ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಜೆಟ್ ಏರ್‌ವೇಸ್ 50 ಇಂಜಿನಿಯರ್‌ಗಳ ವಜಾ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜೆಟ್ ಏರ್‌ವೇಸ್ 50 ಇಂಜಿನಿಯರ್‌ಗಳ ವಜಾ
ಖಾಸಗಿ ವಿಮಾನಯಾನ ಸಂಸ್ಥೆ ಜೆಟ್ ಏರ್‌ವೇಸ್ ತನ್ನ 50 ತರಬೇತು ಇಂಜಿನಿಯರ್‌ಗಳನ್ನು ವಜಾ ಮಾಡಿದ್ದು, ಖರ್ಚು- ವೆಚ್ಚಗಳಿಗೆ ಕಡಿವಾಣ ಹಾಕುವ ಭಾಗವಿದು ಎಂದು ಕಂಪನಿ ಶನಿವಾರ ತಿಳಿಸಿದೆ.

"ವೈಮಾನಿಕ ವಲಯದಲ್ಲಿನ ಕುಸಿತದಂತಹ ಸವಾಲುಗಳನ್ನು ಎದುರಿಸಲು ಮತ್ತು ನಷ್ಟ ಕಡಿಮೆ ಮಾಡಿಕೊಳ್ಳುವ ಸಲುವಾಗಿ ಕಿರಿಯ ಶಿಕ್ಷಾರ್ಥಿ ತಂತ್ರಜ್ಞರ ಸೇವೆಯನ್ನು ಮುಕ್ತಾಯಗೊಳಿಸುವ ನಿರ್ಧಾರಕ್ಕೆ ಜೆಟ್ ಏರ್‌ವೇಸ್ ಬಂದಿದೆ" ಎಂದು ವಿಮಾನಯಾನ ಸಂಸ್ಥೆಯ ವಕ್ತಾರೆ ರಾಗಿಣಿ ಛೋಪ್ರಾ ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾರೆ.

"ಈಗ ಕೆಲಸ ಕಳೆದುಕೊಂಡಿರುವವರು ನಿಗದಿತ ಅವಧಿಯ ಒಪ್ಪಂದದಡಿಯಲ್ಲಿ ಬರುವ ನೌಕರರಾಗಿದ್ದು, ಒಪ್ಪಂದದ ಪ್ರಕಾರ ಅವರಿಗೆ ನೊಟೀಸ್ ನೀಡಲಾಗಿದೆ ಮತ್ತು ಇಲ್ಲಿ ಕಾನೂನನ್ನು ಸ್ಪಷ್ಟವಾಗಿ ಪಾಲಿಸಲಾಗಿದೆ. ವಿಮಾನ ಯಾನದಲ್ಲಿನ ನಿರ್ವಹಣೆಯಲ್ಲಿ ವೆಚ್ಚ ಹೆಚ್ಚಿರುವ ಪರಿಣಾಮ ಇಂತಹ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯವಾಗಿತ್ತು" ಎಂದು ಆಕೆ ವಿವರಿಸಿದರು.

ಕಳೆದ ಆರ್ಥಿಕ ವರ್ಷದಲ್ಲಿ ಜೆಟ್ ಏರ್‌ವೇಸ್ 1,000 ಕೋಟಿ ರೂಪಾಯಿಗಳ (205 ಮಿಲಿಯನ್ ಡಾಲರ್) ನಷ್ಟ ಅನುಭವಿಸಿರುವುದನ್ನು ಪ್ರಕಟಿಸಿತ್ತು. ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಸಂಸ್ಥೆಯು 1,900 ನೌಕರರನ್ನು ವಜಾಗೊಳಿಸಿತ್ತಾದರೂ ನಂತರ ಕೇಂದ್ರ ಸರಕಾರದಿಂದ ತೀವ್ರ ಒತ್ತಡ ಬಂದ ಕಾರಣ ಅವರನ್ನು ಮರಳಿ ಸೇರಿಸಿಕೊಂಡಿತ್ತು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಚಿನ್ನ ಬೆಲೆಯಲ್ಲಿ 20 ರೂ. ಏರಿಕೆ; ಬೆಳ್ಳಿ ಕುಸಿತ
ಅಂತಾರಾಷ್ಟ್ರೀಯ ಸೇವೆ ವಿಸ್ತರಿಸಲಿರುವ ಕಿಂಗ್‌ಫಿಶರ್
ಎಸ್‌ಬಿಐನಿಂದ 154 ಶಾಖೆ, 1,540 ಎಟಿಎಂ..!
ರೈಲ್ವೇಯಲ್ಲಿ 1.7 ಲಕ್ಷ ಹುದ್ದೆಗಳು ಖಾಲಿ: ಮಮತಾ
ಡಿಸೆಂಬರ್‌ನಲ್ಲಿ ವಿಶ್ವ ಹೂಡಿಕೆದಾರರ ಸಮಾವೇಶ: ನಿರಾಣಿ
ಶೇಕಡಾ 8-9ರ ಪ್ರಗತಿ ವಿಶ್ವಾಸದಲ್ಲಿ ಪ್ರಧಾನಿ