ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಇವಳು ವಿಶ್ವದ ಅತಿ ಕಿರಿಯ ವೆಬ್ ಡಿಸೈನರ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಇವಳು ವಿಶ್ವದ ಅತಿ ಕಿರಿಯ ವೆಬ್ ಡಿಸೈನರ್
Sreelakshmi
PR
ಆಕೆ ಕೇವಲ ಎಂಟು ವರ್ಷ ವಯಸ್ಸಿನವಳಾಗಿದ್ದಾಗ ವೆಬ್ ಡಿಸೈನಿಂಗ್ ಮಾಡಿ ವಿಶ್ವ ದಾಖಲೆ ಬರೆದವಳು; ನಂತರವೂ ಹತ್ತಾರು ವೆಬ್‌ಸೈಟ್‌ಗಳು ಆಕೆಯ ಪುಟಾಣಿ ಕೈಗಳಿಂದ ರಚಿತವಾಗಿವೆ. ಅವಳ ಹೆಸರು ಶ್ರೀಲಕ್ಷ್ಮೀ ಸುರೇಶ್. ಹುಟ್ಟಿದ್ದು 1998ರಲ್ಲಿ ಕೇರಳದ ಕೋಯಿಕೋಡ್‌ನಲ್ಲಿ.

ತಾನು ಹೋಗುತ್ತಿದ್ದ ಶಾಲೆಯ ವೆಬ್‌ಸೈಟ್ (ಡಬ್ಲ್ಯೂಡಬ್ಲ್ಯೂಡಬ್ಲ್ಯೂ.ಪ್ರೆಸೆಂಟೇಶನ್ಎಚ್‌ಎಸ್‌ಎಸ್.ಕಾಮ್) ರಚಿಸಿದ್ದ ಈ ಬಾಲೆಯ ಹೆತ್ತವರಾದ ಸುರೇಶ್ ಮೆನನ್ ಕ್ಯಾಲಿಕಟ್‌ನಲ್ಲಿ ವಕೀಲ, ತಾಯಿ ವಿಜು ಸುರೇಶ್ ಶಾಲಾ ಅಧ್ಯಾಪಕಿ.

ಶ್ರೀಲಕ್ಷ್ಮೀ ತನ್ನ ನಾಲ್ಕನೇ ವಯಸ್ಸಿನಲ್ಲೇ ಕಂಪ್ಯೂಟರ್ ಕಲಿಯಲಾರಂಭಿಸಿದ್ದಳು, ನಾವು ಆಕೆಗೆ ಬೇಕಾದ ಪ್ರೋತ್ಸಾಹವನ್ನು ನೀಡುತ್ತಾ ಬಂದಿದ್ದೇವೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಾರೆ ಅವಳ ಪೋಷಕರು.

ಈ ಅದ್ಭುತ ಬಾಲಕಿಯು ಹಲವಾರು ಗೌರವಗಳನ್ನು ಇದುವರೆಗೆ ಸ್ವೀಕರಿಸಿದ್ದಾಳೆ. ತನ್ನ ಸಾಧನೆಗಾಗಿ ವಿಶ್ವದಾದ್ಯಂತ ಹೆಸರು ಮಾಡಿದ್ದಾಳೆ. ಬಹುತೇಕ ಎಲ್ಲಾ ಪತ್ರಿಕೆ ಮತ್ತು ಇತರ ಮಾಧ್ಯಮಗಳಲ್ಲಿ ಈಗಾಗಲೇ ಅವಳು ಸುದ್ದಿಯಾಗಿದ್ದಾಳೆ.

ಅದಕ್ಕಿಂತಲೂ ವಿಶೇಷ ಎಂದರೆ ಆಕೆ ತನ್ನದೇ ಸಂಸ್ಥೆಯಾದ 'ಇ-ಡಿಸೈನ್ ಟೆಕ್ನಾಲಜೀಸ್' ಎಂಬ ಸಂಸ್ಥೆಯ ಕಾರ್ಯ ನಿರ್ವಹಣಾಧಿಕಾರಿಯಾಗಿರುವುದು. 'ಇನ್ಫೋಗ್ರೂಪ್' ಎಂಬ ಮಾಹಿತಿ ತಂತ್ರಜ್ಞಾನ ಕಂಪನಿಗೆ ಶ್ರೀಲಕ್ಷ್ಮಿಯೇ ರಾಯಭಾರಿ. 'ವೈ-ಗ್ಲೋಬ್ಸ್ ಟೆಕ್ನಾಲಜೀಸ್ ಐಎನ್‌ಸಿ' ಎಂಬ ಮತ್ತೊಂದು ಕಂಪನಿಗೆ ಅವಳೇ ನಿರ್ದೇಶಕಿ.
Sreelaksmi
PR

ಅವಳ ಸಾಧನೆಯನ್ನು ಗುರುತಿಸಿದ್ದು ಅಮೆರಿಕಾದ ವೆಬ್‌ಮಾಸ್ಟರ್ಸ್ ಅಸೋಸಿಯೇಷನ್. ತನ್ನ ಸದಸ್ಯೆಯನ್ನಾಗಿ ಮಾಡಿಕೊಂಡ ಆ ಸಂಸ್ಥೆಯು ಈಕೆಯೇ ಅತೀ ಕಿರಿಯ ವೆಬ್ ಡಿಸೈನರ್ ಎಂದು ಘೋಷಿಸಿದ ನಂತರ ಶ್ರೀಲಕ್ಷ್ಮಿಯ ಪುಟ್ಟ ಕೈಗಳಲ್ಲಿ ಅದೆಷ್ಟು ಪ್ರಶಸ್ತಿಗಳನ್ನು ಸ್ವೀಕರಿಸಿದ್ದಾಳೋ ಅವಳಿಗೇ ನೆನಪಿಲ್ಲ. ಆ ಸಂಸ್ಥೆಯ 18 ವರ್ಷದೊಳಗಿನ ಏಕೈಕ ಸದಸ್ಯೆಯೆಂಬ ಕೀರ್ತಿಯೂ ಶ್ರೀಲಕ್ಷ್ಮಿಯದ್ದು.

"ನಾನು ತೀರಾ ಚಿಕ್ಕವಳಿದ್ದಾಗಲೇ ಕಂಪ್ಯೂಟರ್ ಬಗ್ಗೆ ಆಸಕ್ತಿಯಿತ್ತು. ಎಲ್‌ಕೆಜಿಗೆ ಹೋಗುತ್ತಿದ್ದಾಗ ಚಿತ್ರ ಬಿಡಿಸುವುದನ್ನು ಕಲಿತಿದ್ದೆ. ನಂತರ ನೋಟ್‌ಪ್ಯಾಡ್‌ನಲ್ಲಿ ಅಕ್ಷರಗಳನ್ನು ಬರೆಯಲು ಆರಂಭಿಸಿದೆ. ಒಂದು ದಿನ ತಂದೆ ನನಗೆ ಹುಡುಗನೊಬ್ಬ ವೆಬ್ ಡಿಸೈನ್ ಮಾಡಿದ್ದ ಸುದ್ದಿಯನ್ನು ತೋರಿಸಿದರು. ಹಾಗೆ ನನಗೂ ಮಾಡಲು ಸಾಧ್ಯವೆಂದು ಯೋಚಿಸಿದ ನಾನು ತಂದೆಯಿಂದ ವೆಬ್ ಡಿಸೈನಿಂಗ್ ಬಗ್ಗೆ ಪಾಠ ಹೇಳಿಸಿಕೊಂಡೆ" ಎಂದು ಶ್ರೀಲಕ್ಷ್ಮೀ ಸುರೇಶ್ ಹೇಳುತ್ತಾಳೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಶೇ.(-)1.21: ಹಣದುಬ್ಬರ ದರದಲ್ಲಿ ಆಂಶಿಕ ಏರಿಕೆ
ಹಾಲಿವುಡ್ ಚಿತ್ರ ನಿರ್ಮಾಣಕ್ಕಿಳಿದ ಅನಿಲ್ ಅಂಬಾನಿ
ಏಷಿಯನ್ ಮಾರುಕಟ್ಟೆಯಲ್ಲಿ ತೈಲ ಬೆಲೆಯೇರಿಕೆ
ಕೊಬ್ಬರಿಗೆ ಬೆಂಬಲ ಬೆಲೆ
ಎಂಎಸ್ಐಎಲ್ ಚಿಟ್ ಫಂಡ್
ಪಾನ್ ನಂಬರ್ ನಮೂದಿಸದಿದ್ದರೆ ಯದ್ವಾತದ್ವಾ ತೆರಿಗೆ