ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ವಿಪ್ರೋ ನಿವ್ವಳ ಲಾಭದಲ್ಲಿ ಶೇ.12ರ ಪ್ರಗತಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವಿಪ್ರೋ ನಿವ್ವಳ ಲಾಭದಲ್ಲಿ ಶೇ.12ರ ಪ್ರಗತಿ
ಜೂನ್ 30ಕ್ಕೆ ಅಂತ್ಯಗೊಂಡ ಮೊದಲ ತ್ರೈಮಾಸಿಕ ಅವಧಿಯಲ್ಲಿ 1,015.50 ಕೋಟಿ ರೂಪಾಯಿಗಳ ನಿವ್ವಳ ಲಾಭ ಗಳಿಸಿರುವ ಸಾಫ್ಟ್‌‌ವೇರ್ ದಿಗ್ಗಜ ವಿಪ್ರೋ ಶೇಕಡಾ 11.86ರ ಪ್ರಗತಿ ದಾಖಲಿಸಿರುವುದಾಗಿ ತಿಳಿಸಿದೆ.

ಈ ಹಿಂದಿನ ಆರ್ಥಿಕ ವರ್ಷದ ಜೂನ್‌ಗೆ ಅಂತ್ಯಗೊಂಡ ಅವಧಿಯಲ್ಲಿ ವಿಪ್ರೋ 907.80 ಕೋಟಿ ರೂ.ಗಳ ನಿವ್ವಳ ಲಾಭ ದಾಖಲಿಸಿತ್ತು ಎಂದು ಬಾಂಬೆ ಶೇರು ಮಾರುಕಟ್ಟೆಗೆ ಸಲ್ಲಿಸಿದ ವರದಿಯಲ್ಲಿ ನಮೂದಿಸಿದೆ.

ಜೂನ್‌ಗೆ ಕೊನೆಗೊಂಡ ಅವಧಿಯಲ್ಲಿ ಆದಾಯದ ಮಟ್ಟವು ಶೇಕಡಾ 4.80 ಏರಿಕೆಯಾಗಿದ್ದು, 6,289.10 ಕೋಟಿ ರೂ.ಗಳನ್ನು ತಲುಪಿದೆ. ಇದೇ ಅವಧಿಯ ಕಳೆದ ವರ್ಷದ ಆದಾಯವು 6,001.30 ಕೋಟಿ. ರೂಗಳಾಗಿತ್ತು.

ಅಲ್ಲದೆ ಮೊದಲ ತ್ರೈಮಾಸಿಕ ಅವಧಿಯಲ್ಲಿ ಮಾಹಿತಿ ತಂತ್ರಜ್ಞಾನ ಸಂಸ್ಥೆಯು 26 ಹೊಸ ಗ್ರಾಹಕರನ್ನು ತನ್ನ ಪಟ್ಟಿಗೆ ಸೇರಿಸಿಕೊಂಡಿರುವುದಾಗಿ ವಿಪ್ರೋ ಹೇಳಿಕೊಂಡಿದೆ.

ಐಟಿ ಸರ್ವಿಸ್‌ನ ವರ್ಷದಿಂದ ವರ್ಷವನ್ನಾಧರಿಸಿದ ಲಾಭದಲ್ಲಿ ಕಂಪನಿಯು ಜೂನ್‌ಗೆ ಅಂತ್ಯಗೊಂಡ ತ್ರೈಮಾಸಿಕ ಅವಧಿಯಲ್ಲಿ ಶೇಕಡಾ 3.3ರ ಕುಸಿತವನ್ನು ಕಂಡಿದ್ದು, 1,033 ಮಿಲಿಯನ್ ಡಾಲರ್ (ಸುಮಾರು 4,998 ಕೋಟಿ)ಗಳನ್ನು ತಲುಪಿದೆ.

ಈ ಬಗ್ಗೆ ಆಶಾಭಾವ ಹೊಂದಿರುವ ಸಂಸ್ಥೆಯು ಸೆಪ್ಟೆಂಬರ್ 30ಕ್ಕೆ ಕೊನೆಗೊಳ್ಳುವ ತ್ರೈಮಾಸಿಕ ಅವಧಿಯಲ್ಲಿ ಐಟಿ ಸರ್ವಿಸಸ್‌ನಿಂದ 1,035 ಮಿಲಿಯನ್ ಡಾಲರ್‌ಗಳಿಂದ 1,053 ಮಿಲಿಯನ್ ಡಾಲರುಗಳಷ್ಟು ಆದಾಯ ಹೊಂದುವ ನಿರೀಕ್ಷೆಗಳನ್ನಿಟ್ಟುಕೊಂಡಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕಚ್ಚಾ ಸಕ್ಕರೆ ಅಮುದಿಗೆ ಕೇಂದ್ರ ಅಸ್ತು
ಉತ್ತೇಜನ ಪ್ಯಾಕೇಜ್‌ಗಳ ಕೊಡುಗೆಯಿಲ್ಲ :ಮೊಂಟೆಕ್
ತಂತ್ರಾಂಶ ನಕಲಿ ಮಾಡಿದವನಿಗೆ 10 ಲಕ್ಷ ದಂಡ
ಅಮರನಾಥ ಯಾತ್ರಿಗಳಿಗೆ ಸಬ್ಸಿಡಿ ನೀಡಲ್ಲ: ಸರ್ಕಾರ
ಖರೀದಿಗೆ ಹಿಂದೇಟು; ಚಿನ್ನ ದರ ಕುಸಿತ, ಬೆಳ್ಳಿ ಸ್ಥಿರ
ಒಂಟೆ ಹಾಲಿನ ಚಾಕೊಲೇಟು ಬಲು ಟೇಸ್ಟು..!