ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಖರೀದಿಗೆ ಹಿಂದೇಟು; ಚಿನ್ನ ದರ ಕುಸಿತ, ಬೆಳ್ಳಿ ಸ್ಥಿರ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಖರೀದಿಗೆ ಹಿಂದೇಟು; ಚಿನ್ನ ದರ ಕುಸಿತ, ಬೆಳ್ಳಿ ಸ್ಥಿರ
ಬಹುತೇಕ ಸ್ಥಿರವಾಗಿಯೇ ಕಂಡು ಬಂದ ಚಿನಿವಾರ ಪೇಟೆಯಲ್ಲಿ ದುಬಾರಿ ಮೊತ್ತಕ್ಕೆ ಚಿನ್ನ ಖರೀದಿಸಲು ಹಿಂದೇಟು ಹಾಕಿದ ಕಾರಣ ಪ್ರತಿ 10 ಗ್ರಾಂಗಳಿಗೆ 20 ರೂಪಾಯಿಗಳಂತೆ ಚಿನ್ನ ದರ ಕುಸಿದಿದ್ದು, 15,070 ರೂಪಾಯಿಗಳನ್ನು ತಲುಪಿದೆ.

ಅಧಿಕ ದರದ ಕಾರಣದಿಂದ ಅಮೂಲ್ಯ ಲೋಹದ ಖರೀದಿ ಪ್ರಕ್ರಿಯೆ ನಿಯಂತ್ರಣಕ್ಕೊಳಗಾಯಿತು ಎಂದು ಮಾರುಕಟ್ಟೆ ವಲಯ ಇಂದಿನ ಸ್ಥಿತಿಗೆ ಪ್ರತಿಕ್ರಿಯಿಸಿದೆ.

ಉತ್ಕೃಷ್ಟ ಚಿನ್ನ ಮತ್ತು ಆಭರಣ ದರವು ಪ್ರತಿ 10 ಗ್ರಾಂಗಳಿಗೆ 20 ರೂಪಾಯಿಯಂತೆ ಕುಸಿದು ಕ್ರಮವಾಗಿ 15,070 ಹಾಗೂ 14,920 ರೂಪಾಯಿಗಳನ್ನು ತಲುಪಿದೆ.

ಪವನ್ ಚಿನ್ನದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಪ್ರತಿ ಎಂಟು ಗ್ರಾಂ ಚಿನ್ನದ ಬೆಲೆ 12,450 ರೂಪಾಯಿ ಮುಂದುವರಿದಿದೆ.

ಸಿದ್ಧ ಬೆಳ್ಳಿ ದರವು ಮಹತ್ವದ ಬದಲಾವಣೆಯಿಲ್ಲದೆ 22,350 ರೂಪಾಯಿಗಳಂತೆ ಪ್ರತಿ ಕೆ.ಜಿ. ವ್ಯವಹಾರ ಕುದುರಿಸಿದೆ. ಆದರೆ ವಾರವನ್ನಾಧರಿಸಿದ ಬೆಳ್ಳಿದರದಲ್ಲಿ ಐದು ರೂಪಾಯಿಗಳ ಕುಸಿತ ಕಂಡಿದ್ದು, ಪ್ರತಿ ಕಿಲೋ ಬೆಲೆ 22,250 ರೂಪಾಯಿಗಳೆಂದು ದಾಖಲಾಯಿತು.

ಬೆಳ್ಳಿ ನಾಣ್ಯಗಳ ದರವು ಈ ಹಿಂದಿನ ಮಟ್ಟವನ್ನೇ ಕಾಯ್ದುಕೊಂಡಿದ್ದು, ಖರೀದಿಗೆ 29,400 ಹಾಗೂ ಮಾರಾಟಕ್ಕೆ 29,500 ರೂಪಾಯಿಗಳನ್ನು ಪ್ರತೀ 100 ನಾಣ್ಯಗಳಿಗೆ ದಾಖಲಿಸಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಒಂಟೆ ಹಾಲಿನ ಚಾಕೊಲೇಟು ಬಲು ಟೇಸ್ಟು..!
ಜುಲೈಯಲ್ಲಿ ರೈಲ್ವೇ ಗಳಿಕೆ ಶೇ.8 ಹೆಚ್ಚಳ
ಟ್ವಿಟ್ಟರ್‌ನಿಂದ 'ನಿಲೇಕಣಿ' ಖಾತೆ ಮುಟ್ಟುಗೋಲು
ಏರ್ ಇಂಡಿಯಾ ನಿರ್ದೇಶಕರ ಆಯ್ಕೆ ಕಸರತ್ತು ಆರಂಭ
ಆ.1ರಿಂದ ರೈಲಿನಲ್ಲಿ ಇಜ್ಜತ್, ಪರಿಷ್ಕೃತ ತತ್ಕಾಲ್‌
ಹೊಸ ಭರವಸೆಗಳ ಬೆನ್ನೇರಿರುವ ತೈಲ ಮಾರುಕಟ್ಟೆ