ರಾಷ್ಟ್ರ ರಾಜಧಾನಿಯ ಚಿನಿವಾರ ಪೇಟೆಯು ಮಾರ್ಗ ಬದಲಾಯಿಸುವ ಮೂಲಕ ಬೆಳ್ಳಿ ದರ ಪ್ರತಿ ಕಿಲೋವೊಂದಕ್ಕೆ 180 ರೂಪಾಯಿಗಳ ಏರಿಕೆ ಕಂಡು 22,200 ರೂ.ಗಳನ್ನು ತಲುಪಿದ್ದು, ಚಿನ್ನ ದರದಲ್ಲಿ 10 ರೂಪಾಯಿಗಳ ಕುಸಿತ ಕಂಡು ಬಂದಿದೆ.
ದಾಸ್ತಾನುದಾರರು ಖರೀದಿಗೆ ಹೆಚ್ಚಿನ ಒಲವು ತೋರಿಸಿದ ಕಾರಣ ಬೆಳ್ಳಿ ದರದಲ್ಲಿ ಈ ಬದಲಾವಣೆ ಕಂಡು ಬಂದಿದೆ. ಚಿನ್ನ ಮಾರಾಟಕ್ಕೆ ದಾಸ್ತಾನುದಾರರು ಮುಗಿ ಬಿದ್ದದ್ದರಿಂದ ಹತ್ತು ರೂಪಾಯಿಗಳ ಕುಸಿತ ಕಂಡಿದ್ದು, 10 ಗ್ರಾಂ ಚಿನ್ನಕ್ಕೆ 14,990 ರೂಪಾಯಿಗಳನ್ನು ಶನಿವಾರ ಮಾರುಕಟ್ಟೆಯು ದಾಖಲಿಸಿದೆ.
ಜಾಗತಿಕ ಕ್ಷೇತ್ರಗಳ ಗತಿಯ ಪ್ರಭಾವಕ್ಕೊಳಗಾದ ದಾಸ್ತಾನುದಾರರು ಬೆಳ್ಳಿ ಖರೀದಿಗೆ ಮುಂದಾದರೆ, ಆಭರಣಕಾರರು ಹಬ್ಬಗಳ ಕಾರಣದಿಂದ ತಮ್ಮ ವಲಯಗಳನ್ನು ವಿಸ್ತರಿಸಲು ಒಲವು ತೋರಿಸಿದರು ಎಂದು ಮಾರುಕಟ್ಟೆ ತಜ್ಞರು ತಿಳಿಸಿದ್ದಾರೆ.
ಉತ್ಕೃಷ್ಟ ಚಿನ್ನ ಹಾಗೂ ಚಿನ್ನದ ಆಭರಣಗಳ ಬೆಲೆಯಲ್ಲಿ 10 ರೂಪಾಯಿಗಳಂತೆ ಕುಸಿತ ಕಂಡಿದ್ದು, ಪ್ರತೀ 10 ಗ್ರಾಂಗಳ ಬೆಲೆ ಕ್ರಮವಾಗಿ 14,990 ಮತ್ತು 14,840 ರೂಪಾಯಿಗಳಲ್ಲಿದೆ.
ಆದರೆ ಪವನ್ ಚಿನ್ನ ದರದಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. ಪ್ರತಿ ಎಂಟು ಗ್ರಾಂ ಚಿನ್ನದ ಬೆಲೆ 12,450 ರೂಪಾಯಿಗಳಲ್ಲೇ ಸ್ಥಿರವಾಗಿದೆ.
ಕೈಗಾರಿಕಾ ವಲಯದ ಬಳಕೆದಾರರಿಂದಲೂ ಬೇಡಿಕೆ ಪಡೆದ ಸಿದ್ಧ ಬೆಳ್ಳಿ ಮತ್ತು ವಾರವನ್ನಾಧರಿಸಿದ ವಿತರಣೆಯು 180 ರೂಪಾಯಿಗಳ ಏರಿಕೆ ಕಂಡು ಕ್ರಮವಾಗಿ 22,200 ಮತ್ತು 22,050 ರೂಪಾಯಿಗಳನ್ನು ಪ್ರತಿ ಕಿಲೋಗೆ ದಾಖಲಿಸಿದೆ.
ಬೆಳ್ಳಿ ನಾಣ್ಯ ದರದಲ್ಲೂ 100 ರೂಪಾಯಿಗಳ ಏರಿಕೆ ಕಂಡು ಬಂದಿದೆ. 100 ನಾಣ್ಯಗಳ ಖರೀದಿಗೆ 29,300 ಹಾಗೂ ಮಾರಾಟಕ್ಕೆ 29,400 ರೂಪಾಯಿಗಳನ್ನು ಮಾರುಕಟ್ಟೆ ಪ್ರಸಕ್ತ ಹೊಂದಿದೆ.
|