ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > 65 ಡಾಲರ್‌ಗೆ ಹತ್ತಿರವಾಗುತ್ತಿರುವ ಕಚ್ಚಾ ತೈಲ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
65 ಡಾಲರ್‌ಗೆ ಹತ್ತಿರವಾಗುತ್ತಿರುವ ಕಚ್ಚಾ ತೈಲ
ವಿಶ್ವದ ಬೃಹತ್ ಅರ್ಥವ್ಯವಸ್ಥೆ ಅಮೆರಿಕಾದ ಕಚ್ಚಾ ತೈಲ ಯಾದಿ ಬೇಡಿಕೆ ಉಳಿಸಿಕೊಂಡ ಕಾರಣ ಏಷಿಯಾ ಮಾರುಕಟ್ಟೆಯಲ್ಲಿ ಪ್ರತೀ ಬ್ಯಾರೆಲ್‌ ಕಚ್ಚಾ ತೈಲಕ್ಕೆ 65 ಡಾಲರುಗಳ ವ್ಯವಹಾರವನ್ನು ಬುಧವಾರ ನಡೆಸಿದೆ.

ನ್ಯೂಯಾರ್ಕ್ ಮರ್ಕಂಟೈಲ್ ಎಕ್ಸ್‌ಚೇಂಜ್‌‌ನ ಎಲೆಕ್ಟ್ರಾನಿಕ್ ವ್ಯವಹಾರದ ಸಿಂಗಾಪುರ ಮಧ್ಯಂತರ ದಿನದಲ್ಲಿ ಸೆಪ್ಟೆಂಬರ್‌ಗಾಗಿನ ವಿತರಣೆಯ ಬೆಂಚ್‌ಮಾರ್ಕ್ ಕಚ್ಚಾ ತೈಲ ವಿತರಣೆಯು 53 ಸೆಂಟ್ಸ್‌ಗಳ ಕುಸಿತ ಕಂಡಿದ್ದು, 65.06 ಡಾಲರುಗಳನ್ನು ಪ್ರತಿ ಬ್ಯಾರೆಲ್‌ಗೆ ದಾಖಲಿಸಿದೆ. 74 ಸೆಂಟ್ಸ್‌ಗಳ ಏರಿಕೆ ಕಂಡು 64.72 ಡಾಲರುಗಳನ್ನು ದಾಖಲಿಸಿ ಮಂಗಳವಾರ ಆಗಸ್ಟ್ ಒಪ್ಪಂದ ಕೊನೆಗೊಂಡಿತ್ತು.

ಅಮೆರಿಕಾ ಕಚ್ಚಾ ತೈಲ ಯಾದಿಯು 3.1 ಮಿಲಿಯನ್ ಬ್ಯಾರೆಲ್‌ಗಳ ಹೆಚ್ಚಳವನ್ನು ಕಳೆದ ವಾರ ದಾಖಲಿಸಿತ್ತು. ಗ್ಯಾಸೊಲಿನ್ ಪೂರೈಕೆಯಲ್ಲಿ 1.3 ಮಿಲಿಯನ್‌ಗಳ ಹೆಚ್ಚಳವಾಗಿದೆ ಎಂದು ಮಂಗಳವಾರ ಅಮೆರಿಕಾದ ಪೆಟ್ರೋಲಿಯಂ ಸಂಸ್ಥೆ ತಿಳಿಸಿತ್ತು.

ನೈಮ್ಯಾಕ್ಸ್ ವ್ಯವಹಾರದ ಗ್ಯಾಸೊಲಿನ್ ಆಗಸ್ಟ್ ವಿತರಣೆಯು 1.95 ಸೆಂಟ್ಸ್‌ಗಳ ಕುಸಿತ ಕಂಡು 1.79 ಡಾಲರುಗಳನ್ನು ಪ್ರತಿ ಗ್ಯಾಲನ್‍ಗೆ ದಾಖಲಿಸಿದೆ. ಹೀಟಿಂಗ್ ತೈಲದಲ್ಲೂ ಕುಸಿತ ಕಂಡು ಬಂದಿದೆ. ಇಲ್ಲಿ 0.84 ಸೆಂಟ್ಸ್‌ಗಳ ಇಳಿಕೆ ಕಂಡಿದ್ದು 1.69 ಡಾಲರುಗಳು ದಾಖಲಾಗಿದೆ.

ಆಗಸ್ಟ್ ತಿಂಗಳ ನೈಸರ್ಗಿಕ ಅನಿಲ ವಿತರಣೆಯು 2.0 ಸೆಂಟ್ಸ್‌ಗಳ ಏರಿಕೆ ಕಂಡಿದ್ದು, 1,000 ಕ್ಯೂಬಿಕ್ ಅಡಿಗೆ 3.69 ಡಾಲರುಗಳನ್ನು ಹೊಂದಿದೆ.

ಲಂಡನ್‌ನ ಐಸಿಇ ಫ್ಯೂಚರ್ಸ್ ಎಕ್ಸ್‌ಚೇಂಜ್‌ನಲ್ಲಿ ಬ್ರೆಂಟ್ ದರ 41 ಸೆಂಟ್ಸ್‌ಗಳ ಕುಸಿತ ಕಂಡಿದ್ದು, 66.46 ಡಾಲರುಗಳನ್ನು ಪ್ರತಿ ಬ್ಯಾರೆಲ್‌ಗೆ ದಾಖಲಿಸಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಗರಿಷ್ಠ ಕುಡುಕ ಪೈಲಟ್‌ಗಳಿರೋದು ಮಲ್ಯರ ಕಿಂಗ್‌ಫಿಶ‌‌ರ್‌ನಲ್ಲಿ..!
ವಿಪ್ರೋ ನಿವ್ವಳ ಲಾಭದಲ್ಲಿ ಶೇ.12ರ ಪ್ರಗತಿ
ಕಚ್ಚಾ ಸಕ್ಕರೆ ಅಮುದಿಗೆ ಕೇಂದ್ರ ಅಸ್ತು
ಉತ್ತೇಜನ ಪ್ಯಾಕೇಜ್‌ಗಳ ಕೊಡುಗೆಯಿಲ್ಲ :ಮೊಂಟೆಕ್
ತಂತ್ರಾಂಶ ನಕಲಿ ಮಾಡಿದವನಿಗೆ 10 ಲಕ್ಷ ದಂಡ
ಅಮರನಾಥ ಯಾತ್ರಿಗಳಿಗೆ ಸಬ್ಸಿಡಿ ನೀಡಲ್ಲ: ಸರ್ಕಾರ