ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ರೈಲ್ವೇಯಲ್ಲಿ 1.7 ಲಕ್ಷ ಹುದ್ದೆಗಳು ಖಾಲಿ: ಮಮತಾ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರೈಲ್ವೇಯಲ್ಲಿ 1.7 ಲಕ್ಷ ಹುದ್ದೆಗಳು ಖಾಲಿ: ಮಮತಾ
ರೈಲ್ವೇ ಇಲಾಖೆಯಲ್ಲಿ 1.7 ಲಕ್ಷ ಹುದ್ದೆಗಳು ಖಾಲಿ ಬಿದ್ದಿದ್ದು, ಪ್ರಸಕ್ತ ನೇಮಕಾತಿ ಪ್ರಕ್ರಿಯೆ ಪರಿಶೀಲನೆ ನಂತರ ಆಯ್ಕೆ ಕಾರ್ಯವನ್ನು ಆರಂಭಿಸಲಾಗುತ್ತದೆ ಎಂದು ರೈಲ್ವೇ ಸಚಿವೆ ಮಮತಾ ಬ್ಯಾನರ್ಜಿ ಶುಕ್ರವಾರ ರಾಜ್ಯ ಸಭೆಗೆ ತಿಳಿಸಿದ್ದಾರೆ.

ಎದುರಾದ ಪ್ರಶ್ನೆಗಳಿಗೆ ಉತ್ತರಿಸುತ್ತಾ, ರೈಲ್ವೇ ನೇಮಕಾತಿ ಮಂಡಳಿಯನ್ನು ಪರಿಶೀಲನೆಗೊಳಪಡಿಸಲಾಗುತ್ತದೆ ಎಂದರು. "ನೇಮಕಾತಿ ಪ್ರಕ್ರಿಯೆಯನ್ನು ನಾವು ಪರಿಶೀಲನೆ ನಡೆಸಿದ ನಂತರವಷ್ಟೇ ಖಾಲಿ ಜಾಗಗಳನ್ನು ತುಂಬಲಾಗುತ್ತದೆ. ಆ ಪರಿಶೀಲನೆ ಮುಗಿಸಿದ ನಂತರ ನಾವು ಉಳಿದ ಕಾರ್ಯಗಳು ನೆರವೇರಲಿವೆ" ಎಂದು ತಿಳಿಸಿದ್ದಾರೆ.

ಮಹಾರಾಷ್ಟ್ರ, ಕರ್ನಾಟಕ ಮತ್ತು ಗುವಾಹತಿ ರೈಲ್ವೇ ನೇಮಕಾತಿ ಮಂಡಳಿಯ ಪರೀಕ್ಷೆಗಳಲ್ಲಿ ಸ್ಥಳೀಯ ಆಕಾಂಕ್ಷೆ ಹಾಗೂ ಸಮಸ್ಯೆಗಳಿದ್ದು, ಸಂಪೂರ್ಣ ಪ್ರಕ್ರಿಯೆಯನ್ನು ಪರಿಶೀಲನೆಗೊಳಪಡಿಸುತ್ತಿದ್ದೇವೆ ಎಂದು ಬ್ಯಾನರ್ಜಿ ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದರು.

ರೈಲ್ವೇ ಇಲಾಖೆಯ ಒಟ್ಟು ಉದ್ಯೋಗಿಗಳನ್ನು ಸಾಮರ್ಥ್ಯ 15,66,964. ಅವುಗಳಲ್ಲಿ 1,72,444 ಹುದ್ದೆಗಳು ಖಾಲಿ ಬಿದ್ದಿವೆ. ಹೆಚ್ಚಿನ ಹುದ್ದೆಗಳು ಖಾಲಿಯಿರುವುದು 'ಸಿ' ಗ್ರೂಪ್‌ನಲ್ಲಿ. ಇಲ್ಲಿ 1,12,566 ನೌಕರಿಗಳು ಇನ್ನೂ ಭರ್ತಿಯಾಗಿಲ್ಲ. 'ಡಿ' ಗುಂಪಿನಲ್ಲಿ 58,329 ಹಾಗೂ ಎ ಮತ್ತು ಬಿ ಗುಂಪಿನಲ್ಲಿ 1,549 ಹುದ್ದೆಗಳು ಖಾಲಿ ಇವೆ ಎಂದು ಅವರು ಹೇಳಿದ್ದಾರೆ.

ರೈಲ್ವೇಯಂತಹ ಯಾವುದೇ ಬೃಹತ್ ಸಂಸ್ಥೆಗಳಲ್ಲಿ ಕೆಲವು ಸಂದರ್ಭಗಳಲ್ಲಿ ಇಷ್ಟು ಪ್ರಮಾಣದ ಹುದ್ದೆಗಳು ಬಾಕಿ ಉಳಿಯುವುದು ಸಾಮಾನ್ಯ. ಈ ಬಗ್ಗೆ ಪ್ರಕಟಣೆ ಹೊರಡಿಸುತ್ತಾ ನೌಕರಿಗಳನ್ನು ಭರ್ತಿ ಮಾಡಿಕೊಳ್ಳುವುದು ನಿರಂತ್ರ ಪ್ರಕ್ರಿಯೆಯಾಗಿದೆ ಎಂದರು.

ಸಹಜ ನಿವೃತ್ತಿ, ಸ್ವಯಂ ನಿವೃತ್ತಿ, ಸಾವು, ಭಡ್ತಿ ಮತ್ತು ಹೊಸ ಹುದ್ದೆ ಸೃಷ್ಟಿಯಂತಹ ಕಾರಣಗಳಿಂದ ಹುದ್ದೆಗಳು ಖಾಲಿ ಉಳಿದಿವೆ. ಇವುಗಳನ್ನು ಬಹಿರಂಗ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಲಾಗುತ್ತದೆ ಎಂದು ಆಕೆ ವಿವರಿಸಿದ್ದಾರೆ.

ಪ್ರತ್ಯೇಕ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಬ್ಯಾನರ್ಜಿ, 'ಸಿ' ಗುಂಪಿನ ಪರಿಶಿಷ್ಟ ಜಾತಿಯ ಬ್ಯಾಕ್‌ಲಾಗ್ ಹುದ್ದೆಗಳಲ್ಲಿ 1,814, ಪರಿಶಿಷ್ಟ ಪಂಗಡದಲ್ಲಿ 1,688 ಹುದ್ದೆಗಳು ಖಾಲಿ ಇವೆ. 'ಎ' ಮತ್ತು 'ಬಿ' ಗುಂಪಿನ ಪರಿಶಿಷ್ಟ ಪಂಗಡ ಮತ್ತು ಜಾತಿ ವಿಭಾಗದ ಬ್ಯಾಕ್‌ಲಾಗ್ ಹುದ್ದೆಗಳು ಖಾಲಿಯಾಗಿಲ್ಲ ಎಂದು ತಿಳಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಡಿಸೆಂಬರ್‌ನಲ್ಲಿ ವಿಶ್ವ ಹೂಡಿಕೆದಾರರ ಸಮಾವೇಶ: ನಿರಾಣಿ
ಶೇಕಡಾ 8-9ರ ಪ್ರಗತಿ ವಿಶ್ವಾಸದಲ್ಲಿ ಪ್ರಧಾನಿ
ವಿದ್ಯುತ್‌ ನಿಗಮ: ರಾಜ್ಯಕ್ಕೆ 201 ಕೋಟಿ ಲಾಭ
ರೈಲ್ವೇ ಇಲಾಖೆಯಲ್ಲಿ 1.7 ಲಕ್ಷ ಹುದ್ದೆ ಖಾಲಿ?
ಇನ್ಫೋಸಿಸ್ ಉದ್ಯೋಗಿಗಳ ಸಂಖ್ಯೆ ಇಳಿಕೆ
ಡಾಲರ್ ವಿರುದ್ಧ 9 ಪೈಸೆಗಳ ಏರಿಕೆ ಕಂಡ ರೂಪಾಯಿ