ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > 'ಬಿಎಸ್‌ಎನ್‌ಎಲ್ ಹಂಗಾಮ'ದಲ್ಲಿ ಕನ್ನಡವೂ ಲಭ್ಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
'ಬಿಎಸ್‌ಎನ್‌ಎಲ್ ಹಂಗಾಮ'ದಲ್ಲಿ ಕನ್ನಡವೂ ಲಭ್ಯ
ಮೊಬೈಲ್ ಮತ್ತು ಮನರಂಜನಾ ಕ್ಷೇತ್ರದ ದಿಗ್ಗಜ ಹಂಗಾಮ ಡಿಜಿಟಲ್ ಮೀಡಿಯಾ ಜತೆ ಕೈ ಜೋಡಿಸಿರುವ ಸಾರ್ವಜನಿಕ ಕ್ಷೇತ್ರದ ದೂರವಾಣಿ ಸಂಸ್ಥೆ ಬಿಎಸ್‌ಎನ್‌ಎಲ್ ತನ್ನ ಸಂಗೀತ ಪ್ರಿಯರಿಗಾಗಿ ಹೊಸ ವೆಬ್‌ಸೈಟ್ ಪ್ರಕಟಿಸಿದೆ.

ಬಿಎಸ್‌ಎನ್‌ಎಲ್.ಹಂಗಾಮ.ಕಾಮ್ ಎಂಬ ವೆಬ್‌ಸೈಟ್‌ನಲ್ಲಿ ಹಿಂದಿ, ಕನ್ನಡ, ತಮಿಳು, ತೆಲುಗು, ಪಂಜಾಬಿ ಸೇರಿದಂತೆ ಹಲವು ಭಾಷೆಗಳ ಚಲನಚಿತ್ರ ಗೀತೆಯ ಆಡಿಯೋ, ವಿಡಿಯೋಗಳು ಲಭ್ಯವಿದೆ. ಭಕ್ತಿಗೀತೆಗಳು, ಭಾವಗೀತೆಗಳು, ಗಜಲ್‌ಗಳನ್ನು ಕೂಡ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.

ಬಿಎಸ್‌ಎನ್‌ಎಲ್‌ ಬ್ರಾಡ್‌ಬ್ಯಾಂಡ್ ಗ್ರಾಹಕರಿಗೆ ಮಾತ್ರ ಇದರ ಸೇವೆ ಸಿಗಲಿದೆ. ಆದರೆ ಉಚಿತವಲ್ಲ. ನೀವು ಬಿಎಸ್‌ಎನ್‌ಎಲ್ ಬ್ರಾಡ್‌ಬ್ಯಾಂಡ್‌ನ ನೇರ ಗ್ರಾಹಕರಾಗಿದ್ದರೆ ಮಾತ್ರ ಈ ಸೇವೆಯನ್ನು ಪಡೆದುಕೊಳ್ಳಬಹುದಾಗಿದೆ. ಇಲ್ಲಿ ನೋಂದಣಿ ಮಾಡಿಕೊಳ್ಳದ ಹೊರತು ಡೌನ್‌ಲೋಡ್ ಅಸಾಧ್ಯ. ನೋಂದಣಿ ಮಾಡಲು ಹೊರಟಾಗ ಬ್ರಾಂಡ್‌ಬ್ಯಾಂಡ್ ಬಳಕೆದಾರರ ಐಡಿ ಮತ್ತು ಪಾಸ್‌ವರ್ಡ್ ನೀಡಬೇಕಾಗುತ್ತದೆ.

ಸುಮಾರು ನಾಲ್ಕು ಮಿಲಿಯನ್ ಬಿಎಸ್‌ಎನ್‌ಎಲ್‌ ಗ್ರಾಹಕರನ್ನು ಗುರಿಯಿಟ್ಟುಕೊಂಡಿರುವ ಸಂಸ್ಥೆಯು ಆಡಿಯೋ ಮತ್ತು ವಿಡಿಯೋಗಳ ಅಪರಿಮಿತ ಡೌನ್‌ಲೋಡ್‌ಗಾಗಿ 149 ರೂಪಾಯಿ ಹಾಗೂ ಅಪರಿಮಿತ ಗೇಮ್ಸ್ ಡೌನ್‌‌ಲೋಡ್‌ಗಾಗಿ 49 ರೂಪಾಯಿಗಳನ್ನು ಪ್ರತಿ ತಿಂಗಳಿಗೆ ವಿಧಿಸುತ್ತದೆ.

ಪ್ರಸಕ್ತ ಬಿಎಸ್‌ಎನ್‌ಎಲ್.ಹಂಗಾಮ.ಕಾಮ್ ಸುಮಾರು 65,000 ಹಾಡುಗಳು ಹಾಗೂ 2,000 ಸಂಗೀತ ವಿಡಿಯೋಗಳನ್ನು ಹೊಂದಿದೆ. ಅಲ್ಲದೆ 200ಕ್ಕಿಂತಲೂ ಹೆಚ್ಚು ಗೇಮ್‌ಗಳು ಲಭ್ಯವಿದೆ.

ಬಹುತೇಕ ಎಲ್ಲಾ ಭಾಷೆಗಳ ಚಿತ್ರೋದ್ಯಮಕ್ಕೆ ಬಾಧಕವಾಗಿರುವ ನಕಲಿ ಹಾವಳಿಯನ್ನು ತಡೆಗಟ್ಟುವ ಉದ್ದೇಶವನ್ನಿಟ್ಟುಕೊಂಡಿರುವ ಬಿಎಸ್‌ಎನ್‌ಎಲ್‌ನಿಂದ ನೀವು ಒಂದು ತಿಂಗಳು ಡೌನ್‍‌ಲೋಡ್ ಮಾಡಿಕೊಂಡ ಹಾಡು ಅಥವಾ ವಿಡಿಯೋಗಳನ್ನು ಗ್ರಾಹಕ ಅವಧಿ ಕೊನೆಗೊಂಡ ನಂತರ ಬಳಸಲಾಗದು. ಅಂದರೆ ಕಂಪ್ಯೂಟರ್‌ನಿಂದ ಕಾಪಿ ಮಾಡಿಕೊಳ್ಳುವುದು ಕೂಡ ಅಸಾಧ್ಯ.

ಮೆನುಗಳಲ್ಲಿ ಹಿಂದಿ, ತಮಿಳು, ತೆಲುಗು, ಪಂಜಾಬಿ ಭಾಷೆಗಳನ್ನು ನಮೂದಿಸಿದ್ದರೂ ಕನ್ನಡಕ್ಕೆ ಜಾಗ ನೀಡಲಾಗಿಲ್ಲ. ಆದರೆ ಬಳಕೆದಾರರು ಸರ್ಚ್ ಮಾಡಿದಲ್ಲಿ ಕನ್ನಡ ಆಡಿಯೋ ಸೇವೆಯು ಲಭ್ಯವಾಗುತ್ತದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಅಂಬಾನಿಗಳ ವಿವಾದ; ಸೆ.1ಕ್ಕೆ ವಿಚಾರಣೆ ಮುಂದೂಡಿಕೆ
ಗ್ರಹಣ ಹತ್ತಿರದಿಂದ ನೋಡಲು ವಿಮಾನ ವ್ಯವಸ್ಥೆ..!
ಅಮೆರಿಕಾ ವರದಿ ಹಿನ್ನಲೆ: ಕಚ್ಚಾ ತೈಲಕ್ಕೀಗ 64 ಡಾಲರ್
ಹೊರಗುತ್ತಿಗೆ ಆತಂಕ ಬೇಡ
ಬ್ಯಾಂಕುಗಳ ರಾಷ್ಟ್ರೀಕರಣ
ಏರ್‌ಟೆಲ್ ಗ್ರಾಹಕರಿಗೆ 'ಸ್ಪೆಶಲ್ 5' ಸ್ಕೀಮ್