ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಎಟಿಎಂ ದೋಷ; ಬ್ಯಾಂಕುಗಳಿಗೆ ದಂಡ ಭೀತಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಎಟಿಎಂ ದೋಷ; ಬ್ಯಾಂಕುಗಳಿಗೆ ದಂಡ ಭೀತಿ
ಎಟಿಎಂ ವಹಿವಾಟಿನಲ್ಲಿ ಯಾಂತ್ರಿಕ ಸಮಸ್ಯೆಗಳ ಕಾರಣದಿಂದ ಗ್ರಾಹಕರ ಖಾತೆಯಿಂದ ಹಣ ಮಾಯವಾದ ನಂತರ 12 ದಿನಗಳೊಳಗೆ ಸಂಬಂಧಪಟ್ಟ ಬ್ಯಾಂಕುಗಳು ಮೊತ್ತವನ್ನು ವಾಪಸು ಮಾಡದಿದ್ದಲ್ಲಿ, ದಿನವೊಂದಕ್ಕೆ 100 ರೂಪಾಯಿಗಳಂತೆ ಪರಿಹಾರ ನೀಡಬೇಕು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಆದೇಶಿಸಿದೆ.

ಗ್ರಾಹಕರಿಗೆ ಎಟಿಎಂ ಯಂತ್ರವು ಹಣ ಬಿಡುಗಡೆ ಮಾಡದಿದ್ದರೂ ಖಾತೆಯಿಂದ ಹಣ ಮಾಯವಾಗುವ ಸಂದರ್ಭಗಳಲ್ಲಿ ಸಂಬಂಧಪಟ್ಟ ಬ್ಯಾಂಕು 12 ದಿನಗಳೊಳಗೆ ಗ್ರಾಹಕರಿಗೆ ಹಣ ಮರಳಿಸಬೇಕು. ಅದಕ್ಕೆ ತಪ್ಪಿದಲ್ಲಿ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಆರ್‌ಬಿಐ ತಿಳಿಸಿದೆ.

ಗ್ರಾಹಕರು ದೂರು ನೀಡಿದ ನಂತರ ರಜಾದಿನಗಳನ್ನು ಹೊರತುಪಡಿಸಿ 12 ದಿನಗಳೊಳಗಾಗಿ ಅವರ ಖಾತೆಗೆ ಹಣವನ್ನು ವರ್ಗಾಯಿಸತಕ್ಕದ್ದು. ಇದಕ್ಕೆ ಗ್ರಾಹಕನು ದೂರು ನೀಡಬೇಕೆಂದು ಬ್ಯಾಂಕ್ ಕಾಯಬೇಕಾಗಿಲ್ಲ. ತನ್ನಿಂತಾನೇ ಹಣ ವರ್ಗಾವಣೆಯಾಗತಕ್ಕದ್ದು ಎಂದು ಶುಕ್ರವಾರ ಆರ್‌ಬಿಐ ತನ್ನ ನಿಯಮಾವಳಿಯಲ್ಲಿ ತಿಳಿಸಿದೆ.

ಬ್ಯಾಂಕುಗಳ ಸೂಚನೆಗಳಿಗೆ ಬದ್ಧತೆ ತೋರಿಸದಿರುವ ಬಗ್ಗೆ ಮತ್ತು ವಿವಿಧ ಬ್ಯಾಂಕುಗಳು ಎಟಿಎಂ ಮೂಲಕ ಹಣ ತೆಗೆಯಲು ತಮ್ಮ ಗ್ರಾಹಕರಿಗೆ ಭಿನ್ನ ಮಿತಿಗಳನ್ನು ಅಳವಡಿಸಿರುವ ಬಗ್ಗೆ ಹಲವು ದೂರುಗಳು ಬಂದಿವೆ ಎಂದೂ ಆರ್‌ಬಿಐ ಹೇಳಿಕೊಂಡಿದೆ.

ಒಂದು ವೇಳೆ ಗ್ರಾಹಕನು ಬೇರೊಂದು ಬ್ಯಾಂಕಿನ ಎಟಿಎಂ ಯಂತ್ರದಲ್ಲಿ ಇಂತಹ ತೊಂದರೆಗೊಳಗಾದರೂ ಸಹ ಎಟಿಎಂ ಕಾರ್ಡ್ ನೀಡಿರುವ ಬ್ಯಾಂಕ್ ಕಡ್ಡಾಯವಾಗಿ ದಂಡವನ್ನು ಗ್ರಾಹಕನಿಗೆ ನೀಡಬೇಕಾಗುತ್ತದೆ. ಆ ಹಣವನ್ನು ನಂತರ ಬ್ಯಾಂಕು ಎಟಿಎಂ ಯಂತ್ರದ ಮಾಲಕನಾಗಿರುವ ಬ್ಯಾಂಕ್‌ನಿಂದ ಪಡೆದುಕೊಳ್ಳಬೇಕು ಎಂದು ಸ್ಪಷ್ಟವಾಗಿ ಆರ್‌ಬಿಐ ವಿವರಿಸಿದೆ.

ವಿಳಂಬ ಗತಿಯು ಮತ್ತೂ ಮುಂದುವರಿದಲ್ಲಿ ಆ ಬ್ಯಾಂಕಿನಿಂದ ಪರಿಹಾರವನ್ನು ಪಡೆದುಕೊಳ್ಳಲು ಆರ್‌ಬಿಐ ಅಧಿಕಾರ ಹೊಂದಿದೆ. ಹಾಗೊಂದು ವೇಳೆ ಎಟಿಎಂ ನೆಟ್‌ವರ್ಕ್ ಅಪರೇಟರುಗಳು ಇಂತಹ ಪ್ರಕರಣಗಳಿಗೆ ಕಾರಣರಾಗಿದ್ದಲ್ಲಿ ಅವರೂ ಇದಕ್ಕೆ ಬಾಧ್ಯಸ್ಥರಾಗುತ್ತಾರೆ. ಆದರೆ ಗ್ರಾಹಕರಿಗೆ ಪರಿಹಾರವನ್ನು ಬ್ಯಾಂಕ್ ಮೊದಲು ನೀಡತಕ್ಕದ್ದು. ನಂತರ ಅದನ್ನು ಆಪರೇಟರ್‌ಗಳಿಂದ ಬ್ಯಾಂಕ್ ವಸೂಲಿ ಮಾಡಕೊಳ್ಳಬಹುದು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕಳ್ಳಭಟ್ಟಿ ದುರಂತಕ್ಕೆ ಕಾರಣ ಬೆಲ್ಲ ಬೆಲೆ ಏರಿಕೆ..!
ಅವರಿಗೆ ನ್ಯಾನೋ ಸಿಕ್ತು, ಆದರೆ ಕೀ ಕಳೆದುಹೋಯ್ತು..!
ಮುಂಬೈಯಲ್ಲಿ ಉದ್ಯಮಿಗಳನ್ನು ಭೇಟಿಯಾದ ಹಿಲರಿ ಕ್ಲಿಂಟನ್
ಅಂಬಾನಿಗಳ ಅನಿಲ ವಿವಾದದಲ್ಲಿ ಸರಕಾರವೂ ವಾದಿ?
ಮಾಧ್ಯಮಗಳಿಗೆ ಕಡಿವಾಣ
ಅಗತ್ಯ ಕ್ರಮದ ಭರವಸೆ