ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಇದೀಗ ಚಾಲಕರಹಿತ ಪ್ರಯಾಣಿಕರ ವಿಮಾನದ ಸರದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಇದೀಗ ಚಾಲಕರಹಿತ ಪ್ರಯಾಣಿಕರ ವಿಮಾನದ ಸರದಿ
ಆಸ್ಟ್ರೇಲಿಯಾ ವಿಜ್ಞಾನಿಗಳು ಮತ್ತು ಅಮೆರಿಕಾದ ವೈಮಾನಿಕ ದೈತ್ಯ ಬೋಯಿಂಗ್ ಅಂದುಕೊಂಡಂತೇ ಎಲ್ಲವೂ ನಡೆದರೆ ಈಗಿರುವ ಪೈಲಟ್ ನಿಯಂತ್ರಿತ ವಿಮಾನಗಳ ಬದಲು ಚಾಲಕರಹಿತ ಪ್ರಯಾಣಿಕರ ವಿಮಾನವು ಆಗಸದಲ್ಲಿ ನಮ್ಮನ್ನೆಲ್ಲ ಹೊತ್ತೊಯ್ಯುವ ದಿನಗಳು ದೂರವಿಲ್ಲ.

ಈ ಚಾಲಕರಹಿತ ಪ್ರಯಾಣಿಕರ ವಿಮಾನ ಈಗ ಪ್ರಯೋಗದ ಹಂತದಲ್ಲಷ್ಟೇ ಇದೆ. ಹಾಗೊಂದು ವೇಳೆ ಯಶಸ್ವಿಯಾದರೆ ಮುಂದೊಂದು ದಿನ ವಿಮಾನಗಳಿಗೆ ಪೈಲಟ್‌ಗಳೇ ಅಗತ್ಯವಿರುವುದಿಲ್ಲ. ಅದಕ್ಕಿಂತಲೂ ಸಂತೋಷದ ವಿಚಾರವೆಂದರೆ ಯಾವುದೇ ಅವಘಡಗಳು ಪ್ರಯಾಣದ ಸಂದರ್ಭದಲ್ಲಿ ಘಟಿಸದಷ್ಟು ಸುರಕ್ಷಿತ ಎನ್ನುವುದು. ಈ ವಿಮಾನದ ಹಾರಾಟವನ್ನು ನೇರವಾಗಿ ಮಾನವ ನಿಯಂತ್ರಿಸುವುದಿಲ್ಲ.

ಸೀಟಲ್‌ನಲ್ಲಿನ ಪ್ರಯೋಗಾಲಯದಲ್ಲಿ ವಿಜ್ಞಾನಿಗಳು ಈಗಾಗಲೇ ಮಾನವರಹಿತ ವಿಮಾನಗಳ ಹಿಂಡನ್ನೇ ಹಾರಿಸಿ ಪರಿಶೀಲನೆ ನಡೆಸಿದ್ದಾರೆ. ಅವರು ನಿಶ್ಚಯಿಸಿದ ಮಟ್ಟದ ಕ್ಷಮತೆ ಮತ್ತು ಅಪಘಾತ ತಪ್ಪಿಸುವ ತಂತ್ರಜ್ಞಾನಗಳನ್ನು ಈಗಾಗಲೇ ವಿಮಾನಗಳಲ್ಲಿ ಅಳವಡಿಸಲಾಗಿದೆ. ಅದಕ್ಕಾಗಿ ಮುಂದುವರಿದ ತಂತ್ರಜ್ಞಾನಗಳನ್ನು ಬಳಸಿಕೊಳ್ಳಲಾಗಿದ್ದು ಪೈಲಟ್ ಚಾಲಿತ ವಿಮಾನಗಳ ಹಾರಾಟವನ್ನು ಅಂತಿಮವಾಗಿ ನಿಲ್ಲಿಸುವ ಸಾಮರ್ಥ್ಯ ಇದಕ್ಕಿದೆ ಎನ್ನುವುದು ವಿಜ್ಞಾನಿಗಳ ಭರವಸೆ.

ವಿಶ್ವದ ಮಾನವರಹಿತ ವಿಮಾನದ ಮೊತ್ತ ಮೊದಲ ಹಾರಾಟವನ್ನು ದಕ್ಷಿಣ ಕ್ವೀನ್ಸ್‌ಲೆಂಡ್‌ನ ಕಿಂಗಾರಾಯ್‌ನ ನಿಯಂತ್ರಿತ ಹಾರಾಟ ವಲಯದಲ್ಲಿ ಶೀಘ್ರದಲ್ಲೇ ನಡೆಸಲಾಗುತ್ತದೆ. ಅಗತ್ಯವಿರುವ ಎಲ್ಲಾ ತಂತ್ರಜ್ಞಾನ ಸಂದೇಶಗಳನ್ನು ಪ್ರಯೋಗಾಲಯದಲ್ಲಿ ಅಭಿವೃದ್ಧಿಪಡಿಸಿ ವಿಮಾನಕ್ಕೆ ಜೋಡಿಸಲಾಗಿದೆ ಎಂದು 'ಕೊರಿಯರ್ ಮೇಲ್' ಪತ್ರಿಕೆ ವರದಿ ಮಾಡಿದೆ.

ಪೈಲಟ್‌ನಿಂದ ನಡೆಸಲ್ಪಡುವ ಬೃಹತ್ ವಿಮಾನಗಳು ಹಾರಾಟ ನಡೆಸುವ ವಲಯದಲ್ಲೇ ಚಿಕ್ಕ ಚಾಲಕರಹಿತ ವಿಮಾನಗಳು ಹಾರಾಟ ನಡೆಸಲಿದ್ದು, ಆ ಮೂಲಕ ಈ ವಿಮಾನಗಳ ನಿರ್ವಹಣೆ ಸುರಕ್ಷಿತ ಎಂಬುದನ್ನು ತೋರಿಸಿಕೊಡಲಿದ್ದೇವೆ ಎಂದು ಕ್ವೀನ್ಸ್‌ಲೆಂಡ್ ಯುನಿವರ್ಸಿಟಿ ಮತ್ತು ವೈಮಾನಿಕ ದೈತ್ಯ ಬೋಯಿಂಗ್‌ಗಳು ತಿಳಿಸಿವೆ.

ಈಗಾಗಲೇ ಬೋಯಿಂಗ್ ಪ್ರಯೋಗಾಲಯದಲ್ಲಿ ನಾಲ್ಕು ರೋಟರ್‌ಗಳನ್ನು ಹೊಂದಿರುವ ಹತ್ತಾರು ಚಿಕ್ಕ ಚಾಲಕರಹಿತ ವಿಮಾನಗಳ ಪರೀಕ್ಷೆಯನ್ನು ಏಕಕಾಲದಲ್ಲಿ ನಡೆಸಲಾಗಿದೆ. ಇಲ್ಲಿ ಇಂಜಿನಿಯರ್‌ಗಳು ರೂಪಿಸಿದ ತಂತ್ರಜ್ಞಾನಗಳು ಸರಿಯಾಗಿ ನಿರ್ವಹಿಸುತ್ತಿವೆಯೇ ಮತ್ತು ಕಿಕ್ಕಿರಿದ ಹಾರಾಟ ವಲಯದಲ್ಲಿ ಸುರಕ್ಷತೆಯ ಮಟ್ಟ ಎಷ್ಟಿರುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಲಾಗಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮುಂದುವರಿದ ತೈಲ ಅಧಃಪತನ: ಬ್ಯಾರೆಲ್‌ಗೀಗ 59 ಡಾಲರ್
ಕಾವೇರಿ ಗೋದಾವರಿ ಸರಕಾರದ ಸ್ವತ್ತು: ದಿಯೋರಾ
ಜವಳಿ ರಫ್ತುವಿನಲ್ಲಿ ಶೇ.14ರಷ್ಟು ಇಳಿಕೆ
ದೇಶದಲ್ಲಿ ಸಿಂಗಾಪುರ ಅತ್ಯಧಿಕ ಬಂಡವಾಳ ಹೂಡಿಕೆ
ಐಸಿಐಸಿಐಯಿಂದ ಬೆಳೆ ವಿಮೆ ಯೋಜನೆ
ಗೊಬ್ಬರದ ಅಭಾವ: ಕೇಂದ್ರ