ಖ್ಯಾತ ನಿರ್ದೇಶಕ ಸ್ಟೀವನ್ ಸ್ಪೀಲ್‌ಬರ್ಗ್ ಜತೆ 825 ಮಿಲಿಯನ್ ಡಾಲರ್‌ಗಳ ಒಪ್ಪಂದಕ್ಕೆ ಸಹಿ ಹಾಕಿರುವ ಉದ್ಯಮಿ ಅನಿಲ್ ಅಂಬಾನಿ ಅಧಿಕೃತವಾಗಿ ಹಾಲಿವುಡ್‌ಗೆ ಎಂಟ್ರಿ ಪಡೆದುಕೊಂಡಿದ್ದಾರೆ.
ಜಾಗತಿಕ ಪ್ರೇಕ್ಷಕರಿಗಾಗಿ ಆರು ಚಿತ್ರಗಳನ್ನು ನೀಡುವ ಒಪ್ಪಂದವನ್ನು ಅಂಬಾನಿಯವರ ರಿಲಯೆನ್ಸ್ ಬಿಗ್ ಎಂಟರ್‌ಟೈನ್‌ಮೆಂಟ್ ಮತ್ತು ಲಾಸ್ ಎಂಜಲೀಸ್ ಮೂಲದ ನಿರ್ಮಾಣ ಸಂಸ್ಥೆ ಡ್ರೀಮ್‌ವರ್ಕ್ಸ್ ಸ್ಟುಡಿಯೋಸ್ ಮಾಡಿಕೊಂಡಿದ್ದು, ಇತ್ತೀಚಿನ ವರ್ಷಗಳಲ್ಲೇ ಇದು ಬೃಹತ್ ಮೊತ್ತದ್ದು ಎಂದು ಹೇಳಲಾಗಿದೆ.
ಸಿನಿಮಾಗಳನ್ನು ಡ್ರೀಮ್‌ವರ್ಕ್ಸ್ ನಿರ್ಮಿಸಲಿದ್ದು, ವಾಲ್ಟ್ ಡಿಸ್ನಿ ಜಾಗತಿಕವಾಗಿ ವಿತರಣೆ ಮಾಡಲಿದೆ. ಆದರೆ ಡಿಟಿಎಚ್, ಡಿವಿಡಿ ಮತ್ತು ಥಿಯೇಟರ್ ಹಕ್ಕುಗಳು ಭಾರತದ ಬಳಿ ಉಳಿಯಲಿವೆ ಎಂದು ಅಂಬಾನಿ ಮತ್ತು ಸ್ಪೀಲ್‌ಬರ್ಗ್ ತಿಳಿಸಿದ್ದಾರೆ.
"325 ಮಿಲಿಯನ್ ಡಾಲರ್ ಹಣವನ್ನು ತನ್ನ ವೈಯಕ್ತಿಕ ಖಾತೆಯಿಂದ ನೀಡಲಿದ್ದೇನೆ. 150 ಮಿಲಿಯನ್ ಡಾಲರ್ ಡಿಸ್ನಿ ಒದಗಿಸಲಿದೆ. ಇತರ ಹಣವನ್ನು ಬ್ಯಾಂಕುಗಳಿಂದ ಮತ್ತು ಇತರ ಸಂಸ್ಥೆಗಳಿಂದ ಪಡೆದುಕೊಳ್ಳಲಾಗುತ್ತದೆ. ಒಟ್ಟಾರೆಯಾಗಿ 825 ಮಿಲಿಯನ್ ಡಾಲರ್ ಹಣವನ್ನು ಮುಂದಿನ ಮೂರು ವರ್ಷಗಳಲ್ಲಿ ತೊಡಗಿಸಿಕೊಳ್ಳಲಾಗುತ್ತದೆ" ಎಂದು ಅಂಬಾನಿ ವಿವರಿಸಿದ್ದಾರೆ.
ವಿಜ್ಞಾನವನ್ನಾಧರಿಸಿದ ಸಿನಿಮಾದಲ್ಲಿ ಜನಪ್ರಿಯರಾಗಿರುವ ಸ್ಪೀಲ್‌ಬರ್ಗ್‌ರವರು ಜುರಾಸಿಕ್ ಪಾರ್ಕ್, ದಿ ಲಾಸ್ಟ್ ವರ್ಲ್ಡ್- ಜುರಾಸಿಕ್ ಪಾರ್ಕ್, ಜೋಸ್, ವಾರ್ ಆಫ್ ದಿ ವರ್ಲ್ಡ್ಸ್, ಇ.ಟಿ.: ದಿ ಎಕ್ಸ್‌ಟ್ರಾ - ಟೆರೆಸ್ಟ್ರಿಯಲ್, ಯೂಸ್ಡ್ ಕಾರ್ಸ್, ಮೋನ್ಸ್‌ಸ್ಟರ್ ಹೌಸ್, ಇಂಡಿಯಾನಾ ಜೋನ್ಸ್ ಎಂಡ್ ದಿ ಕಿಂಗ್ಡಮ್ ಆಫ್ ದಿ ಕ್ರಿಸ್ಟಲ್ ಸ್ಕಲ್ ಮುಂತಾದ ಸೂಪರ್ ಹಿಟ್ ಚಿತ್ರಗಳನ್ನು ನಿರ್ದೇಶಿಸಿದ್ದಾರೆ.
|