2012ರೊಳಗೆ ಭಾರತವು 50 ಕೋಟಿ ಇಂಟರ್ನೆಟ್ ಬಳಕೆದಾರರನ್ನು, 10 ಕೋಟಿ ಬ್ರಾಂಡ್‌ಬ್ಯಾಂಡ್ ಸಂಪರ್ಕ ಮತ್ತು 10 ಕೋಟಿ ನೆಟ್ ಸಂಪರ್ಕಿತ ಸಾಧನಗಳನ್ನು ಹೊಂದಲಿದೆ ಎಂದು ಐಟಿ ಹಾರ್ಡ್‌ವೇರ್ ಸಂಸ್ಥೆ 'ಮೈಟ್' ತಿಳಿಸಿದೆ.
ಆದರೆ ಅದಕ್ಕಾಗಿ ಮೂಲಭೂತ ಪ್ರತಿಬಂಧಕಗಳನ್ನು ಹಿಂಪಡೆದು, 3ಜಿ ಮತ್ತು ವೈ ಮ್ಯಾಕ್ಸ್ ನೆಟ್‌ವರ್ಕ್‌ಗಳನ್ನು ಶೀಘ್ರದಲ್ಲೇ ಕಾರ್ಯಾಚರಿಸುವ ಅಗತ್ಯವಿರುವುದನ್ನು ಈ ಉದ್ಯಮ ಸಂಸ್ಥೆಯು ಒತ್ತಿ ಹೇಳಿದೆ.
2012ರೊಳಗೆ 500 ಮಿಲಿಯನ್ ಅಂತರ್ಜಾಲ ಬಳಕೆದಾರರು, 100 ಮಿಲಿಯನ್ ಬ್ರಾಂಡ್‌ಬ್ಯಾಂಡ್ ಸಂಪರ್ಕಗಳು ಹಾಗೂ 100 ಮಿಲಿಯನ್ ಸಂಪರ್ಕ ಸಾಧನಗಳನ್ನು ಹೊಂದುವ ಮಹತ್ವಾಕಾಂಕ್ಷೆಯ "ಗೋಲ್ 511"ರ ಗುರಿಯನ್ನು ಮೈಟ್ ಹೊಂದಿದೆ" ಎಂದು ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ವಿನ್ನಿ ಮೆಹ್ತಾ ತಿಳಿಸಿದ್ದಾರೆ.
"ಇದಕ್ಕಾಗಿ ರಾಷ್ಟ್ರೀಯ ಐಟಿ ಮೂಲಭೂತ ಸೌಕರ್ಯದ ಜತೆಗೆ ಭೌತಿಕ ಮೂಲಭೂತ ವ್ಯವಸ್ಥೆಗಳನ್ನು ಆದ್ಯತೆ ಮೇರೆಗೆ ಸುಧಾರಿಸುವ ಅಗತ್ಯವಿದೆ" ಎಂದು 2008-09ರ ಸಾಲಿನ ತಂತ್ರಜ್ಞಾನ ಉದ್ಯಮದ ಸಾಧನೆಯ ಕುರಿತ ಅವಲೋಕನ ಬಿಡುಗಡೆ ಸಂದರ್ಭದಲ್ಲಿ ಹೇಳಿದರು.
ಪ್ರಸಕ್ತ ದೇಶವು 6 ಕೋಟಿ ಅಂತರ್ಜಾಲ ಬಳಕೆದಾರರು, 30 ಲಕ್ಷ ಬ್ರಾಂಡ್‌ಬ್ಯಾಂಡ್ ಗ್ರಾಹಕರು ಹಾಗೂ 10ರಿಂದ 20 ಲಕ್ಷ ಸಂಪರ್ಕ ಸಾಧನಗಳನ್ನು ಹೊಂದಿದೆ.
ಉದ್ದೇಶಿತ ಗುರಿ ಸಾಧಿಸುವ ಬಗ್ಗೆ ಮಾತಿಗಿಳಿದ ಮೆಹ್ತಾ, 3ಜಿ ಮತ್ತು ವೈ-ಮ್ಯಾಕ್ಸ್ ನೆಟ್‌ವರ್ಕ್‌ಗಳನ್ನು ಶೀಘ್ರದಲ್ಲೇ ಬಳಕೆಗೆ ತರುವ ಅಗತ್ಯವಿದೆ ಎಂದಿದ್ದಾರೆ.
|