ಒಂದು ಲೀಟರ್ ಪೆಟ್ರೋಲ್‌ಗೆ ಇದೀಗ ವಿಧಿಸಲಾಗುತ್ತಿರುವ 44.63 ರೂಪಾಯಿಯಲ್ಲಿ ಹೆಚ್ಚು ಕಡಿಮೆ ಅರ್ಧದಷ್ಟು ರಾಷ್ಟ್ರೀಯ ತೆರಿಗೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ರಾಜ್ಯ ಸಚಿವ ಜಿತಿನ್ ಪ್ರಸಾದ್ ಸೋಮವಾರ ತಿಳಿಸಿದ್ದಾರೆ.
ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆಯೇರಿಕೆಯ ಹಿನ್ನಲೆಯಲ್ಲಿ ಇತ್ತೀಚೆಗಷ್ಟೇ ಕೇಂದ್ರ ಸರಕಾರವು ಪ್ರತೀ ಲೀಟರ್ ರಖಂ ಪೆಟ್ರೋಲ್‌ಗೆ 4 ಹಾಗೂ ಡೀಸೆಲ್‌ಗೆ 2 ರೂಪಾಯಿಗಳನ್ನು ಏರಿಕೆ ಮಾಡಿತ್ತು. ಇದರ ಪ್ರಕಾರ ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 44,63 ರೂಪಾಯಿ ಹಾಗೂ ಡೀಸೆಲ್ ಬೆಲೆ 32.87 ರೂಪಾಯಿಗಳಾಗಿತ್ತು.
ಪ್ರತೀ ಲೀಟರ್ ಪೆಟ್ರೋಲ್ ದರದಲ್ಲಿ 13.75 ಪೈಸೆ ಅಬಕಾರಿ ಸುಂಕ, 7.44 ರೂಪಾಯಿ ವ್ಯಾಟ್, 46 ಪೈಸೆ ಸೀಮಾಸುಂಕ ಒಳಗೊಂಡಿದೆ ಎಂದು ರಾಜ್ಯ ಸಭೆಗೆ ಪ್ರಸಾದ್ ತಿಳಿಸಿದ್ದಾರೆ. ಈ ಪ್ರಕಾರ ಪ್ರತೀ ಲೀಟರ್ ಪೆಟ್ರೋಲ್‌ನಲ್ಲಿ 21.65 ರೂಪಾಯಿಗಳು ಸರಕಾರಕ್ಕೆ ತೆರಿಗೆ ರೂಪದಲ್ಲಿ ಹೋಗುತ್ತದೆ.
ಡೀಸೆಲ್ ಬೆಲೆಯಲ್ಲಿ 8.11 ರೂಪಾಯಿಗಳ ಒಟ್ಟು ಸುಂಕವನ್ನು ವಿಧಿಸಲಾಗುತ್ತದೆ. ಇದು ಡೀಸೆಲ್ ಮಾರಾಟ ದರದ ನಾಲ್ಕನೇ ಒಂದು ಭಾಗದಷ್ಟಾಗಿದೆ.
ಡೀಸೆಲ್‌ಗೆ 3.90 ರೂಪಾಯಿಗಳ ವ್ಯಾಟ್, 3.71 ರೂಪಾಯಿ ಅಬಕಾರಿ ಸುಂಕ ಮತ್ತು 50 ಪೈಸೆ ಸೀಮಾಸುಂಕವನ್ನು ವಿಧಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
|