ನವದೆಹಲಿ: ಮುಂಬರುವ ಮೂರು ವರ್ಷದ ಒಳಗಾಗಿ ಕುಲಾಂತರಿ ತರಕಾರಿ ತಳಿಗಳನ್ನು ಬಿಡುಗಡೆ ಮಾಡುವ ಉದ್ದೇಶವಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಇವುಗಳನ್ನು ಜನಪ್ರಿಯ ಗೊಳಿಸುವ ನಿಟ್ಟಿನಿಂದ ಯೋಜನೆಗಳನ್ನು ಹಾಕಿಕೊಂಡಿರುವುದಾಗಿ ಕೃಷಿ ರಾಜ್ಯಸಚಿವ ಕೆ.ವಿ. ಥಾಮಸ್, ಲೋಕಸಭೆಗೆ ತಿಳಿಸಿದ್ದಾರೆ. ಟೋಮೇಟೋ, ಹೂ ಕೋಸು, ಮತ್ತು ಬದನೆಕಾಯಿಗಳ ಕುಲಾಂತರಿ ತಳಿ ಅಭಿವೃದ್ದಿ ಪಡಿಸಲಾಗುತ್ತಿದೆ. |