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮೇ ತಿಂಗಳಲ್ಲಿ ಶೇ.2.7ರ ಉದ್ಯಮ ಪ್ರಗತಿ
ನನ್ನ ಗುರುತನ್ನೇ ಕಳೆದುಕೊಳ್ಳುತ್ತಿದ್ದೇನೆ: ನಿಲೇಕಣಿ
ಮುಂಬೈ-ಮಂಗಳೂರು ವಿಮಾನದಲ್ಲಿ 'ಓವರ್ ಲೋಡ್'!
ಭಾರತೀಯರು ಮಿಸ್ಡ್ ಕಾಲ್ ಸ್ಪೆಷಲಿಸ್ಟ್‌ಗಳಂತೆ..!
'ಸತ್ಯಂ' ಹಗರಣ ರೂವಾರಿಗಳಿಗೆ ಮಂಪರು ಪರೀಕ್ಷೆ
ಇನ್ಫೋಸಿಸ್ ತ್ರೈಮಾಸಿಕ ವರದಿ: ಶೇ.17ರ ಪ್ರಗತಿ