ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಅಂತಾರಾಷ್ಟ್ರೀಯ ಸೇವೆ ವಿಸ್ತರಿಸಲಿರುವ ಕಿಂಗ್‌ಫಿಶರ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಂತಾರಾಷ್ಟ್ರೀಯ ಸೇವೆ ವಿಸ್ತರಿಸಲಿರುವ ಕಿಂಗ್‌ಫಿಶರ್
ಈ ವರ್ಷ ತನ್ನ ಜಾಗತಿಕ ಜಾಲಕ್ಕೆ ಎಂಟು ನೂತನ ಅಂತಾರಾಷ್ಟ್ರೀಯ ಮಾರ್ಗಗಳನ್ನು ಸೇರ್ಪಡೆಗೊಳಿಸುವ ಮೂಲಕ ವಿಜಯ ಮಲ್ಯ ಮಾಲಕತ್ವದ ಕಿಂಗ್‌ಫಿಶರ್ ವಿಮಾನಯಾನ ಸಂಸ್ಥೆ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಲಿದೆ.

ಮುಂಬೈ - ಸಿಂಗಾಪುರ ಮತ್ತು ಮುಂಬೈ - ಹಾಂಕಾಂಗ್ ನಡುವೆ ಸೆಪ್ಟೆಂಬರ್ 16ರಿಂದ ಕಿಂಗ್‌ಫಿಶರ್ ವಿಮಾನಗಳು ಹಾರಾಟ ಆರಂಭಿಸಲಿವೆ. ಈ ಎರಡೂ ಮಾರ್ಗಗಳಲ್ಲಿ ಎ330-220 ಏರ್‌ಬಸ್ ವಿಮಾನಗಳ ನೇರ ಸೇವೆಗಳನ್ನು ಒದಗಿಸಲಾಗುತ್ತದೆ ಎಂದು ಕಂಪನಿಯ ವಕ್ತಾರರು ಶನಿವಾರ ತಿಳಿಸಿದ್ದಾರೆ.

ಉಳಿದಂತೆ ಹಾರಾಟ ಆರಂಭಿಸಲಿರುವ ಈ ಸಂಸ್ಥೆಯ ಹೊಸ ಆರು ಮಾರ್ಗಗಳು ದೆಹಲಿ - ಲಂಡನ್ ಹೀತ್ರೂ, ದೆಹಲಿ - ಬ್ಯಾಂಕಾಕ್, ದೆಹಲಿ - ದುಬೈ, ಮುಂಬೈ - ಬ್ಯಾಂಕಾಕ್, ಮುಂಬೈ - ದುಬೈ ಮತ್ತು ಮುಂಬೈ - ಕೊಲೊಂಬೊ ಎಂದು ಪ್ರಕಟಿಸಲಾಗಿದೆ.

ಈ ಮಾರ್ಗಗಳ ವಿಮಾನ ಹಾರಾಟವನ್ನು ಅಕ್ಟೋಬರ್ ತಿಂಗಳಲ್ಲಿ ಚಳಿಗಾಲದ ಹೊತ್ತಿಗೆ ಆರಂಭಿಸಲಾಗುತ್ತದೆ. ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಆರು ಮಾರ್ಗಗಳಿಗೆ ಇನ್ನಷ್ಟೇ ಅನುಮತಿ ನೀಡಬೇಕಾಗಿದೆ ಎಂದು ವಕ್ತಾರರು ತಿಳಿಸಿದ್ದಾರೆ.

ಅಲ್ಲದೆ ಆಗಸ್ಟ್ ಹೊತ್ತಿಗೆ ತನ್ನ ಕಡಿಮೆ ಪ್ರಯಾಣ ದರದ ಕಿಂಗ್‌ಫಿಶರ್ ರೆಡ್ ಸೇವೆಯನ್ನು ಕೊಲ್ಕತ್ತಾ - ಬ್ಯಾಂಕಾಕ್ ಮಾರ್ಗದಲ್ಲಿ ಆರಂಭಿಸಲಾಗುತ್ತದೆ ಎಂದು ಕಂಪನಿಯ ವೆಬ್‌ಸೈಟ್‌‌ನಲ್ಲಿ ಪ್ರಕಟಿಸಲಾಗಿದೆ.

ಯಾವುದೇ ಬಿಸಿನೆಸ್ ಕ್ಲಾಸ್ ಸೀಟುಗಳನ್ನು ಹೊಂದಿರದ ಕಿಂಗ್‌ಫಿಶರ್ ರೆಡ್ ವಿಮಾನವು ಕೊಲ್ಕತ್ತಾ - ಬ್ಯಾಂಕಾಕ್ ಮಧ್ಯೆ ಆಗಸ್ಟ್ 14ರಿಂದ ದಿನಂಪ್ರತಿ ಹಾರಾಟ ನಡೆಸಲಿದೆ.

ಕೊಲ್ಕತ್ತಾ- ಬ್ಯಾಂಕಾಕ್ ಮಾರ್ಗವು ಕಿಂಗ್‌ಫಿಶರ್ ಸಂಸ್ಥೆಯ ಐದನೇ ಅಂತಾರಾಷ್ಟ್ರೀಯ ಅಗ್ಗ ಪ್ರಯಾಣ ದರದ ವಿಮಾನವಾಗಲಿದೆ. ಬೆಂಗಳೂರು - ದುಬೈ, ಬೆಂಗಳೂರು - ಕೊಲೊಂಬೊ, ಚೆನ್ನೈ - ಕೊಲೊಂಬೊ ಮತ್ತು ಕೊಲ್ಕತ್ತಾ - ಢಾಕಾ ನಡುವೆ ಈಗಾಗಲೇ ಅಗ್ಗ ಪ್ರಯಾಣ ದರದ ವಿಮಾನಗಳನ್ನು ಕಿಂಗ್‌ಫಿಶರ್ ಹಾರಾಟ ನಡೆಸುತ್ತಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಎಸ್‌ಬಿಐನಿಂದ 154 ಶಾಖೆ, 1,540 ಎಟಿಎಂ..!
ರೈಲ್ವೇಯಲ್ಲಿ 1.7 ಲಕ್ಷ ಹುದ್ದೆಗಳು ಖಾಲಿ: ಮಮತಾ
ಡಿಸೆಂಬರ್‌ನಲ್ಲಿ ವಿಶ್ವ ಹೂಡಿಕೆದಾರರ ಸಮಾವೇಶ: ನಿರಾಣಿ
ಶೇಕಡಾ 8-9ರ ಪ್ರಗತಿ ವಿಶ್ವಾಸದಲ್ಲಿ ಪ್ರಧಾನಿ
ವಿದ್ಯುತ್‌ ನಿಗಮ: ರಾಜ್ಯಕ್ಕೆ 201 ಕೋಟಿ ಲಾಭ
ರೈಲ್ವೇ ಇಲಾಖೆಯಲ್ಲಿ 1.7 ಲಕ್ಷ ಹುದ್ದೆ ಖಾಲಿ?