ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಡಿಸೆಂಬರ್‌ನಲ್ಲಿ ವಿಶ್ವ ಹೂಡಿಕೆದಾರರ ಸಮಾವೇಶ: ನಿರಾಣಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಡಿಸೆಂಬರ್‌ನಲ್ಲಿ ವಿಶ್ವ ಹೂಡಿಕೆದಾರರ ಸಮಾವೇಶ: ನಿರಾಣಿ
ಮುಂದಿನ ಡಿಸೆಂಬರ್‌ನಲ್ಲಿ ನಡೆಯಲಿರುವ ವಿಶ್ವ ಹೂಡಿಕೆದಾರರ ಸಮಾವೇಶಕ್ಕೆ ಸರ್ಕಾರ ಎಲ್ಲಾ ಸಿದ್ಧತೆಗಳನ್ನು ನಡೆಸಿದೆ ಎಂದು ಬೃಹತ್ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಶ್ವ ಹೂಡಿಕೆದಾರರ ಸಮಾವೇಶವನ್ನು ಬರುವ ಡಿಸೆಂಬರಿನಲ್ಲಿ ನಡೆಸಲು ಈಗಾಗಲೇ ತೀರ್ಮಾನಿಸಲಾಗಿದೆ. ಅದಕ್ಕಾಗಿ ಭರದ ಸಿದ್ಧತೆಗಳು ನಡೆದಿವೆ ಎಂದು ತಿಳಿಸಿದ್ದಾರೆ.

ಈ ಸಮಾವೇಶದ ದಿನ ನಿಗದಿಪಡಿಸುವ ಸಂಬಂಧ ಶೀಘ್ರದಲ್ಲೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದರು.

ಇತ್ತೀಚೆಗೆ ತಮ್ಮ ನೇತೃತ್ವದಲ್ಲಿ ಜರ್ಮನಿಗೆ ನೀಡಿದ ಭೇಟಿ ಫಲಪ್ರದವಾಗಿದ್ದು, ರಾಜ್ಯಕ್ಕೆ ಸಾಕಷ್ಟು ಬಂಡವಾಳ ನೀಡುವ ಬಗ್ಗೆ ವಾಣಿಜ್ಯೋದ್ಯಮಿಗಳೊಂದಿಗೆ ಚರ್ಚೆ ನಡೆಸಲಾಗಿದೆ ಎಂದೂ ಅವರು ತಿಳಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಶೇಕಡಾ 8-9ರ ಪ್ರಗತಿ ವಿಶ್ವಾಸದಲ್ಲಿ ಪ್ರಧಾನಿ
ವಿದ್ಯುತ್‌ ನಿಗಮ: ರಾಜ್ಯಕ್ಕೆ 201 ಕೋಟಿ ಲಾಭ
ರೈಲ್ವೇ ಇಲಾಖೆಯಲ್ಲಿ 1.7 ಲಕ್ಷ ಹುದ್ದೆ ಖಾಲಿ?
ಇನ್ಫೋಸಿಸ್ ಉದ್ಯೋಗಿಗಳ ಸಂಖ್ಯೆ ಇಳಿಕೆ
ಡಾಲರ್ ವಿರುದ್ಧ 9 ಪೈಸೆಗಳ ಏರಿಕೆ ಕಂಡ ರೂಪಾಯಿ
ಮೇ ತಿಂಗಳಲ್ಲಿ ಶೇ.2.7ರ ಉದ್ಯಮ ಪ್ರಗತಿ