ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಸತ್ಯಂ ತನಿಖೆಗೆ ಅನುಮತಿ ಕೇಳಿದ ಅಮೆರಿಕಾ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸತ್ಯಂ ತನಿಖೆಗೆ ಅನುಮತಿ ಕೇಳಿದ ಅಮೆರಿಕಾ
ಬಹುಕೋಟಿ ಸತ್ಯಂ ಕಂಪ್ಯೂಟರ್ಸ್ ಹಗರಣದ ತನಿಖೆಯನ್ನು ಅಮೆರಿಕಾದಲ್ಲಿ ನಡೆಸಲು ಅಲ್ಲಿನ ಸರಕಾರದ ಭದ್ರತಾ ಮತ್ತು ವಿನಿಮಯ ಆಯೋಗದ ಮಾರುಕಟ್ಟೆ ನಿಯಂತ್ರಣ ಸಂಸ್ಥೆಯೊಂದು ಭಾರತ ಸರಕಾರದ ಅನುಮತಿ ಕೋರಿದೆ.

"ಅಮೆರಿಕಾ ಭದ್ರತಾ ಮತ್ತು ವಿನಿಮಯ ಆಯೋಗದ (ಎಸ್‌ಇಸಿ) ತಂಡವೊಂದು ಸತ್ಯಂ ಹಗರಣದ ತನಿಖೆ ನಡೆಸಲು ಭಾರತ ಸರಕಾರ ಮತ್ತು ಸಿಬಿಐಯ ಅನುಮತಿ ಕೇಳಿದೆ" ಎಂದು ಸಿಬಿಐ ನಿರ್ದೇಶಕ ಅಶ್ವನಿ ಕುಮಾರ್ ತಿಳಿಸಿದ್ದಾರೆ.

ನಮ್ಮ ದೇಶದಲ್ಲಿ 'ಸೆಬಿ'ಯ ಮಾರುಕಟ್ಟೆ ನಿಯಂತ್ರಕ ಪಾತ್ರವನ್ನು ಅಮೆರಿಕಾದಲ್ಲಿ 'ಎಸ್‌ಇಸಿ' ಮಾಡುತ್ತದೆ. ಇದೀಗ ಆ ಸಂಸ್ಥೆಯು ತನ್ನ ದೇಶದಲ್ಲಿ ಸತ್ಯಂ ಹಗರಣದ ತನಿಖೆಯನ್ನು ನಡೆಸುವ ಆಸಕ್ತಿ ತೋರಿಸಿದೆ.

ನ್ಯೂಯಾರ್ಕ್ ಶೇರುಪೇಟೆಯಲ್ಲಿ ಸತ್ಯಂ ಕಂಪ್ಯೂಟರ್ ಸ್ಥಾನ ಪಡೆದುಕೊಂಡಿರುವ ಕಾರಣ ಈ ನಿರ್ಧಾರಕ್ಕೆ ಅಮೆರಿಕಾ ಬಂದಿದೆ.

ಈ ಸಂಬಂಧ ಗಂಭೀರ ಮೋಸ ತನಿಖಾ ಕಚೇರಿ (ಎಸ್‌.ಎಫ್‌.ಐ.ಓ.), ಜಾರಿ ನಿರ್ದೇಶನಾಲಯ (ಇ.ಡಿ.) ಮತ್ತು ಭಾರತೀಯ ಭದ್ರತಾ ಮತ್ತು ಶೇರುಪೇಟೆ ನಿರ್ವಹಣಾ ಮಂಡಳಿ (ಸೆಬಿ)ಯ ಸಹಕಾರದೊಂದಿಗೆ ವಿಚಾರಣೆ ನಡೆಸುವ ಉದ್ದೇಶ ಸಂಸ್ಥೆಯದ್ದು ಎಂದು ಸಿಬಿಐ ನಿರ್ದೇಶಕರು ವಿವರಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸಚಿವಾಲಯದ ಮಧ್ಯಪ್ರವೇಶ ಬೇಡ: ಸಿಂಗ್‌ಗೆ ಅನಿಲ್
'ಬಿಎಸ್‌ಎನ್‌ಎಲ್ ಹಂಗಾಮ'ದಲ್ಲಿ ಕನ್ನಡವೂ ಲಭ್ಯ
ಅಂಬಾನಿಗಳ ವಿವಾದ; ಸೆ.1ಕ್ಕೆ ವಿಚಾರಣೆ ಮುಂದೂಡಿಕೆ
ಗ್ರಹಣ ಹತ್ತಿರದಿಂದ ನೋಡಲು ವಿಮಾನ ವ್ಯವಸ್ಥೆ..!
ಅಮೆರಿಕಾ ವರದಿ ಹಿನ್ನಲೆ: ಕಚ್ಚಾ ತೈಲಕ್ಕೀಗ 64 ಡಾಲರ್
ಹೊರಗುತ್ತಿಗೆ ಆತಂಕ ಬೇಡ