ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಏರ್ ಇಂಡಿಯಾ ಜೆಪಿಸಿ ತನಿಖೆ ನಡೆಸಿ: ಶತ್ರುಘ್ನ ಸಿನ್ಹಾ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಏರ್ ಇಂಡಿಯಾ ಜೆಪಿಸಿ ತನಿಖೆ ನಡೆಸಿ: ಶತ್ರುಘ್ನ ಸಿನ್ಹಾ
8,000 ಕೋಟಿ ರೂಪಾಯಿಗಳ ನಷ್ಟ ಅನುಭವಿಸಿ ಸಂಕಷ್ಟದಲ್ಲಿರುವ ರಾಷ್ಟ್ರೀಯ ವಿಮಾನಯಾನ ಸಂಸ್ಥೆ ಏರ್ ಇಂಡಿಯಾದ ತನಿಖೆಯನ್ನು ಜಂಟಿ ಸದನ ಸಮಿತಿಗೆ ನೀಡಬೇಕೆಂದು ಲೋಕಸಭೆಯಲ್ಲಿ ಬಿಜೆಪಿ ಸದಸ್ಯರೊಬ್ಬರು ಆಗ್ರಹಿಸಿದ್ದಾರೆ.

ಅಲ್ಲದೆ ಖಾಸಗಿ ವಿಮಾನಯಾನ ಸಂಸ್ಥೆಗಳ ಕಾರ್ಯಚಟುವಟಿಕೆಗಳ ಮೇಲೆ ನಿಗಾವಹಿಸಲು ನಿಯಂತ್ರಣ ಪ್ರಾಧಿಕಾರವನ್ನು ರಚಿಸಬೇಕೆಂದು ಕಾಂಗ್ರೆಸ್ ಸದಸ್ಯರೊಬ್ಬರು ಇದೇ ಸಂದರ್ಭದಲ್ಲಿ ಒತ್ತಾಯಿಸಿದ್ದಾರೆ. ಪ್ರಯಾಣಿಕರನ್ನು ಇವು ಸುಲಿಗೆ ನಡೆಸುತ್ತಿವೆ ಎನ್ನುವುದು ಅವರ ಆರೋಪ.

ಇಂದು ಲೋಕಸಭೆಯಲ್ಲಿ ಜಂಟಿ ಸದನ ಸಮಿತಿ ತನಿಖೆಗೆ ಒತ್ತಾಯಿಸಿದವರು ಬಿಜೆಪಿ ಸಂಸದ ಶತ್ರುಘ್ನ ಸಿನ್ಹಾ. 'ಮಹಾರಾಜ'ನಾಗಿದ್ದ ಏರ್ ಇಂಡಿಯಾ 8,000 ಕೋಟಿ ರೂಪಾಯಿಗಳ ನಷ್ಟದೊಂದಿಗೆ 'ಭಿಕಾರಿ'ಯಾಗಲು ನಾಗರಿಕ ವಿಮಾನಯಾನ ಸಚಿವಾಲಯದ ಸಂಪೂರ್ಣ ಆಡಳಿತ ವೈಫಲ್ಯವೇ ಕಾರಣ ಎಂದೂ ಅವರು ಆರೋಪಿಸಿದ್ದಾರೆ.

ತಮ್ಮ ಮಧ್ಯಪ್ರವೇಶಕ್ಕೆ ಇದು ಸರಿಯಾದ ಸಮಯ ಎಂದು ಇದೇ ಸಂದರ್ಭದಲ್ಲಿ ಸಿನ್ಹಾರವರು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಪ್ರಣಬ್ ಮುಖರ್ಜಿಯವರತ್ತ ಬೊಟ್ಟು ಮಾಡುತ್ತಾ ಹೇಳಿದರು.

ಜಂಟಿ ಸದನ ಸಮಿತಿಯ ತನಿಖೆಯಿಂದಷ್ಟೇ ಪಾರದರ್ಶಕತೆಯನ್ನು ಕಾಪಾಡಿಕೊಳ್ಳಲು ಸಾಧ್ಯವೆಂದ ಅವರು ಏರ್ ಇಂಡಿಯಾವನ್ನು 'ಸಂಕಟ್ ಏರ್‍‌ಲೈನ್ಸ್' ಎಂದು ಛೇಡಿಸಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
65 ಡಾಲರ್‌ಗೆ ಹತ್ತಿರವಾಗುತ್ತಿರುವ ಕಚ್ಚಾ ತೈಲ
ಗರಿಷ್ಠ ಕುಡುಕ ಪೈಲಟ್‌ಗಳಿರೋದು ಮಲ್ಯರ ಕಿಂಗ್‌ಫಿಶ‌‌ರ್‌ನಲ್ಲಿ..!
ವಿಪ್ರೋ ನಿವ್ವಳ ಲಾಭದಲ್ಲಿ ಶೇ.12ರ ಪ್ರಗತಿ
ಕಚ್ಚಾ ಸಕ್ಕರೆ ಅಮುದಿಗೆ ಕೇಂದ್ರ ಅಸ್ತು
ಉತ್ತೇಜನ ಪ್ಯಾಕೇಜ್‌ಗಳ ಕೊಡುಗೆಯಿಲ್ಲ :ಮೊಂಟೆಕ್
ತಂತ್ರಾಂಶ ನಕಲಿ ಮಾಡಿದವನಿಗೆ 10 ಲಕ್ಷ ದಂಡ