ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಹೆಚ್ಚಿದ ಬೇಡಿಕೆ; ಚಿನ್ನ, ಬೆಳ್ಳಿ ದರ ಏರಿಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹೆಚ್ಚಿದ ಬೇಡಿಕೆ; ಚಿನ್ನ, ಬೆಳ್ಳಿ ದರ ಏರಿಕೆ
ಶೇರು ಮಾರುಕಟ್ಟೆಯ ದುರ್ಬಲ ವಹಿವಾಟಿನ ಹೊರತಾಗಿಯೂ ದಾಸ್ತಾನುದಾರರು ಮತ್ತು ಆಭರಣ ತಯಾರಕರು ಚಿನಿವಾರ ಪೇಟೆಯತ್ತ ಸೋಮವಾರ ಆಸಕ್ತಿ ವಹಿಸಿದ ಕಾರಣ ಚಿನ್ನದ ಬೆಲೆಯಲ್ಲಿ 95 ರೂಪಾಯಿಗಳ ಏರಿಕೆ ಕಂಡಿದೆ.

ಪ್ರತೀ 10 ಗ್ರಾಂ ಚಿನ್ನಕ್ಕೆ ಇದೀಗ 14,805 ರೂಪಾಯಿಗಳು ದಾಖಲಾಗಿವೆ. ಉದ್ಯಮದ ಬೇಡಿಕೆಯ ಕಾರಣ ಬೆಳ್ಳಿ ದರವೂ ಪ್ರತೀ ಕೆ.ಜಿ.ಗೆ 100 ರೂಪಾಯಿ ಹೆಚ್ಚಾಗಿದ್ದು 21,500 ರೂಪಾಯಿಗಳನ್ನು ದಾಖಲಿಸಿದೆ.

ದಾಸ್ತಾನುದಾರರು ಮತ್ತು ಆಭರಣ ತಯಾರಕರು ಕೊಳ್ಳವಿಕೆಗೆ ಹೆಚ್ಚು ಆಸಕ್ತಿ ವಹಿಸಿದ ಕಾರಣ ಚಿನ್ನದ ಬೆಲೆ ಏರಿಕೆಯಾಯಿತು ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅವರ ಪ್ರಕಾರ ಕೆಲವು ಶೇರು ಪೇಟೆ ವ್ಯವಹಾರಸ್ಥರು ತಮ್ಮ ಹೂಡಿಕೆಯನ್ನು ಚಿನಿವಾರ ಪೇಟೆಯತ್ತ ವರ್ಗಾಯಿಸಿದ್ದಾರೆ. ಇದರಿಂದಾಗಿಯೇ ಉಕ್ಕಿನ ದರದಲ್ಲಿಯೂ ಏರಿಕೆ ಕಂಡಿದೆ ಎನ್ನುವುದು ಅವರ ಅಭಿಪ್ರಾಯ.

ಉತ್ಕೃಷ್ಟ ಚಿನ್ನ ಮತ್ತು ಆಭರಣ ಬೆಲೆಯಯಲ್ಲಿ 10 ಗ್ರಾಂಗಳಿಗೆ 95 ರೂಪಾಯಿಗಳಂತೆ ಹೆಚ್ಚಾಗಿದ್ದು, ಕ್ರಮವಾಗಿ 14,805 ಮತ್ತು 14,655 ರೂಪಾಯಿಗಳನ್ನು ದಾಖಲಿಸಿವೆ. ಪವನ್ ಚಿನ್ನಕ್ಕೆ 25 ರೂಪಾಯಿಗಳ ಏರಿಕೆಯಾಗಿದೆ. ಎಂಟು ಗ್ರಾಂಗಳ ಇಂದಿನ ದರ 12,325 ರೂಪಾಯಿ.

ದಾಸ್ತಾನುದಾರರು ಮತ್ತು ಕೈಗಾರಿಕಾ ಘಟಕಗಳನ್ನು ಆಕರ್ಷಿಸಿದ ಬೆಳ್ಳಿಯು ಕೂಡ 100 ರೂಪಾಯಿಗಳ ಏರಿಕೆಯನ್ನು ಪ್ರತಿ ಕೆ.ಜಿ.ಯಲ್ಲಿ ದಾಖಲಿಸಿದ್ದು, 21,500 ರೂಪಾಯಿಗಳನ್ನು ತಲುಪಿದೆ. ವಾರವನ್ನಾಧರಿಸಿದ ವಿತರಣೆಯಲ್ಲೂ 40 ರೂಪಾಯಿಗಳ ಏರಿಕೆಯಾಗಿದ್ದು, 21,300 ರೂಪಾಯಿಗಳನ್ನು ನಮೂದಿಸಿದೆ.

ಪ್ರತೀ 100 ಬೆಳ್ಳಿ ನಾಣ್ಯಗಳ ಖರೀದಿ 28,800 ಹಾಗೂ ಮಾರಾಟವು 28,900 ರೂಪಾಯಿಗಳನ್ನು ಮಾರುಕಟ್ಟೆ ದಾಖಲಿಸಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕಡಿಮೆ ದರದಲ್ಲಿ 'ಮಗುವಿಗೊಂದು ಲ್ಯಾಪ್‌ಟಾಪ್'
ಇದೀಗ ಚಾಲಕರಹಿತ ಪ್ರಯಾಣಿಕರ ವಿಮಾನದ ಸರದಿ
ಮುಂದುವರಿದ ತೈಲ ಅಧಃಪತನ: ಬ್ಯಾರೆಲ್‌ಗೀಗ 59 ಡಾಲರ್
ಕಾವೇರಿ ಗೋದಾವರಿ ಸರಕಾರದ ಸ್ವತ್ತು: ದಿಯೋರಾ
ಜವಳಿ ರಫ್ತುವಿನಲ್ಲಿ ಶೇ.14ರಷ್ಟು ಇಳಿಕೆ
ದೇಶದಲ್ಲಿ ಸಿಂಗಾಪುರ ಅತ್ಯಧಿಕ ಬಂಡವಾಳ ಹೂಡಿಕೆ