ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಒಂಟೆ ಹಾಲಿನ ಚಾಕೊಲೇಟು ಬಲು ಟೇಸ್ಟು..!
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಒಂಟೆ ಹಾಲಿನ ಚಾಕೊಲೇಟು ಬಲು ಟೇಸ್ಟು..!
ದನದ ಹಾಲಿಗಿಂತಲೂ ಪೌಷ್ಠಿಕಾಂಶಗಳನ್ನು ಹೊಂದಿದೆ ಎನ್ನಲಾಗುವ ಒಂಟೆಯ ಹಾಲಿನ ಚಾಕೊಲೇಟುಗಳು ಇನ್ನೇನು ಕೆಲವೇ ದಿನಗಳಲ್ಲಿ ವಿಶ್ವದಾದ್ಯಂತ ದೊರೆಯಲಿದೆ.

ವಿಶ್ವದಲ್ಲೇ ಮೊತ್ತ ಮೊದಲ ಬಾರಿಗೆ ಒಂಟೆ ಹಾಲಿನಿಂದ ಚಾಕೊಲೇಟ್ ತಯಾರಿಸಿದ ಸಂಸ್ಥೆ ಎಂಬ ಖ್ಯಾತಿಗೆ ಪಾತ್ರವಾಗಿರುವ ದುಬೈನ 'ಆಲ್ ನಸ್ಮಾ' ಇದೀಗ ಯೂರೋಪ್, ಜಪಾನ್ ಮತ್ತು ಅಮೆರಿಕಾದಲ್ಲೂ ತನ್ನ ಉತ್ಪನ್ನಗಳನ್ನು ಮಾರಾಟ ನಡೆಸಲಿದೆ.
Al Nassma
PR

ಆಲ್ ನಸ್ಮಾ ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ಮಾರ್ಟಿನ್ ವಾನ್ ಅಲ್ಮಾಸಿಕ್ ಮಾತನಾಡುತ್ತಾ, ತಾವು ಮೊದಲು ಸೌದಿ ಅರೇಬಿಯಾವನ್ನು ಪ್ರವೇಶಿಸಬೇಕಾಗಿದೆ; ನಂತರ ಬಹರೈನ್, ಕತಾರ್, ಕುವೈಟ್‌ ಮಾರುಕಟ್ಟೆಗಳಲ್ಲಿ ಉತ್ಪನ್ನಗಳನ್ನು ಪರಿಚಯಿಸಲಿದ್ದು, ಕೆಲವೇ ತಿಂಗಳಲ್ಲಿ ಅಮೆರಿಕಾದಲ್ಲೂ ಲಭ್ಯವಾಗುವಂತೆ ಮಾಡುತ್ತೇವೆ ಎಂದಿದ್ದಾರೆ.

ಈ ಸಂಸ್ಥೆಯು ಸುಮಾರು 3,000 ಒಂಟೆಗಳನ್ನು ದುಬೈ ವಲಯದಲ್ಲಿ ಹೊಂದಿದ್ದು, ಅಲ್ಲೇ ಚಾಕೋಲೇಟ್‌ಗಳನ್ನು ಮಾರಾಟ ಮಾಡಲಾಗುತ್ತಿದೆ. ಜತೆಗೆ ಐಷಾರಾಮಿ ಹೊಟೇಲುಗಳು ಮತ್ತು ಖಾಸಗಿ ವಿಮಾನಗಳಲ್ಲೂ ಗ್ರಾಹಕರಿಗೆ ಒದಗಿಸಲಾಗುತ್ತಿದೆ. ಶೀಘ್ರದಲ್ಲೇ ಆನ್‌ಲೈನ್ ಮೂಲಕ ಖರೀದಿಸುವ ವ್ಯವಸ್ಥೆಯನ್ನು ನಾವು ಪರಿಚಯಿಸಲಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಇಂತಿಪ್ಪ ಒಂಟೆ ಹಾಲಿನಲ್ಲಿ ಅದೇನಿದೆ ಎಂಬುದನ್ನೂ ಕಂಪನಿ ವಿವರಿಸಿದೆ. ಮೊದಲನೆಯದಾಗಿ ಒಂಟೆ ಹಾಲು ದನದ ಹಾಲಿಗಿಂತ ಆರೋಗ್ಯಕ್ಕೆ ಉತ್ತಮ. ದನದ ಹಾಲಿಗಿಂತ ಐದು ಪಟ್ಟು ಹೆಚ್ಚಿನ ವಿಟಮಿನ್ 'ಸಿ' ಒಂಟೆ ಹಾಲಿನಲ್ಲಿದೆ. ಕೊಬ್ಬು ಮತ್ತು ಕಾರ್ಬೋಹೈಡ್ರೇಟ್ ಅಂಶ ಒಂಟೆ ಹಾಲಿನಲ್ಲಿ ಕಡಿಮೆ. ಇನ್ಸುಲಿನ್ ಅಂಶ ಯಥೇಚ್ಛವಾಗಿರುತ್ತದೆ. ಈ ಕಾರಣದಿಂದ ಡಯಾಬಿಟೀಸ್ ಇರುವವರಿಗೆ ಒಂಟೆ ಹಾಲು ರಾಮಬಾಣ.

ಈಗಾಗಲೇ ಭಾರತದಲ್ಲಿ ಒಂಟೆ ಹಾಲಿನ ಡೈರಿಗಳೂ ಕಾರ್ಯಾಚರಿಸುತ್ತಿವೆ. ರಾಜಸ್ತಾನ ಹಾಲು ಉತ್ಪಾದಕರ ಸಂಘವು ಒಂಟೆ ಹಾಲನ್ನು ಜೈಪುರ, ಬಿಕನೇರ್ ಮತ್ತು ರಾಜಧಾನಿ ದೆಹಲಿಯಲ್ಲಿ ಮಾರಾಟ ಮಾಡುತ್ತಿದೆ.

ಒಂಟೆ ಹಾಲಿನ ವೈಜ್ಞಾನಿಕ ಮಹತ್ವವನ್ನು ತಿಳಿದುಕೊಂಡಿರುವ ಅನೇಕರು ಮುಗಿ ಬಿದ್ದು ಖರೀದಿಸುತ್ತಿದ್ದಾರಂತೆ. ದನದ ಹಾಲಿಗೆ ಹೋಲಿಸಿದರೆ ರುಚಿಯೂ ಜಾಸ್ತಿ. ಬೆಲೆಯೂ ಕಡಿಮೆ.

ಆಯುಷ್ಯ ವೃದ್ಧಿಯಲ್ಲೂ ಒಂಟೆ ಹಾಲಿನ ಪಾತ್ರ ಮಹತ್ವವಾದುದು ಎನ್ನುವುದು ಹಲವರ ಅಭಿಪ್ರಾಯ. ಅದಕ್ಕಿಂತಲೂ ಆಸಕ್ತಿದಾಯಕ ವಿಚಾರವೆಂದರೆ ಲೈಂಗಿಕ ಶಕ್ತಿಯನ್ನು ವೃದ್ಧಿಸುವ ಸಾಮರ್ಥ್ಯವನ್ನೂ ಒಂಟೆ ಹಾಲು ಹೊಂದಿರುವುದು. ಇದು ದೇಶೀಯ ವಯಾಗ್ರದಂತೆ ಕೆಲಸ ಮಾಡುತ್ತದೆ ಎಂದೂ ಹೇಳಲಾಗುತ್ತದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಜುಲೈಯಲ್ಲಿ ರೈಲ್ವೇ ಗಳಿಕೆ ಶೇ.8 ಹೆಚ್ಚಳ
ಟ್ವಿಟ್ಟರ್‌ನಿಂದ 'ನಿಲೇಕಣಿ' ಖಾತೆ ಮುಟ್ಟುಗೋಲು
ಏರ್ ಇಂಡಿಯಾ ನಿರ್ದೇಶಕರ ಆಯ್ಕೆ ಕಸರತ್ತು ಆರಂಭ
ಆ.1ರಿಂದ ರೈಲಿನಲ್ಲಿ ಇಜ್ಜತ್, ಪರಿಷ್ಕೃತ ತತ್ಕಾಲ್‌
ಹೊಸ ಭರವಸೆಗಳ ಬೆನ್ನೇರಿರುವ ತೈಲ ಮಾರುಕಟ್ಟೆ
ಝಂಡು ಫಾರ್ಮಾ ಲಾಭಂಶ ದ್ವಿಗುಣ