ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ತಂತ್ರಾಂಶ ನಕಲಿ ಮಾಡಿದವನಿಗೆ 10 ಲಕ್ಷ ದಂಡ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ತಂತ್ರಾಂಶ ನಕಲಿ ಮಾಡಿದವನಿಗೆ 10 ಲಕ್ಷ ದಂಡ
ಸಾಫ್ಟ್‌ವೇರ್ ದೈತ್ಯ ಮೈಕ್ರೋಸಾಫ್ಟ್ ಕಾರ್ಪೊರೇಷನ್ ಮತ್ತು ಅಡೋಬ್ ಸಿಸ್ಟಮ್ಸ್‌ಗಳ ಪರವಾನಗಿಯುಳ್ಳ ತಂತ್ರಾಂಶಗಳನ್ನು ನಕಲಿ ಮಾಡಿದ ಉದ್ಯಮಿಯೊಬ್ಬನಿಗೆ ದೆಹಲಿ ಹೈಕೋರ್ಟ್ 10 ಲಕ್ಷ ರೂಪಾಯಿಗಳ ದಂಡ ವಿಧಿಸಿದೆ.

ಕಳೆದ ಏಳು ವರ್ಷಗಳಿಂದ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ಹೋರಾಟದಲ್ಲಿ ಸಾಫ್ಟ್‌ವೇರ್ ಕಂಪನಿಗಳು ಗೆದ್ದಿವೆ. ತಂತ್ರಾಂಶಗಳನ್ನು ನಕಲಿ ಮಾಡುತ್ತಿದ್ದ ಆರೋಪ ಸಾಬೀತಾದ ಹಿನ್ನಲೆಯಲ್ಲಿ ಅಪರಾಧಿ ಮಹೇಂದ್ರ ಸಕ್ಸೆನಾ ಮೈಕ್ರೋಸಾಫ್ಟ್ ಮತ್ತು ಅಡೋಬ್ ಸಂಸ್ಥೆಗಳಿಗೆ 10 ಲಕ್ಷ ರೂಪಾಯಿಗಳನ್ನು ನೀಡಬೇಕೆಂದು ನ್ಯಾಯಮೂರ್ತಿ ಮನಮೋಹನ್ ಸಿಂಗ್ ಆದೇಶಿಸಿದ್ದಾರೆ.

ತಂತ್ರಾಂಶಗಳನ್ನು ನಕಲಿ ಮಾಡಿರುವುದರಿಂದ ಆಪಾದಕರಾದ ಮೈಕ್ರೋಸಾಫ್ಟ್ ಮತ್ತು ಅಡೋಬ್ ಕಂಪನಿಗಳ ಆರ್ಥಿಕತೆಗೆ ಮಾತ್ರ ಹೊಡೆತ ಬಿದ್ದಿರುವುದಲ್ಲ. ಸಾರ್ವಜನಿಕರಿಗೂ ದೊಡ್ಡ ಮಟ್ಟದಲ್ಲಿ ಮೋಸ ಮಾಡಲಾಗಿದೆ. ಇದೇ ಸಂದರ್ಭದಲ್ಲಿ ಇಂತಹ ಕಾನೂನು ಬಾಹಿರ ಕಾರ್ಯಗಳಿಂದ ಸರಕಾರವೂ ದೊಡ್ಡ ಆದಾಯವನ್ನು ಕಳೆದುಕೊಂಡಿದೆ. ನಕಲಿಕಾರರು ಯಾವುದೇ ಖಾತೆಯನ್ನು ನಿರ್ವಹಿಸದೇ ಅಥವಾ ತೆರಿಗೆಗಳನ್ನು ಪಾವತಿಸದೇ ಇರುವುದರಿಂದ ನಷ್ಟವಾಗಿದೆ ಎಂದು ನ್ಯಾಯಾಲಯ ತಿಳಿಸಿದೆ.

ಎರಡೂ ಕಂಪನಿಗಳು ಮನವಿ ಸಲ್ಲಿಸಿದ್ದ ಹಿನ್ನಲೆಯಲ್ಲಿ ನ್ಯಾಯಲಯವು ತನಿಖೆಗೆ ಆದೇಶಿಸಿತ್ತು. ಈ ಸಂದರ್ಭದಲ್ಲಿ ಸಕ್ಸೇನಾ ಬಳಿ 16 ನಕಲಿ ಸೀಡಿಗಳು ಮತ್ತು ಪರವಾನಗಿ ರಹಿತ ತಂತ್ರಾಂಶಗಳು ಪತ್ತೆಯಾಗಿದ್ದವು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಅಮರನಾಥ ಯಾತ್ರಿಗಳಿಗೆ ಸಬ್ಸಿಡಿ ನೀಡಲ್ಲ: ಸರ್ಕಾರ
ಖರೀದಿಗೆ ಹಿಂದೇಟು; ಚಿನ್ನ ದರ ಕುಸಿತ, ಬೆಳ್ಳಿ ಸ್ಥಿರ
ಒಂಟೆ ಹಾಲಿನ ಚಾಕೊಲೇಟು ಬಲು ಟೇಸ್ಟು..!
ಜುಲೈಯಲ್ಲಿ ರೈಲ್ವೇ ಗಳಿಕೆ ಶೇ.8 ಹೆಚ್ಚಳ
ಟ್ವಿಟ್ಟರ್‌ನಿಂದ 'ನಿಲೇಕಣಿ' ಖಾತೆ ಮುಟ್ಟುಗೋಲು
ಏರ್ ಇಂಡಿಯಾ ನಿರ್ದೇಶಕರ ಆಯ್ಕೆ ಕಸರತ್ತು ಆರಂಭ