ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಅಮೆರಿಕಾ ವರದಿ ಹಿನ್ನಲೆ: ಕಚ್ಚಾ ತೈಲಕ್ಕೀಗ 64 ಡಾಲರ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಮೆರಿಕಾ ವರದಿ ಹಿನ್ನಲೆ: ಕಚ್ಚಾ ತೈಲಕ್ಕೀಗ 64 ಡಾಲರ್
ಗೃಹ ಮಾರುಕಟ್ಟೆಯ ಕಠಿಣ ದಿನಗಳು ಮುಗಿದಿವೆ ಎಂದ ಅಮೆರಿಕಾ ಗೃಹ ನಿರ್ಮಾಣ ವರದಿಯ ಧನಾತ್ಮಕ ಅಂಶಗಳ ಕಾರಣದಿಂದ ಏಷಿಯನ್ ತೈಲ ಮಾರುಕಟ್ಟೆ ನೆಗೆಯಲಾರಂಭಿಸಿದ್ದು, ಪ್ರತೀ ಬ್ಯಾರೆಲ್ ಕಚ್ಚಾ ತೈಲಕ್ಕೆ 64 ಡಾಲರುಗಳನ್ನು ದಾಖಲಿಸಿದೆ.

ನ್ಯೂಯಾರ್ಕ್ ಪ್ರಮುಖ ಒಪ್ಪಂದದ ಆಗಸ್ಟ್ ವಿತರಣೆಯ ಸಾದಾ ಕಚ್ಚಾ ತೈಲದಲ್ಲಿ 0.59ರ ಏರಿಕೆ ದಾಖಲಾಗಿದ್ದು, ಪ್ರತೀ ಬ್ಯಾರೆಲ್ ತೈಲದ ಬೆಲೆ 64.15 ಡಾಲರುಗಳು.

ಬ್ರೆಂಟ್ ನಾರ್ತ್ ಸೀ ಕಚ್ಚಾ ತೈಲದ ಸೆಪ್ಟೆಂಬರ್ ವಿತರಣೆಯಲ್ಲಿ 0.27 ಡಾಲರುಗಳ ಏರಿಕೆಯಾಗಿದ್ದು, ಪ್ರತೀ ಬ್ಯಾರೆಲ್‌ಗೆ 65.65 ಅಮೆರಿಕನ್ ಡಾಲರುಗಳನ್ನು ದಾಖಲಿಸಿದೆ.

ಜೂನ್ ತಿಂಗಳಲ್ಲಿ ಖಾಸಗಿ ಗೃಹ ನಿರ್ಮಾಣದ ಸಂಖ್ಯೆಯ ಸರಾಸರಿ ಶೇಕಡಾ 3.6ರಷ್ಟು ಹೆಚ್ಚಳವಾಗಿದೆ, ಇದು ಕಳೆದ ನವೆಂಬರ್ ನಂತರ ಕಂಡು ಬಂದ ಮೊತ್ತ ಮೊದಲ ಬೆಳವಣಿಗೆ ಎಂದು ಅಮೆರಿಕಾ ವಾಣಿಜ್ಯ ಸಚಿವಾಲಯವು ಶುಕ್ರವಾರ ತನ್ನ ವರದಿಯಲ್ಲಿ ಹೇಳಿತ್ತು.

ಅಮೆರಿಕಾದಲ್ಲಿನ ಗೃಹ ನಿರ್ಮಾಣ ಆರಂಭಿಸುವ ಕುರಿತ ವರದಿಯನ್ನು ಕಂಡು ತೈಲ ಬೆಲೆ ಏರಿಕೆಯಾಗಿದೆ ಎಂದು ಆಸ್ಟ್ರೇಲಿಯಾ ಕಾಮನ್‌ವೆಲ್ತ್ ಬ್ಯಾಂಕ್ ತನ್ನ ವರದಿಯಲ್ಲಿ ತಿಳಿಸಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಹೊರಗುತ್ತಿಗೆ ಆತಂಕ ಬೇಡ
ಬ್ಯಾಂಕುಗಳ ರಾಷ್ಟ್ರೀಕರಣ
ಏರ್‌ಟೆಲ್ ಗ್ರಾಹಕರಿಗೆ 'ಸ್ಪೆಶಲ್ 5' ಸ್ಕೀಮ್
ಪರಿಷ್ಕೃತ ಸಾಲ ಒಪ್ಪಿ;ಇಲ್ಲದಿದ್ರೆ ಬಿಡಿ:ಟಾಟಾಗೆ ಯುಕೆ
ಮಹಿಳೆಯರನ್ನು ಕೈಬಿಟ್ರೆ ಅಭಿವೃದ್ಧಿ ಅಸಾಧ್ಯ: ಹಿಲರಿ
ಎಸ್‌ಬಿಎಂ 82ಕೋಟಿ ರೂ.ನಿವ್ವಳ ಲಾಭ