ಜಾಗತಿಕ ಅರ್ಥ ವ್ಯವಸ್ಥೆಗೆ ಮರುಳುವ ಸೂಚನೆಯೊಂದಿಗೆ ಅಮೆರಿಕಾ ಷೇರು ಮಾರುಕಟ್ಟೆ ಚೇತರಿಕೆ ಕಂಡ ಹಿನ್ನಲೆಯಲ್ಲಿ ಏಷಿಯನ್ ಮಾರುಕಟ್ಟೆಯಲ್ಲಿ ಇಂದು ಕಚ್ಚಾ ತೈಲ ಬೆಲೆ ಏರಿಕೆ ದಾಖಲಿಸಿದೆ.
ನ್ಯೂಯಾರ್ಕ್ ಪ್ರಮುಖ ಒಪ್ಪಂದದ ಆಗಸ್ಟ್ ವಿತರಣೆಯ ಸಾದಾ ಕಚ್ಚಾ ತೈಲದಲ್ಲಿ 15 ಸೆಂಟ್ಸ್‌ಗಳ ಏರಿಕೆಯಾಗಿದ್ದು, ಪ್ರತೀ ಬ್ಯಾರೆಲ್‌ಗೆ 61.69 ಡಾಲರುಗಳನ್ನು ದಾಖಲಿಸಿದೆ.
ಆಗಸ್ಟ್ ವಿತರಣೆಯ ಬ್ರೆಂಟ್ ನಾರ್ತ್ ಸೀ ಕಚ್ಚಾ ತೈಲದಲ್ಲಿ ಆರು ಸೆಂಟ್ಸ್‌ಗಳ ಏರಿಕೆ ಕಂಡು 63.15 ಡಾಲರುಗಳನ್ನು ಮುಟ್ಟಿದೆ. ಈ ಒಪ್ಪಂದವು ಗುರುವಾರ ದಿನದಂತ್ಯಕ್ಕೆ ಕೊನೆಗೊಳ್ಳಲಿದೆ.
ಅಮೆರಿಕಾ ಅರ್ಥ ವ್ಯವಸ್ಥೆಗೆ ಪುನಶ್ಚೇತನ ನೀಡುವ ನಿಟ್ಟಿನಲ್ಲಿ ಅಲ್ಲಿನ ಫೆಡರಲ್ ಸರಕಾರವು ಸುಧಾರಿತ ನೋಟ ಬೀರಿದ ನಂತರ ವಾಲ್ ಸ್ಟ್ರೀಟ್ ರಾತ್ರೋರಾತ್ರಿ ಚೇತರಿಸಿಕೊಂಡಿತ್ತು. ಇದೇ ಕಾರಣದಿಂದ ತೈಲ ಬೆಲೆ ಏರಿಕೆಯಾಗಿದೆ ಎಂದು ವಿಶ್ಲೇಷಕರು ಅಭಿಪ್ರಾಯಿಸಿದ್ದಾರೆ.
ತಂತ್ರಜ್ಞಾನ ದೈತ್ಯ ಇಂಟೆಲ್‌ನ ಆಶ್ಚರ್ಯಕರ ಫಲಿತಾಂಶಗಳು ಮತ್ತು ಜಗತ್ತಿನ ಅತಿ ದೊಡ್ಡ ಅರ್ಥ ವ್ಯವಸ್ಥೆ ಫೆಡರಲ್ ರಿಸರ್ವ್‌ನ ಸುಧಾರಿತ ಕ್ರಮಗಳ ಹಿನ್ನಲೆಯಲ್ಲಿ ಬುಧವಾರ ವಾಲ್ ಸ್ಟ್ರೀಟ್ ಪ್ರಾಬಲ್ಯ ಸಾಧಿಸಿ ದಿನದ ವಹಿವಾಟನ್ನು ಕೊನೆಗೊಳಿಸಿತ್ತು.
|