ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಮುಂದುವರಿದ ತೈಲ ಅಧಃಪತನ: ಬ್ಯಾರೆಲ್‌ಗೀಗ 59 ಡಾಲರ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮುಂದುವರಿದ ತೈಲ ಅಧಃಪತನ: ಬ್ಯಾರೆಲ್‌ಗೀಗ 59 ಡಾಲರ್
ಕಚ್ಚಾ ತೈಲದ ಬೇಡಿಕೆ ಮತ್ತು ಜಾಗತಿಕ ಆರ್ಥಿಕ ಪ್ರಗತಿಯ ಬಗ್ಗೆ ಹೂಡಿಕೆದಾರರಲ್ಲಿ ಹತಾಶೆ ಹೆಚ್ಚಿದ ಕಾರಣ ಎರಡು ವಾರಗಳ ತೈಲ ಮಾರಾಟ ಅಧಃಪತನ ಮುಂದುವರಿದಿದ್ದು, ಏಷಿಯಾ ಮಾರುಕಟ್ಟೆಯಲ್ಲಿ ಶುಕ್ರವಾರ ಪ್ರತಿ ಬ್ಯಾರೆಲ್‌ ತೈಲಕ್ಕೆ 59 ಡಾಲರ್ ದಾಖಲಾಗಿದೆ.

ನ್ಯೂಯಾರ್ಕ್ ಮರ್ಕಂಟೈಲ್ ಎಕ್ಸ್‌ಚೇಂಜ್‌ನ ಸಿಂಗಾಪುರ ಎಲೆಕ್ಟ್ರಾನಿಕ್ ವ್ಯವಹಾರದಲ್ಲಿ ಆಗಸ್ಟ್ ತಿಂಗಳ ಬೆಂಚ್‌ಮಾರ್ಕ್ ಕಚ್ಚಾ ತೈಲ ವಿತರಣೆಯು 67 ಸೆಂಟ್ಸ್‌ಗಳ ಕುಸಿತ ಕಂಡು ಪ್ರತೀ ಬ್ಯಾರೆಲ್‌ಗೆ 59.22 ಡಾಲರುಗಳನ್ನು ದಾಖಲಿಸಿದೆ. ಶುಕ್ರವಾರ ಒಪ್ಪಂದವು 52 ಸೆಂಟ್ಸ್‌ಗಳಷ್ಟು ಕುಸಿದು 59.89ಕ್ಕೆ ಸ್ಥಿರಗೊಂಡಿತ್ತು.

ಅಮೆರಿಕಾದಲ್ಲಿ ಹೆಚ್ಚಿದ ನಿರುದ್ಯೋಗ ವರದಿ ಬಹಿರಂಗ ಮತ್ತು ಜಾಗತಿಕ ಆರ್ಥಿಕ ಪರಿಸ್ಥಿತಿಯು ಸುಧಾರಿಸುವ ಬಗ್ಗೆ ಹೂಡಿಕೆದಾರರ ನಿರಾಸೆಗೆ ಯೂರೋಪ್ ಕಿಡಿ ಹಚ್ಚಿದ ಕಾರಣ ಕಳೆದ ಜೂನ್ 30ರಿಂದ ಪ್ರತೀ ಬ್ಯಾರೆಲ್‌ ಕಚ್ಚಾ ತೈಲಕ್ಕೆ ಶೇಕಡು 19 ಅಥವಾ 14 ಡಾಲರುಗಳ ಕುಸಿತ ಕಂಡಿದೆ.

ಮತ್ತೊಂದು ನೈಮ್ಯಾಕ್ಸ್ ವ್ಯವಹಾರದಲ್ಲಿ ಆಗಸ್ಟ್ ತಿಂಗಳ ಗ್ಯಾಸೊಲಿನ್ ವಿತರಣೆಯು ಪ್ರತಿ ಗ್ಯಾಲನ್‌ಗೆ 1.64 ಡಾಲರುಗಳ ಸ್ಥಿರತೆ ದಾಖಲಿಸಿದೆ. ಆದರೆ ಹೀಟಿಂಗ್ ತೈಲವು 1.35 ಸೆಂಟ್ಸ್ ಕುಸಿತ ಕಂಡು 1.52 ಡಾಲರುಗಳನ್ನು ತಲುಪಿದೆ. ನೈಸರ್ಗಿಕ ಅನಿಲದ ಆಗಸ್ಟ್ ವಿತರಣೆಯು ಏಳು ಸೆಂಟ್ಸ್ ಕುಸಿದು 3.30 ಡಾಲರುಗಳನ್ನು ಪ್ರತೀ 1000 ಕ್ಯೂಬಿಕ್ ಅಡಿಗಳಿಗೆ ದಾಖಲಿಸಿದೆ.

ಲಂಡನ್‌ನಲ್ಲಿ ಐಸಿಇ ಫ್ಯೂಚರ್ಸ್ ಎಕ್ಸ್‌ಚೇಂಜ್ ಬ್ರೆಂಟ್ ದರ 61 ಸೆಂಟ್ಸ್ ಕುಸಿದಿದ್ದು, ಪ್ರತಿ ಬ್ಯಾರೆಲ್‌ಗೆ 59.91 ಡಾಲರ್ ದಾಖಲಿಸಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕಾವೇರಿ ಗೋದಾವರಿ ಸರಕಾರದ ಸ್ವತ್ತು: ದಿಯೋರಾ
ಜವಳಿ ರಫ್ತುವಿನಲ್ಲಿ ಶೇ.14ರಷ್ಟು ಇಳಿಕೆ
ದೇಶದಲ್ಲಿ ಸಿಂಗಾಪುರ ಅತ್ಯಧಿಕ ಬಂಡವಾಳ ಹೂಡಿಕೆ
ಐಸಿಐಸಿಐಯಿಂದ ಬೆಳೆ ವಿಮೆ ಯೋಜನೆ
ಗೊಬ್ಬರದ ಅಭಾವ: ಕೇಂದ್ರ
ಮ‌ೂಲಸೌಕರ್ಯ ಮೇಲ್ವಿಚಾರಣೆಗೆ ಸಮಿತಿ