ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಜುಲೈಯಲ್ಲಿ ರೈಲ್ವೇ ಗಳಿಕೆ ಶೇ.8 ಹೆಚ್ಚಳ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜುಲೈಯಲ್ಲಿ ರೈಲ್ವೇ ಗಳಿಕೆ ಶೇ.8 ಹೆಚ್ಚಳ
ಆರ್ಥಿಕ ಹಿಂಜರಿತವನ್ನು ಮೆಟ್ಟಿ ನಿಂತಿರುವ ಭಾರತೀಯ ರೈಲ್ವೇಯು ಜುಲೈ ತಿಂಗಳ ಆರಂಭಿಕ 10 ದಿನಗಳಲ್ಲಿ ಶೇಕಡಾ 8ಕ್ಕಿಂತಲೂ ಹೆಚ್ಚು ಆದಾಯ ದಾಖಲಿಸಿದೆ.

ಜುಲೈ ತಿಂಗಳ ಒಂದರಿಂದ 10ರೊಳಗಿನ ಅವಧಿಯಲ್ಲಿ 2,194.82 ಕೋಟಿ ರೂಪಾಯಿಗಳನ್ನು ರೈಲ್ವೇಯು ಗಳಿಸಿದ್ದು, ಕಳೆದ ವರ್ಷದ ಇದೇ ಅವಧಿಯಲ್ಲಿ 2,024.51 ಕೋಟಿಯಷ್ಟೇ ಆದಾಯ ಕ್ರೋಢೀಕರಿಸಲು ಸಾಧ್ಯವಾಗಿತ್ತು. ಆ ಮೂಲಕ ಈ ಬಾರಿ ಶೇಕಡಾ 8.41ರ ಆದಾಯ ಹೆಚ್ಚಳ ದಾಖಲಾಗಿದೆ.

ಸರಕು ಸಾಗಣಿಕೆಯಲ್ಲೂ ಶೇಕಡಾ 6.25ರ ಹೆಚ್ಚಳ ದಾಖಲಾಗಿದೆ. ಕಳೆದ ವರ್ಷದ ಜುಲೈ 1ರಿಂದ 10ರವರೆಗಿನ ಅವಧಿಯಲ್ಲಿ 1,360.48 ಕೋಟಿ ರೂ.ಗಳನ್ನು ರೈಲ್ವೇ ಗಳಿಸಿದ್ದರೆ, ಈ ಬಾರಿಯದು 1,445.45 ಕೋಟಿ ತಲುಪಿದೆ.

ಒಟ್ಟು ಪ್ರಯಾಣಿಕರ ವಿಭಾಗದಲ್ಲೂ ರೈಲ್ವೇ ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡಾ 12.92ರ ಪ್ರಗತಿ ಸಾಧಿಸಿದೆ. ಕಳೆದ ಬಾರಿಯ ಈ ಅವಧಿಯಲ್ಲಿ 594.26 ಕೋಟಿ ರೂಪಾಯಿಗಳಿದ್ದ ಪ್ರಯಾಣಿಕರ ವಿಭಾಗದ ಗಳಿಕೆಯು ಈ ಬಾರಿ 671.03 ಕೋಟಿಯನ್ನು ಮುಟ್ಟಿದೆ.

ಕೋಚಿಂಗ್ ವಿಭಾಗದ ಆದಾಯವು ಶೇಕಡಾ 19.43ರ ಏರಿಕೆ ದಾಖಲಿಸಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ 47.29 ಕೋಟಿಯಿದ್ದದ್ದು, ಈ ಬಾರಿ 56.48 ಕೋಟಿಯಾಗಿದೆ.

ಒಟ್ಟಾರೆ ಪ್ರಯಾಣಿಕರ ಟಿಕೆಟ್ ಕಾದಿರಿಸುವಿಕೆಯಲ್ಲಿ ಶೇಕಡಾ 3.88ರ ಏರಿಕೆ ದಾಖಲಾಗಿದೆ. ಕಳೆದ ವರ್ಷದ ಜುಲೈ 1ರಿಂದ 10ರ ಅವಧಿಯಲ್ಲಿ 203.12 ಮಿಲಿಯನ್ ಪ್ರಯಾಣಿಕರು ಮುಂಗಡ ಟಿಕೆಟ್ ಖರೀದಿಸಿದ್ದರೆ, ಈ ಬಾರಿಯದು 211.01 ಮಿಲಿಯನ್ ಆಗಿದೆ.

ಉಪನಗರ ಮತ್ತು ಗ್ರಾಮಾಂತರ ವಲಯಗಳ ಮುಂಗಡ ಟಿಕೆಟ್ ಕಾದಿರಿಸುವಿಕೆ ಸಂಖ್ಯೆಯು 2009ರ ಜುಲೈ 1ರಿಂದ 10ರವರೆಗಿನ ಅವಧಿಯಲ್ಲಿ ಕ್ರಮವಾಗಿ 111.48 ಮಿಲಿಯನ್ ಮತ್ತು 99.53 ಮಿಲಿಯನ್‌ಗಳಾಗಿವೆ. ಕಳೆದ ಬಾರಿ ಇದು 112.63 ಮಿಲಿಯನ್ ಮತ್ತು 90.49 ಮಿಲಿಯನ್‌ಗಳಾಗಿತ್ತು. ಉಪನಗರ ಮುಂಗಡ ಟಿಕೆಟ್ ಸಂಖ್ಯೆಯಲ್ಲಿ ಶೇಕಡಾ 1.02ರ ಕುಸಿತ ಕಂಡಿದ್ದರೆ, ಗ್ರಾಮಾಂತರದಲ್ಲಿ ಶೇಕಡಾ 9.99ರ ಏರಿಕೆ ದಾಖಲಾಗಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಟ್ವಿಟ್ಟರ್‌ನಿಂದ 'ನಿಲೇಕಣಿ' ಖಾತೆ ಮುಟ್ಟುಗೋಲು
ಏರ್ ಇಂಡಿಯಾ ನಿರ್ದೇಶಕರ ಆಯ್ಕೆ ಕಸರತ್ತು ಆರಂಭ
ಆ.1ರಿಂದ ರೈಲಿನಲ್ಲಿ ಇಜ್ಜತ್, ಪರಿಷ್ಕೃತ ತತ್ಕಾಲ್‌
ಹೊಸ ಭರವಸೆಗಳ ಬೆನ್ನೇರಿರುವ ತೈಲ ಮಾರುಕಟ್ಟೆ
ಝಂಡು ಫಾರ್ಮಾ ಲಾಭಂಶ ದ್ವಿಗುಣ
1 ಕೋಟಿ ಹುದ್ದೆ ಸೃಷ್ಟಿ