ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಗರಿಷ್ಠ ಕುಡುಕ ಪೈಲಟ್‌ಗಳಿರೋದು ಮಲ್ಯರ ಕಿಂಗ್‌ಫಿಶ‌‌ರ್‌ನಲ್ಲಿ..!
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಗರಿಷ್ಠ ಕುಡುಕ ಪೈಲಟ್‌ಗಳಿರೋದು ಮಲ್ಯರ ಕಿಂಗ್‌ಫಿಶ‌‌ರ್‌ನಲ್ಲಿ..!
ಎಲ್ಲಾ ಓಕೆ.. ಕೂಲ್ ಡ್ರಿಂಕ್ ಯಾಕೆ?.. ಎಂದೇ ಪ್ರಚಾರ ಮಾಡಿ ಪಾನಪ್ರಿಯರ ಬಾಟಲಿ ಕುಣಿತಕ್ಕೆ ಗೆಜ್ಜೆ ಕಟ್ಟಿದ್ದ ವಿಜಯ ಮಲ್ಯ ತನ್ನ ಪೈಲಟ್‌ಗಳನ್ನೂ ಅದರಿಂದ ಹೊರತುಪಡಿಸಲು ಸಾಧ್ಯವಾಗಿಲ್ಲ ಎನ್ನವುದು ಸರಕಾರ ನೀಡಿರುವ ವರದಿಯಲ್ಲಿ ಬಹಿರಂಗವಾಗಿದೆ. ಅದರ ಪ್ರಕಾರ ವೈದ್ಯಕೀಯ ಪರೀಕ್ಷೆ ನಡೆಸುವಾಗ ಸಿಕ್ಕಿ ಬಿದ್ದ ಪೈಲಟ್‌ಗಳಲ್ಲಿ ಹೆಚ್ಚಿನವರು ಕಿಂಗ್‌ಫಿಶರ್ ಕಂಪನಿಯವರು.
Vijay Mallya
PTI

ನರೇಶ್ ಗೋಯಲ್‌ರ ಜೆಟ್ ಸೇರಿದಂತೆ ಹಲವು ವಿಮಾನಯಾನ ಸಂಸ್ಥೆಗಳ ಪೈಲಟ್‌ಗಳು ಕಳೆದೊಂದು ವರ್ಷದ ಅವಧಿಯಲ್ಲಿ ವಿಮಾನ ಚಾಲನೆಗೂ ಮುನ್ನ ನಡೆಸುವ ಮದ್ಯ ಸೇವನೆ ಪರೀಕ್ಷೆಯಲ್ಲಿ ಸಿಕ್ಕಿ ಬಿದ್ದಿದ್ದಾರೆ ಎಂದು ಸರಕಾರ ರಾಜ್ಯಸಭೆಗೆ ಮಾಹಿತಿ ನೀಡಿದೆ.

ಹಲವು ಪಾನೀಯ ಕಂಪನಿಗಳ ಮಾಲೀಕತ್ವ ಹೊಂದಿರುವ ವಿಜಯ ಮಲ್ಯರ ಜನಪ್ರಿಯ 'ಕಿಂಗ್‌ಫಿಶರ್ ಬಿಯರ್' ಕಂಪನಿಯ ಹೆಸರನ್ನೇ ವಿಮಾನಯಾನ ಸಂಸ್ಥೆಗೂ ಇಟ್ಟಿದ್ದರು ಎನ್ನುವುದನ್ನೂ ನಾವು ನೆನಪಿಸಿಕೊಳ್ಳಬಹುದು.

"ಕಿಂಗ್‌ಫಿಶರ್‌ ವಿಮಾನಯಾನ ಸಂಸ್ಥೆಯ ಎಂಟು ಪೈಲಟ್‌ಗಳು, ಇಂಡಿಗೋ ಮತ್ತು ಸ್ಪೈಸ್‌ಜೆಟ್‌ನಿಂದ ತಲಾ ಆರು ಪೈಲಟ್‌ಗಳು, ಜೆಟ್‌ಲೈಟ್, ಜೆಟ್ ಏರ್‌ವೇಸ್ ಮತ್ತು ಪಾರಾಮೌಂಟ್‌ ವಿಮಾನಯಾನ ಸಂಸ್ಥೆಗಳ ತಲಾ ಮೂರು ಪೈಲಟ್‌ಗಳು ವಿಮಾನ ಹಾರಾಟಕ್ಕೂ ಮುಂಚೆ ನಡೆಸುವ ಆಲ್ಕೋಹಾಲ್ ವೈದ್ಯಕೀಯ ಪರೀಕ್ಷೆಯಲ್ಲಿ ಸಿಕ್ಕಿಬಿದ್ದಿದ್ದಾರೆ" ಎಂದು ನಾಗರಿಕ ವಿಮಾನಯಾನ ಸಚಿವ ಪ್ರಫುಲ್ ಪಟೇಲ್ ತನ್ನ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ಕಳೆದೊಂದು ವರ್ಷದಲ್ಲಿ ಖಾಸಗಿ ವಿಮಾನಯಾನ ಸಂಸ್ಥೆಗಳ ಪೈಲಟ್‌ಗಳು ಕುಡಿದು ಸಿಕ್ಕಿ ಬಿದ್ದಿರುವ ಪ್ರಕರಣಗಳ ಬಗ್ಗೆ ಕೇಳಿದ್ದ ಪ್ರಶ್ನೆಯೊಂದಕ್ಕೆ ಪಟೇಲ್ ಈ ರೀತಿಯಾಗಿ ಉತ್ತರಿಸಿದ್ದಾರೆ.

"ಯಾವುದೇ ಪೈಲಟ್ ಆಲ್ಕೋಹಾಲ್ ಪರೀಕ್ಷೆಯಲ್ಲಿ ಅನುತ್ತೀರ್ಣನಾದಲ್ಲಿ ಆತನನ್ನು ಆರು ವಾರಗಳ ಕಾಲ ಸೇವೆಯಿಂದ ದೂರ ಇಡಲಾಗುತ್ತದೆ" ಎಂದು ಪಟೇಲ್ ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ವಿಪ್ರೋ ನಿವ್ವಳ ಲಾಭದಲ್ಲಿ ಶೇ.12ರ ಪ್ರಗತಿ
ಕಚ್ಚಾ ಸಕ್ಕರೆ ಅಮುದಿಗೆ ಕೇಂದ್ರ ಅಸ್ತು
ಉತ್ತೇಜನ ಪ್ಯಾಕೇಜ್‌ಗಳ ಕೊಡುಗೆಯಿಲ್ಲ :ಮೊಂಟೆಕ್
ತಂತ್ರಾಂಶ ನಕಲಿ ಮಾಡಿದವನಿಗೆ 10 ಲಕ್ಷ ದಂಡ
ಅಮರನಾಥ ಯಾತ್ರಿಗಳಿಗೆ ಸಬ್ಸಿಡಿ ನೀಡಲ್ಲ: ಸರ್ಕಾರ
ಖರೀದಿಗೆ ಹಿಂದೇಟು; ಚಿನ್ನ ದರ ಕುಸಿತ, ಬೆಳ್ಳಿ ಸ್ಥಿರ