ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಮುಂಬೈಯಲ್ಲಿ ಉದ್ಯಮಿಗಳನ್ನು ಭೇಟಿಯಾದ ಹಿಲರಿ ಕ್ಲಿಂಟನ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮುಂಬೈಯಲ್ಲಿ ಉದ್ಯಮಿಗಳನ್ನು ಭೇಟಿಯಾದ ಹಿಲರಿ ಕ್ಲಿಂಟನ್
ಐದು ದಿನಗಳ ಭೇಟಿಗಾಗಿ ಭಾರತಕ್ಕೆ ಆಗಮಿಸಿರುವ ಅಮೆರಿಕಾ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಮುಂಬೈ ಉಗ್ರರ ದಾಳಿಗೊಳಗಾದವರ ಸ್ಮರಣಾರ್ಥ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದು, ಶನಿವಾರ ಉದ್ಯಮ ಮುಖಂಡರನ್ನು ಭೇಟಿಯಾಗಿದ್ದಾರೆ.

2008ರ ನವೆಂಬರ್ 26ರಂದು ಉಗ್ರರ ದಾಳಿಯಿಂದಾಗಿ 180ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾದ ದುರ್ಘಟನೆಯ ಸ್ಮರಣಾರ್ಥ ಏರ್ಪಡಿಸಲಾಗಿದ್ದ ಸಮಾರಂಭದಲ್ಲಿ ಭಾಗವಹಿಸಿದ ಕ್ಲಿಂಟನ್ ವಿಷಾದ ವ್ಯಕ್ತಪಡಿಸಿದರು. ಅಲ್ಲದೆ ತಾಜ್ ಮತ್ತು ಟ್ರಿಂಡೆಂಟ್ - ಒಬೆರಾಯ್ ಹೊಟೇಲುಗಳ ಸಿಬ್ಬಂದಿಗಳ ಜತೆ ಅವರು ಮಾತುಕತೆಯನ್ನೂ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಶನಿವಾರ ಅವರು ಕೆಂಬಣ್ಣದ ಉದ್ಯಮ ದಿರಿಸಿನೊಂದಿಗೆ ಭಾರತದ ಅಗ್ರ 10 ಕಾರ್ಪೊರೇಟ್‌ಗಳೊಂದಿಗೆ ಬೆಳಗ್ಗಿನ ಉಪಹಾರವನ್ನು ಸೇವಿಸಿದರು. ರತನ್ ಟಾಟಾ, ಮುಖೇಶ್ ಅಂಬಾನಿ, ಸ್ವಾತಿ ಪಿರಮಾಲ್, ಸುಧಾ ಮೂರ್ತಿ, ಚಂದ್ರಾ ಕೊಚ್ಚಾರ್ ಮತ್ತು ಆದಿ ಗೋದ್ರೆಜ್ ಮುಂತಾದ ಖ್ಯಾತ ಉದ್ಯಮಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.

ಕಾರ್ಪೊರೇಟ್ ಮುಖ್ಯಸ್ಥರ ಜತೆಗಿನ ಮಾತುಕತೆಯ ನಂತರ ಕ್ಲಿಂಟನ್ ಅಹಮದಾಬಾದ್ ಮೂಲದ ಎನ್‌ಜಿಓ 'ಸೇವಾ' ಸಂಸ್ಥೆಯ ಪ್ರಧಾನ ಕಚೇರಿಗೆ ಭೇಟಿ ನೀಡುವ ಸಾಧ್ಯತೆಗಳಿವೆ.

26/11 ಉಗ್ರರ ದಾಳಿಗೊಳಗಾಗಿದ್ದ ಛತ್ರಪತಿ ಶಿವಾಜಿ ಟರ್ಮಿನಸ್ ರೈಲ್ವೇ ನಿಲ್ದಾಣದ ಎದುರಗಡೆಯಿರುವ ಸೈಂಟ್ ಕ್ಸೇವಿಯರ್ಸ್ ಕಾಲೇಜಿಗೆ ಸಂಜೆ ಮೂರು ಗಂಟೆಯೊಳಗೆ ಅವರು ತೆರಳಲಿದ್ದಾರೆ.

ಈ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರೊಂದಿಗೆ ಹಾಗೂ ಎನ್‌ಜಿಓ ಪ್ರತಿನಿಧಿಗಳೊಂದಿಗೂ ಕ್ಲಿಂಟನ್ ಮಾತುಕತೆ ನಡೆಸಲಿದ್ದು, ಕಾರ್ಯಕ್ರಮದಲ್ಲಿ ಬಾಲಿವುಡ್ ಖ್ಯಾತ ನಟ ಅಮೀರ್ ಖಾನ್ ಕೂಡ ಪಾಲ್ಗೊಳ್ಳಲಿದ್ದಾರೆ.

ಶುಕ್ರವಾರ ತಡರಾತ್ರಿ ಮುಂಬೈಗೆ ಆಗಮಿಸಿದ್ದ ಕ್ಲಿಂಟನ್ ನೇರವಾಗಿ ತಾಜ್ ಹೊಟೇಲಿಗೆ ತೆರಳಿದ್ದು, ಮುಂಬೈಯಲ್ಲಿ ತಂಗಲಿರುವ ಎರಡು ದಿನ ಇದೇ ಹೊಟೇಲಿನಲ್ಲಿ ಉಳಿದುಕೊಳ್ಳಲಿದ್ದಾರೆ. ಭಾನುವಾರ ಅವರು ರಾಜಕೀಯ ನಾಯಕರು ಮತ್ತು ನಾಗರಿಕ ಮುಖಂಡರ ಜತೆಗಿನ ಭೇಟಿಗಾಗಿ ನವದೆಹಲಿಗೆ ಪ್ರಯಾಣಿಸಲಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಅಂಬಾನಿಗಳ ಅನಿಲ ವಿವಾದದಲ್ಲಿ ಸರಕಾರವೂ ವಾದಿ?
ಮಾಧ್ಯಮಗಳಿಗೆ ಕಡಿವಾಣ
ಅಗತ್ಯ ಕ್ರಮದ ಭರವಸೆ
ಕೃಷಿಕರಿಗೆ ಮತ್ತೊಂದು ಕಾರ್ಡ್
ಬಹುನಿರೀಕ್ಷಿತ 'ನ್ಯಾನೋ' ಹಸ್ತಾಂತರಿಸಿದ ರತನ್ ಟಾಟಾ
ಸರಕಾರದಿಂದ ಕಿಂಗ್‌ಫಿಶರ್‌ಗೆ 26 ಕೋಟಿ ದಂಡ