ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಇನ್ನು ಕಾರುಗಳೂ ಪರಸ್ಪರ ಮಾತನಾಡ್ತವಂತೆ..!
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಇನ್ನು ಕಾರುಗಳೂ ಪರಸ್ಪರ ಮಾತನಾಡ್ತವಂತೆ..!
ಆಧುನಿಕತೆಯ ಭರದಲ್ಲಿ ಮಾನವ ಸಂಬಂಧಗಳೇ ಶಿಥಿಲವಾಗುತ್ತಿರುವ ಕಾಲವಿದು; ಪರಸ್ಪರ ಮಾತುಕತೆಗಿಂತ ಹೆಚ್ಚು ಟೀವಿ, ಮೊಬೈಲ್, ಕಂಪ್ಯೂಟರ್‌ಗಳಲ್ಲಿ ಮುಖ ಹುದುಗಿಸುವ ಹೊತ್ತಲ್ಲಿ ಮತ್ತೊಂದು ಮುಂದುವರಿದ ತಂತ್ರಜ್ಞಾನ ಬೆಳಕಿಗೆ ಬಂದಿದೆ. ಅದೂ ಭಾರತೀಯರಿಂದ ಎಂಬುದು ವಿಶೇಷ.

ಅಪಘಾತಗಳನ್ನು ತಪ್ಪಿಸಲು ಈ ಕಾರುಗಳು ವರದಾನವಾಗಬಲ್ಲವು ಎಂಬುದು ಸಂಶೋಧಕರ ಅಭಿಪ್ರಾಯ. ಭಾರತ ಮೂಲದ ಡಾ. ಭಿಬ್ಯಾ ಶರ್ಮಾ ಮತ್ತು ಡಾ. ಉತೇಶ್ ಚಾಂದ್‌ರವರ ಮುಂದಾಳುತ್ವದಲ್ಲಿ ಸೌತ್ ಪೆಸಿಪಿಕ್ ವಿಶ್ವವಿದ್ಯಾಲಯದ ಅಂತಾರಾಷ್ಟ್ರೀಯ ತಂಡವೊಂದು ಇದನ್ನು ಸಂಶೋಧಿಸಿದೆ.

ಗಣಿತಶಾಸ್ತ್ರದ ಸುಧಾರಿತ ಸಮೀಕರಣಗಳನ್ನು ಈ ಕಾರುಗಳಲ್ಲಿ ಬಳಸಲಾಗಿದೆ. ಅವುಗಳು ರೊಬೊಟಿಕ್ ತಂತ್ರಜ್ಞಾನವನ್ನು ಹೊಂದಿರುವ ಕಾರುಗಳಿಗೆ ಆದೇಶವನ್ನು ಪರಸ್ಪರ ಕೊಡು-ಕೊಳ್ಳುವ ಮೂಲಕ ಪ್ರಯಾಣವನ್ನು ಸುರಕ್ಷಿತವನ್ನಾಗಿಸುತ್ತವೆ.

ಕಾರುಗಳು ರಸ್ತೆ ಬದಲಾವಣೆ ಮಾಡುವ ಅಥವಾ ಪರಸ್ಪರ ಅಪಘಾತ ಸಂಭವಿಸುವ ಅಥವಾ ಟ್ರಾಫಿಕ್ ಸಮಸ್ಯೆಗಳನ್ನು ಎದುರಿಸುವ ಸಂದರ್ಭದಲ್ಲಿ ನಿರೂಪಿಸಲಾಗಿರುವ ನಿರ್ಧಿಷ್ಟ ಗಣಿತ ಸೂತ್ರದಂತೆ ರೊಬೊಟ್‌ ಕಾರುಗಳು ಮೂಲಕ ಮಾತನಾಡಿಕೊಂಡು ಸಮಸ್ಯೆಗಳನ್ನು ಪರಿಹರಿಸಿಕೊಳ್ಳುತ್ತವೆ. ಹಾಗಾಗಿ ಅಪಘಾತ ಪ್ರಮಾಣವನ್ನು ಕಡಿಮೆ ಮಾಡಬಹುದು ಎಂಬುದು ವಿಜ್ಞಾನಿಗಳ ಅಂಬೋಣ.

ಹಲವು ಗಣಿತ ಸಮೀಕರಣಗಳನ್ನೊಳಗೊಂಡ ಸರಣಿ ತಂತ್ರಾಶವು ಕೇಂದ್ರೀಕೃತ ಮಿದುಳನ್ನು ಹೊಂದಿದ್ದು, ಇದು ಪ್ರತೀ ಕಾರುಗಳನ್ನು ನಿಯಂತ್ರಿಸುತ್ತದೆ. ಈ ಮಿದುಳುಗಳು ಪರಸ್ಪರ ಮಾತನಾಡುತ್ತಾ, ನಿರ್ದಿಷ್ಟ ಆದೇಶಗಳನ್ನು ಪಡೆದುಕೊಳ್ಳುವುದು ಮತ್ತು ನೀಡುವ ಕಾರ್ಯವನ್ನು ಮಾಡುತ್ತವೆ. ಇದರಿಂದ ಪ್ರಯಾಣ ಸುಗಮವಾಗುತ್ತದೆ ಎಂದು ವಿವರಿಸುತ್ತಾರೆ ಡಾ. ಶರ್ಮಾ.

ಪ್ರಸಕ್ತ ಎರಡು ಚಕ್ರಗಳ ರೊಬೋಟ್ ಪ್ರಯೋಗಗಳ ತಂತ್ರಜ್ಞಾನ ಕಂಪ್ಯೂಟರ್‌ಗಳ ಅನುಕರಣೆಯ ತಂತ್ರವನ್ನು ಬಳಸಿ ವಿಜ್ಞಾನಿಗಳ ತಂಡವು ತಮ್ಮ ಕೌಶಲ್ಯವನ್ನು ಮೆರೆದಿವೆ.

ಕಾರುಗಳು ಪರಸ್ಪರ ಮಾತನಾಡೋದೇನೋ ಸರಿ.. ಆದರೆ ಪ್ರಯಾಣಿಕರ ಅಥವಾ ಮಾಲಕರ ಜತೆ ಕ್ಯಾತೆ ತೆಗೆದು ಜಗಳ ಕಾಯದಿದ್ದರಾಯಿತು. ಏನಂತೀರಾ?
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಆರು ತಿಂಗಳಲ್ಲಿ ಬಡ್ಡಿ ದರ ಏರಿಕೆ ಸಾಧ್ಯತೆ: ಎಸ್‌ಬಿಐ
ಕಚ್ಚಾ ತೈಲ ತುಸು ಚೇತರಿಕೆ; ಮುಂದುವರಿದ ಹತಾಶೆ
ಕಾಫಿ: ಪರಿಹಾರ ಕೊಡುಗೆ
ಬಡ್ಡಿದರ ಏರಿಕೆ
ಇನ್ನು ಸರಕಾರಿ ಪ್ರಯಾಣ ಏರ್ ಇಂಡಿಯಾದಲ್ಲಿ ಮಾತ್ರ
ನಿಷ್ಕ್ರಿಯ ಇಪಿಎಫ್‌ಓ ಖಾತೆ ಹಣ ಬಳಸುವಂತಿಲ್ಲ: ಸರ್ಕಾರ