ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಟ್ವಿಟ್ಟರ್‌ನಿಂದ 'ನಿಲೇಕಣಿ' ಖಾತೆ ಮುಟ್ಟುಗೋಲು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಟ್ವಿಟ್ಟರ್‌ನಿಂದ 'ನಿಲೇಕಣಿ' ಖಾತೆ ಮುಟ್ಟುಗೋಲು
ದೇಶದ ನಾಗರಿಕರಿಗೆ ವಿಶಿಷ್ಟ ಗುರುತಿನ ಚೀಟಿ ನೀಡಲು ಹೊರಟಿರುವ ನಂದನ್ ನಿಲೇಕಣಿಯವರ ಗುರುತನ್ನೇ ನಕಲಿ ಮಾಡಿ ಹಲವರನ್ನು ಫೂಲ್ ಮಾಡಿರುವ ವಿಚಿತ್ರ ಪ್ರಸಂಗವೊಂದು ಬೆಳಕಿಗೆ ಬಂದಿದೆ.

ಇದು ನಡೆದಿರುವುದು ಸಾಮಾಜಿಕ ಸಂಪರ್ಕ ತಾಣ ಟ್ವಿಟ್ಟರ್‌ನಲ್ಲಿ. ಯಾರೋ ಹುಟ್ಟು ಹಾಕಿದ ನಿಲೇಕಣಿಯವರ ಖಾತೆಯನ್ನು ಸಾವಿರಾರು ಮಂದಿ ನಿಜವೆಂದೇ ನಂಬಿದ್ದರು. ಇದೀಗ ನೈಜ ವಿಚಾರ ತಿಳಿದ ನಂತರ ಟ್ವಿಟ್ಟರ್ ಈ ನಕಲಿ ಖಾತೆಯನ್ನು ಮುಟ್ಟುಗೋಲು ಹಾಕಿದೆ.

'ಡಬ್ಲ್ಯೂ‌ಡಬ್ಲ್ಯೂ‌ಡಬ್ಲ್ಯೂ‌.ಟ್ವಿಟ್ಟರ್.ಕಾಮ್/ನಂದನ್‌ನಿಲೇಕಣಿ' ಎಂಬ ವಿಳಾಸದಲ್ಲಿ 19 ಅಪ್‌ಡೇಟ್‌ಗಳನ್ನು ಮಾಡಲಾಗಿತ್ತು. ಇಲ್ಲಿ ಸುಮಾರು 1200ರಷ್ಟು ನಿಲೇಕಣಿ ಹಿಂಬಾಲಕರು ಹುಟ್ಟಿಕೊಂಡಿದ್ದರು. ನಕಲಿ 'ನಿಲೇಕಣಿ' ಹಲವು ವಿಚಾರಗಳನ್ನು ತಿಳಿಸುತ್ತಾ ಹಿಂಬಾಲಕರಿಗೆ ಮಂಕು ಬೂದಿ ಎರಚಿದ್ದ.

ಇನ್ಫೋಸಿಸ್ ಸಹ-ಸಂಸ್ಥಾಪಕ ಎಂದ ಮೇಲೆ ಹಿಂಬಾಲಕರು ಹುಟ್ಟಿಕೊಳ್ಳುವುದು ಸಾಮಾನ್ಯ. ಇಲ್ಲಿ ನಿಲೇಕಣಿಯವರ ಸಹಿಯನ್ನೂ ಬಳಸಿಕೊಳ್ಳುವ ಮೂಲಕ ನಂಬಿಕೆ ಹುಟ್ಟಿಸಲಾಗಿತ್ತು.

ಸಾಮಾಜಿಕ ಸಂವಹನದ ಟ್ವಿಟ್ಟರ್ ಆನ್‌ಲೈನ್ ಖಾತೆ ಬಗ್ಗೆ ನಿಲೇಕಣಿಯವರಲ್ಲಿ ಪತ್ರಕರ್ತರು ಪ್ರಶ್ನಿಸಿದಾಗ, ತಾನು ಯಾವುದೇ ವೈಯಕ್ತಿಕ ಅಕೌಂಟ್ ಹೊಂದಿಲ್ಲ ಎಂದು ಸ್ಪಷ್ಟಪಡಿಸಿದ್ದರು.

ಈ ಹಿನ್ನಲೆಯಲ್ಲಿ ಟ್ವಿಟ್ಟರ್ ಸಂಸ್ಥೆಯು ನಿಲೇಕಣಿ ಹೆಸರಿನ ಖಾತೆಯನ್ನು ಮುಟ್ಟುಗೋಲು ಹಾಕಿಕೊಂಡಿದೆ. ಈಗ ನಿಲೇಕಣಿಯವರ ಹೆಸರಿನ ಟ್ವಿಟ್ಟರ್‌ಗೆ ನಾವು ಭೇಟಿ ಕೊಡಲು ವಿಳಾಸ ಟೈಪಿಸಿದಲ್ಲಿ, ಖಾತೆ ಅಮಾನತು ಮಾಡಲಾಗಿದೆ ಎಂಬ ಸಂದೇಶ ತೆರೆಯ ಮೇಲೆ ಬರುತ್ತದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಏರ್ ಇಂಡಿಯಾ ನಿರ್ದೇಶಕರ ಆಯ್ಕೆ ಕಸರತ್ತು ಆರಂಭ
ಆ.1ರಿಂದ ರೈಲಿನಲ್ಲಿ ಇಜ್ಜತ್, ಪರಿಷ್ಕೃತ ತತ್ಕಾಲ್‌
ಹೊಸ ಭರವಸೆಗಳ ಬೆನ್ನೇರಿರುವ ತೈಲ ಮಾರುಕಟ್ಟೆ
ಝಂಡು ಫಾರ್ಮಾ ಲಾಭಂಶ ದ್ವಿಗುಣ
1 ಕೋಟಿ ಹುದ್ದೆ ಸೃಷ್ಟಿ
ಯೂರೋಪ್ ಮಾರುಕಟ್ಟೆಯಲ್ಲಿ ಚಿನ್ನ ಬೆಲೆಯೇರಿಕೆ