ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಚಿನ್ನ ಬೆಲೆಯಲ್ಲಿ 20 ರೂ. ಏರಿಕೆ; ಬೆಳ್ಳಿ ಕುಸಿತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಚಿನ್ನ ಬೆಲೆಯಲ್ಲಿ 20 ರೂ. ಏರಿಕೆ; ಬೆಳ್ಳಿ ಕುಸಿತ
ಜಾಗತಿಕ ಪ್ರಭಾವದಿಂದ ಕಡಿಮೆ ಬೆಲೆಯ ಖರೀದಿಗೆ ಮುಗಿ ಬಿದ್ದ ಕಾರಣ ರಾಜಧಾನಿಯ ಚಿನಿವಾರ ಪೇಟೆಯು ಶನಿವಾರ ಚೇತರಿಕೆ ಕಂಡಿದ್ದು, ಕಳೆದೆರಡು ದಿನಗಳಿಂದ ಕಂಡಿದ್ದ ಕುಸಿತವನ್ನು ತೊಡೆದು ಹಾಕಿ 20 ರೂಪಾಯಿಯಂತೆ 10 ಗ್ರಾಂಗಳಿಗೆ 14,710 ರೂಪಾಯಿಗಳನ್ನು ದಾಖಲಿಸಿದೆ.

ಆದರೆ ಮಾರಾಟದ ಒತ್ತಡವನ್ನೆದುರಿಸಿದ ಬೆಳ್ಳಿ ಬೆಲೆಯು 200 ರೂಪಾಯಿಗಳ ಕುಸಿತ ಕಂಡು ಪ್ರತೀ ಕಿಲೋ ಗ್ರಾಂವೊಂದಕ್ಕೆ 21,400 ರೂಪಾಯಿಗಳನ್ನು ದಾಖಲಿಸಿತು.

ಹಿಂದಿನ ದಿನದಾಂತ್ಯದಲ್ಲಿನ ಅಮೆರಿಕನ್ ಮಾರುಕಟ್ಟೆಯ ಪ್ರಭಾವಕ್ಕೊಳಗಾದ ದಾಸ್ತಾನುದಾರರು ಮತ್ತು ಆಭರಣ ತಯಾರಿಕೆದಾರರು ಅಸ್ತಿತ್ವದಲ್ಲಿದ್ದ ಕನಿಷ್ಠ ಬೆಲೆಗೆ ಖರೀದಿಸಲು ಮುಗಿ ಬಿದ್ದ ಕಾರಣ ಚಿನ್ನದ ಬೆಲೆಯಲ್ಲಿ ಸುಧಾರಣೆ ಕಂಡಿದೆ ಎಂದು ಮಾರುಕಟ್ಟೆ ತಜ್ಞರು ತಿಳಿಸಿದ್ದಾರೆ.

ಕಳೆದೆರಡು ವ್ಯವಹಾರ ಅವಧಿಗಳಲ್ಲಿ ಋಣಾತ್ಮಕ ಚಲನೆಯನ್ನೇ ತೋರಿದ್ದ ಉತ್ಕೃಷ್ಟ ಚಿನ್ನ ಮತ್ತು ಆಭರಣಗಳ ಬೆಲೆಯಲ್ಲಿ 20 ರೂಪಾಯಿಗಳ ಏರಿಕೆ ಕಂಡಿದ್ದು, ಪ್ರತೀ 10 ಗ್ರಾಂಗಳಿಗೆ 14,710 ಹಾಗೂ 14,560 ರೂಪಾಯಿಗಳನ್ನು ಕ್ರಮವಾಗಿ ದಾಖಲಿಸಿದೆ. ಪವನ್ ಚಿನ್ನವು ಯಾವುದೇ ಬದಲಾವಣೆಯಿಲ್ಲದೆ ಎಂಟು ಗ್ರಾಂಗಳಿಗೆ 12,300 ರೂಪಾಯಿಯಲ್ಲೇ ನೀರಸವಾಗಿ ಮುಂದುವರಿದಿದೆ.

ಮಾರಾಟದ ಒತ್ತಡದಲ್ಲೇ ಉಳಿದುಕೊಂಡಿರುವ ಚಿನ್ನ ಬೆಲೆಯು ತಲಾ 200 ರೂಪಾಯಿಗಳಂತೆ ಕುಸಿದು ಪ್ರತೀ ಕೆ.ಜಿ.ಗೆ 21,400 ರೂಪಾಯಿಗಳನ್ನು ಹಾಗೂ ವಾರದ ವಿತರಣೆಯಲ್ಲಿ 180 ರೂಪಾಯಿಗಳ ಕುಸಿತ ಕಂಡು 21,260 ರೂಪಾಯಿಗಳನ್ನು ದಾಖಲಿಸಿತು.

100 ಬೆಳ್ಳಿ ನಾಣ್ಯಗಳು ಮಾರುಕಟ್ಟೆಯಲ್ಲಿ 28,800ಕ್ಕೆ ಖರೀದಿ ಹಾಗೂ 28,900ರ ಮಾರಾಟ ಅಂಶವನ್ನು ನಮೂದಿಸಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಅಂತಾರಾಷ್ಟ್ರೀಯ ಸೇವೆ ವಿಸ್ತರಿಸಲಿರುವ ಕಿಂಗ್‌ಫಿಶರ್
ಎಸ್‌ಬಿಐನಿಂದ 154 ಶಾಖೆ, 1,540 ಎಟಿಎಂ..!
ರೈಲ್ವೇಯಲ್ಲಿ 1.7 ಲಕ್ಷ ಹುದ್ದೆಗಳು ಖಾಲಿ: ಮಮತಾ
ಡಿಸೆಂಬರ್‌ನಲ್ಲಿ ವಿಶ್ವ ಹೂಡಿಕೆದಾರರ ಸಮಾವೇಶ: ನಿರಾಣಿ
ಶೇಕಡಾ 8-9ರ ಪ್ರಗತಿ ವಿಶ್ವಾಸದಲ್ಲಿ ಪ್ರಧಾನಿ
ವಿದ್ಯುತ್‌ ನಿಗಮ: ರಾಜ್ಯಕ್ಕೆ 201 ಕೋಟಿ ಲಾಭ