ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಗ್ರಹಣ ಹತ್ತಿರದಿಂದ ನೋಡಲು ವಿಮಾನ ವ್ಯವಸ್ಥೆ..!
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಗ್ರಹಣ ಹತ್ತಿರದಿಂದ ನೋಡಲು ವಿಮಾನ ವ್ಯವಸ್ಥೆ..!
ಈ ಶತಮಾನದ ಸುದೀರ್ಘಾವಧಿಯ ಸೂರ್ಯಗ್ರಹಣವನ್ನು ಸಮುದ್ರ ಮಟ್ಟಕ್ಕಿಂತ 41,000 ಅಡಿ ಎತ್ತರದಲ್ಲಿ ವೀಕ್ಷಿಸಬಹುದಾದ ಅವಕಾಶವಿದು. ಮೊತ್ತ ಮೊದಲ ಬಾರಿಗೆ ಭಾರತದಲ್ಲಿ ಗ್ರಹಣ ವೀಕ್ಷಣೆಗೆಂದು ಪ್ರಯಾಣಿಕರ ವಿಮಾನ ವ್ಯವಸ್ಥೆಯನ್ನು ಮಾಡಲಾಗುತ್ತಿದೆ.

ಇದೇ ತಿಂಗಳ 22ರಂದು ಸಂಭವಿಸಲಿರುವ ಸಂಪೂರ್ಣ ಸೂರ್ಯಗ್ರಹಣವು ಅತ್ಯಂತ ಮಹತ್ವದ ಖಗೋಳ ಘಟನೆ. ಅಲ್ಲದೆ ಪ್ರಸಕ್ತ ಭಾರತದ ತಲೆಮಾರಿಗೆ ಈ ನೆಲದಿಂದ ನೋಡಬಹುದಾದ ಕಟ್ಟ ಕಡೆಯ ಸೂರ್ಯಗ್ರಹಣವೆಂಬುದು ಮತ್ತೊಂದು ವಿಶೇಷ. ಯಾಕೆಂದರೆ ಇಂತಹುದೇ ಮತ್ತೊಂದು ಸೂರ್ಯಗ್ರಹಣಕ್ಕಾಗಿ ಭಾರತ ಸುಮಾರು 85 ವರ್ಷಗಳಷ್ಟು ಸುದೀರ್ಘಾವಧಿಯ ಕಾಲ ಕಾಯಬೇಕಾಗುತ್ತದೆ.
PTI

ಹಾಗಾಗಿ ಈ ಅಪರೂಪದ ಸೂರ್ಯಗ್ರಹಣ ವೀಕ್ಷಣೆಗೆ ದೆಹಲಿಯ ಕಾಕ್ಸ್ ಎಂಡ್ ಕಿಂಗ್ಸ್ ಇಂಡಿಯಾ ಎಂಬ ಟ್ರಾವೆಲ್ ಏಜೆನ್ಸಿಯೊಂದು ವಿಮಾನದ ವ್ಯವಸ್ಥೆಯನ್ನು ಮಾಡುತ್ತಿದೆ. ಇವರಿಗೆ ಮಾರ್ಗದರ್ಶನ ನೀಡುತ್ತಿರುವವರು 'ಸ್ಪೇಸ್' ಎಂಬ ಖಗೋಳ ಶಾಸ್ತ್ರಜ್ಞರ ಸಂಘಟನೆ.

ಜುಲೈ 22ರಂದು ಬೆಳಗ್ಗೆ 6 ಗಂಟೆ 21 ನಿಮಿಷಗಳಿಗೆ ಆರಂಭವಾಗುವ ಗ್ರಹಣ 6 ಗಂಟೆ 28 ನಿಮಿಷಕ್ಕೆ ಕೊನೆಗೊಳ್ಳಲಿದೆ. ಇದನ್ನು ನೀವು ವಿಮಾನದಲ್ಲೇ ಕೂತು ಸ್ಪಷ್ಟವಾಗಿ ನೋಡಬೇಕಾದಲ್ಲಿ ತೆರಬೇಕಾದ ಹಣ ಕೇವಲ 79,000 ರೂಪಾಯಿಗಳು ಮಾತ್ರ...!

ವೀಕ್ಷಣೆ ದರ ಇಷ್ಟು ದುಬಾರಿಯಾಗಿದ್ದ ಹೊರತಾಗಿಯೂ ಮುಗಿ ಬಿದ್ದಿರುವ ಜನರಿಗೆ ಕೊರತೆಯಿಲ್ಲ ಎಂದು ಸಂಘಟಕರು ತಿಳಿಸಿದ್ದಾರೆ. ಈಗಾಗಲೇ ಅವರು ನಿಗದಿಪಡಿಸಿರುವ ಸೂರ್ಯನ ದಿಕ್ಕಿನ ವಿಂಡೋ ಸೀಟ್‌ಗಳಲ್ಲಿ ಉಳಿದಿರುವುದು ಕೇವಲ ಶೇಕಡಾ 20ರಷ್ಟು ಮಾತ್ರವಂತೆ.

ನವದೆಹಲಿಯಿಂದ ಜೆಟ್‌ಲೈಟ್ 737-700 ಎಂಬ ವಿಮಾನವು ಆಸಕ್ತರನ್ನು ಹೊತ್ತು ಬಿಹಾರದ ಗಯಾದತ್ತ ಪ್ರಯಾಣ ಬೆಳೆಸಲಿದೆ. ಗಯಾ ಪ್ರದೇಶದಲ್ಲಿ ಸಂಪೂರ್ಣ ಗ್ರಹಣ ಗೋಚರವಾಗುವ ಕಾರಣದಿಂದ ಈ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.


ವಿಮಾನದ ವಿಂಡೋ ಸೀಟ್‌ಗಳಲ್ಲಿ ಸೂರ್ಯನ ಕಡೆಗಿನ ಸೀಟುಗಳು ಮತ್ತು ಭೂಮಿಯ ಕಡೆಗಿನ ಸೀಟುಗಳು ಎಂದು ಎರಡು ವಿಭಾಗಗಳಾಗಿ ಮಾಡಲಾಗಿದೆ. ಸೂರ್ಯ ಇರುವ ಕಡೆಗಿನ ಸೀಟಿಗೆ 79,000 ಹಾಗೂ ಭೂಮಿಯ ಕಡೆಗಿನ ಸೀಟಿಗೆ 29,000 ರೂಪಾಯಿಗಳನ್ನು ನಿಗದಿಪಡಿಸಲಾಗಿದೆ.

ಇದುವರೆಗೆ ಟಿಕೆಟ್ ಕಾದಿರಿಸಿರುವವರ ಪೈಕಿ 70 ವರ್ಷದ ಪ್ರಯಾಣಿಕ ಹಾಗೂ 11 ವರ್ಷದ ಹುಡುಗಿ ಅತೀ ಹಿರಿಯ-ಕಿರಿಯ ಪ್ರಯಾಣಿಕರೆನಿಸಿಕೊಂಡಿದ್ದಾರೆ ಎಂದು ಏಜೆನ್ಸಿ ತಿಳಿಸಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಅಮೆರಿಕಾ ವರದಿ ಹಿನ್ನಲೆ: ಕಚ್ಚಾ ತೈಲಕ್ಕೀಗ 64 ಡಾಲರ್
ಹೊರಗುತ್ತಿಗೆ ಆತಂಕ ಬೇಡ
ಬ್ಯಾಂಕುಗಳ ರಾಷ್ಟ್ರೀಕರಣ
ಏರ್‌ಟೆಲ್ ಗ್ರಾಹಕರಿಗೆ 'ಸ್ಪೆಶಲ್ 5' ಸ್ಕೀಮ್
ಪರಿಷ್ಕೃತ ಸಾಲ ಒಪ್ಪಿ;ಇಲ್ಲದಿದ್ರೆ ಬಿಡಿ:ಟಾಟಾಗೆ ಯುಕೆ
ಮಹಿಳೆಯರನ್ನು ಕೈಬಿಟ್ರೆ ಅಭಿವೃದ್ಧಿ ಅಸಾಧ್ಯ: ಹಿಲರಿ