ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಎಸ್‌ಬಿಐನಿಂದ 154 ಶಾಖೆ, 1,540 ಎಟಿಎಂ..!
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಎಸ್‌ಬಿಐನಿಂದ 154 ಶಾಖೆ, 1,540 ಎಟಿಎಂ..!
ದೇಶಾದ್ಯಂತ ಏಕಕಾಲದಲ್ಲಿ 154 ಹೊಸ ಶಾಖೆಗಳು ಹಾಗೂ 1,540 ಎಟಿಎಂಗಳನ್ನು ತೆರೆಯುವ ಮೂಲಕ ಭಾರತೀಯ ಸ್ಟೇಟ್ ಬ್ಯಾಂಕ್ ಭಾನುವಾರ ದಾಖಲೆಯನ್ನೇ ಸೃಷ್ಟಿಸಲಿದೆ.

ದೇಶದ ಅತೀ ದೊಡ್ಡ ಸಾಲದಾತ ಭಾರತೀಯ ಸ್ಟೇಟ್ ಬ್ಯಾಂಕ್ ಈಗಾಗಲೇ 11,657 ಶಾಖೆಗಳು ಹಾಗೂ 9,502 ಎಟಿಎಂಗಳನ್ನು ಹೊಂದಿದ್ದು, ಆ ಸಂಖ್ಯೆ ಭಾನುವಾರ ಕ್ರಮವಾಗಿ 11,811 ಮತ್ತು 11,042ಕ್ಕೇರಲಿದೆ.

ಎಸ್‌ಬಿಐ ಭಾನುವಾರ ತನ್ನ 14 ಪ್ರಾದೇಶಿಕ ವಲಯಗಳಲ್ಲಿ ತಲಾ 11 ಶಾಖೆಗಳು ಹಾಗೂ 11 ಎಟಿಎಂಗಳನ್ನು ತೆರಯುವ ಮೂಲಕ ದಾಖಲೆಯನ್ನೇ ನಿರ್ಮಿಸಲಿದೆ. ಪ್ರಸಕ್ತ ಆರ್ಥಿಕ ಅವಧಿಯಲ್ಲಿ ಸಾವಿರಕ್ಕಿಂತಲೂ ಹೆಚ್ಚು ಶಾಖೆಗಳನ್ನು ತೆರೆಯುವ ಉದ್ದೇಶ ಬ್ಯಾಂಕ್‌ನದ್ದು.

ಸಂಸತ್ತಿಗೆ ಆಯ್ಕೆಯಾದ ಕ್ಷೇತ್ರ ಪಶ್ಚಿಮ ಬಂಗಾಲದ ಮುರ್ಷೀದ್‌ಬಾದ್ ಜಿಲ್ಲೆಯ ಒಮರಪುರದಲ್ಲಿನ ಶಾಖೆಯನ್ನು ಕೇಂದ್ರ ವಿತ್ತ ಸಚಿವ ಪ್ರಣಬ್ ಮುಖರ್ಜಿ ಉದ್ಘಾಟಿಸುವ ಮೂಲಕ ಭಾನುವಾರ ಈ ದಾಖಲೆ ನಿರ್ಮಾಣವಾಗಲಿದೆ.

ಕಳೆದ ವರ್ಷದ ಮಾರ್ಚ್ 9ರಂದು ಕೇಂದ್ರ ಹಣಕಾಸು ಸಚಿವ ಪಿ. ಚಿದಂಬರಂ ತಮಿಳುನಾಡಿನ ಶಿವಗಂಗಾ ಜಿಲ್ಲೆಯ ಪದುವಾಯಲ್‌ನಲ್ಲಿ ಭಾರತೀಯ ಸ್ಟೇಟ್ ಬ್ಯಾಂಕಿನ 10,000ನೇ ಶಾಖೆಯನ್ನು ಉದ್ಘಾಟಿಸಿದ್ದರು. ಅದು ಅವರು ಸಂಸತ್ತಿಗೆ ಗೆದ್ದು ಬಂದಿದ್ದ ಕ್ಷೇತ್ರವಾಗಿತ್ತು. ಆ ದಿನ ಬ್ಯಾಂಕ್ ದೇಶದಾದ್ಯಂತ 101 ಶಾಖೆಗಳನ್ನು ತೆರೆದಿತ್ತು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ರೈಲ್ವೇಯಲ್ಲಿ 1.7 ಲಕ್ಷ ಹುದ್ದೆಗಳು ಖಾಲಿ: ಮಮತಾ
ಡಿಸೆಂಬರ್‌ನಲ್ಲಿ ವಿಶ್ವ ಹೂಡಿಕೆದಾರರ ಸಮಾವೇಶ: ನಿರಾಣಿ
ಶೇಕಡಾ 8-9ರ ಪ್ರಗತಿ ವಿಶ್ವಾಸದಲ್ಲಿ ಪ್ರಧಾನಿ
ವಿದ್ಯುತ್‌ ನಿಗಮ: ರಾಜ್ಯಕ್ಕೆ 201 ಕೋಟಿ ಲಾಭ
ರೈಲ್ವೇ ಇಲಾಖೆಯಲ್ಲಿ 1.7 ಲಕ್ಷ ಹುದ್ದೆ ಖಾಲಿ?
ಇನ್ಫೋಸಿಸ್ ಉದ್ಯೋಗಿಗಳ ಸಂಖ್ಯೆ ಇಳಿಕೆ