ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಕಡಿಮೆ ದರದಲ್ಲಿ 'ಮಗುವಿಗೊಂದು ಲ್ಯಾಪ್‌ಟಾಪ್'
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಡಿಮೆ ದರದಲ್ಲಿ 'ಮಗುವಿಗೊಂದು ಲ್ಯಾಪ್‌ಟಾಪ್'
ಲ್ಯಾಟಿನ್ ಅಮೆರಿಕಾ ಮತ್ತು ಆಫ್ರಿಕಾದ ಕೆಲವು ರಾಷ್ಟ್ರಗಳಲ್ಲಿ ಯಶಸ್ವಿಯಾದ ನಂತರ ಭಾರತದಲ್ಲೂ ತನ್ನ ಅಭಿಯಾನವನ್ನು ಆರಂಭಿಸಿರುವ ಅಮೆರಿಕಾ ಮೂಲದ ಸಾಮಾಜಿಕ ಸೇವಾ ಸಂಘಟನೆ 'ಮಗುವಿಗೊಂದು ಲ್ಯಾಪ್‌ಟಾಪ್' ಕಡಿಮೆ ದರದಲ್ಲಿ ಲ್ಯಾಪ್‌ಟಾಪ್‌ಗಳನ್ನು ವಿದ್ಯಾರ್ಥಿಗಳಿಗೆ ನೀಡಲಿದೆ.

ಉತ್ತಮ ಶಿಕ್ಷಣದ ಗುರಿ ಹೊಂದಿರುವ 'ವನ್ ಲ್ಯಾಪ್‌ಟಾಪ್ ಪರ ಚೈಲ್ಡ್' (ಒಎಲ್‌ಪಿಸಿ)ಯು ಶಾಲಾ ಮಕ್ಕಳಿಗಾಗಿ ವಿಶೇಷವಾಗಿ ಸಿದ್ಧಪಡಿಸಿದ ಲ್ಯಾಪ್‌ಟಾಪ್‌ಗಳನ್ನು ಕಡಿಮೆ ದರದಲ್ಲಿ ವಿತರಿಸುತ್ತದೆ.
OLPC Laptop
PR

"ಉತ್ತರ ಪ್ರದೇಶ, ಮಹಾರಾಷ್ಟ್ರ, ಕರ್ನಾಟಕ ಮತ್ತು ತಮಿಳುನಾಡುಗಳ 20 ಶಾಲೆಗಳಲ್ಲಿ 5ರಿಂದ 12 ವರ್ಷದವರೆಗಿನ ಮಕ್ಕಳಿಗೆ 1,000ಕ್ಕಿಂತಲೂ ಹೆಚ್ಚು ಲ್ಯಾಪ್‌ಟಾಪ್‌ಗಳನ್ನು ವಿತರಿಸಲಿದ್ದೇವೆ" ಎಂದು ಸೋಲನ್ ಜಿಲ್ಲೆಯ ಕಸೌಲಿಯಲ್ಲಿ ಮಾತನಾಡುತ್ತಾ ಒಎಲ್‌ಪಿಸಿ ಅಧ್ಯಕ್ಷ ಹಾಗೂ ಕಾರ್ಯನಿರ್ವಾಹಕ ಅಧಿಕಾರಿ ಸತೀಶ್ ಝಾ ತಿಳಿಸಿದ್ದಾರೆ.

ಈ ಯೋಜನೆಯನ್ನು ಹಿಮಾಚಲ ಪ್ರದೇಶ ಮತ್ತು ಇತರ ರಾಜ್ಯಗಳಲ್ಲೂ ಜಾರಿ ಮಾಡಲಾಗುತ್ತದೆ. 2009ರ ವರ್ಷಾಂತ್ಯದೊಳಗೆ ಮೂರು ಲಕ್ಷ ಲ್ಯಾಪ್‌ಟಾಪ್‌ಗಳನ್ನು ಹಂಚುವ ಯೋಜನೆ ತಮ್ಮ ಗುಂಪಿಗಿದೆ ಎಂದು ಝಾ ವಿವರಿಸಿದರು.

ಭಾರತದ ಪರಿಸ್ಥಿತಿಗೆ ಹೊಂದಿಕೊಳ್ಳುವಂತೆ ಲ್ಯಾಪ್‌ಟಾಪ್‌ಗಳನ್ನು ಸಿದ್ಧಪಡಿಸಲಾಗಿದೆ. ಒಂದು ಲ್ಯಾಪ್‌ಟಾಪ್‌ಗೆ ಕೇವಲ ಒಂದು ವಾಟ್ ವಿದ್ಯುತ್ ಸಾಕಾಗುತ್ತದೆ. ಸೂರ್ಯನ ಬೆಳಕಿನೆದರೂ ಪರದೆಯನ್ನು ಯಾವುದೇ ಅಡೆ ತಡೆಗಳಿಲ್ಲದೆ ವೀಕ್ಷಿಸಬಹುದು ಎನ್ನುವುದು ಇದರ ಮತ್ತೊಂದು ವಿಶೇಷತೆ.

ಕೇವಲ 11,000 ರೂಪಾಯಿಗಳಿಗೆ ಲ್ಯಾಪ್‌ಟಾಪನ್ನು ಒದಗಿಸಲಾಗುತ್ತದೆ ಎಂದು ಝಾ ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ. ಈ ಯೋಜನೆಗಾಗಿ ಮೈಕ್ರೋಸಾಫ್ಟ್, ನಾರ್ಟೆಲ್ ನೆಟ್‌ವರ್ಕ್ಸ್, ಹೆಡ್ ಹ್ಯಾಟ್, ಗೂಗಲ್ ಮತ್ತು ಸ್ಟಾರ್ ಕಾರ್ಪೊರೇಷನ್ ಸೇರಿದಂತೆ ಪ್ರಮುಖ ಸಂಸ್ಥೆಗಳು ಆರ್ಥಿಕ ನೆರವು ನೀಡುತ್ತಿವೆ.

ಲ್ಯಾಟಿನ್ ಅಮೆರಿಕಾ, ಆಫ್ರಿಕನ್ ದೇಶಗಳಾದ ಲಿಬಿಯಾ, ನೈಜೀರಿಯಾ, ರ‌್ವಾಂಡಾ ಹಾಗೂ ಪಾಕಿಸ್ತಾನ, ನೇಪಾಳಗಳಲ್ಲೂ ಲ್ಯಾಪ್‌ಟಾಪ್ ಯೋಜನೆ ಯಶಸ್ವಿಯಾಗಿದೆ ಎಂದು ಸಂಸ್ಥೆ ತಿಳಿಸಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಇದೀಗ ಚಾಲಕರಹಿತ ಪ್ರಯಾಣಿಕರ ವಿಮಾನದ ಸರದಿ
ಮುಂದುವರಿದ ತೈಲ ಅಧಃಪತನ: ಬ್ಯಾರೆಲ್‌ಗೀಗ 59 ಡಾಲರ್
ಕಾವೇರಿ ಗೋದಾವರಿ ಸರಕಾರದ ಸ್ವತ್ತು: ದಿಯೋರಾ
ಜವಳಿ ರಫ್ತುವಿನಲ್ಲಿ ಶೇ.14ರಷ್ಟು ಇಳಿಕೆ
ದೇಶದಲ್ಲಿ ಸಿಂಗಾಪುರ ಅತ್ಯಧಿಕ ಬಂಡವಾಳ ಹೂಡಿಕೆ
ಐಸಿಐಸಿಐಯಿಂದ ಬೆಳೆ ವಿಮೆ ಯೋಜನೆ