ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಹೊಸ ಭರವಸೆಗಳ ಬೆನ್ನೇರಿರುವ ತೈಲ ಮಾರುಕಟ್ಟೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹೊಸ ಭರವಸೆಗಳ ಬೆನ್ನೇರಿರುವ ತೈಲ ಮಾರುಕಟ್ಟೆ
ತೊಂದರೆಯಲ್ಲಿರುವ ಜಾಗತಿಕ ಆರ್ಥಿಕತೆಯ ಚೇತರಿಕೆ ಬಗ್ಗೆ ಹೊಸ ಭರವಸೆಗಳ ಹಿನ್ನಲೆಯಲ್ಲಿ ಮಂಗಳವಾರ ಏಷಿಯಾ ಮಾರುಕಟ್ಟೆಯಲ್ಲಿ ಕಚ್ಚಾ ತೈಲಗಳ ಬೆಲೆ ಏರಿಕೆಯಾಗಿದೆ ಎಂದು ವಿತರಕರು ತಿಳಿಸಿದ್ದಾರೆ.

ನ್ಯೂಯಾರ್ಕ್ ಪ್ರಮುಖ ಒಪ್ಪಂದ ಸಾದಾ ಕಚ್ಚಾ ತೈಲದ ಆಗಸ್ಟ್ ವಿತರಣೆಯಲ್ಲಿ 32 ಸೆಂಟ್ಸ್‌ಗಳ ಏರಿಕೆಯಾಗಿದ್ದು, ಪ್ರತೀ ಬ್ಯಾರೆಲ್‌ಗೆ 64.30 ಅಮೆರಿಕನ್ ಡಾಲರುಗಳನ್ನು ತಲುಪಿದೆ. ಇಂದು ವ್ಯವಹಾರದ ಅಂತ್ಯದಲ್ಲಿ ಆಗಸ್ಟ್ ಒಪ್ಪಂದವು ಕೊನೆಗೊಳ್ಳಲಿದೆ.

ಎಂಟು ಸೆಂಟ್ಸ್‌ಗಳ ಏರಿಕೆ ಕಂಡಿರುವ ಸೆಪ್ಟೆಂಬರ್ ವಿತರಣೆಯಲ್ಲಿ ಬ್ರೆಂಟ್ ನಾರ್ತ್ ಸೀ ಕಚ್ಚಾ ತೈಲವು 66.52 ಅಮೆರಿಕನ್ ಡಾಲರ್‌ಗಳಂತೆ ಬ್ಯಾರೆಲ್ ವ್ಯವಹಾರವಾಗಿದೆ.

ವ್ಯಾಪಾರಿಗಳು ಧನಾತ್ಮಕ ಆರ್ಥಿಕತೆಯ ಓಟವನ್ನು ಲಾಭದಾಯಕವನ್ನಾಗಿ ಮಾಡಿಕೊಂಡಿರುವ ಕಾರಣ ತೈಲ ಬೆಲೆ ಏರು ಮುಖವಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಆದರೆ ಮತ್ತೊಬ್ಬ ವಿಶ್ಲೇಷಕರು ಈ ಬೆಳವಣಿಗೆಗೆ ವಾಲ್‌ಸ್ಟ್ರೀಟ್ ಕಾರಣವೆಂದು ಅಭಿಪ್ರಾಯಪಟ್ಟಿದ್ದಾರೆ. "ನನ್ನ ಪ್ರಕಾರ ಈಗಲೂ ತೈಲ ಮಾರುಕಟ್ಟೆಯನ್ನು ಪ್ರಮುಖವಾಗಿ ನಿಯಂತ್ರಿಸುತ್ತಿರುವುದು ಶೇರು ಮಾರುಕಟ್ಟೆ" ಎಂದಿದ್ದಾರೆ.

 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಝಂಡು ಫಾರ್ಮಾ ಲಾಭಂಶ ದ್ವಿಗುಣ
1 ಕೋಟಿ ಹುದ್ದೆ ಸೃಷ್ಟಿ
ಯೂರೋಪ್ ಮಾರುಕಟ್ಟೆಯಲ್ಲಿ ಚಿನ್ನ ಬೆಲೆಯೇರಿಕೆ
ಉದ್ಯಮಿ ಸೆರೆ
ಸತ್ಯಂ ತನಿಖೆಗೆ ಅನುಮತಿ ಕೇಳಿದ ಅಮೆರಿಕಾ
ಸಚಿವಾಲಯದ ಮಧ್ಯಪ್ರವೇಶ ಬೇಡ: ಸಿಂಗ್‌ಗೆ ಅನಿಲ್