ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಎಸ್‌ಬಿಐ ಪ್ರಮುಖರಿಂದ ಏರ್ ಇಂಡಿಯಾ ಪ್ರಗತಿ ನಕಾಶೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಎಸ್‌ಬಿಐ ಪ್ರಮುಖರಿಂದ ಏರ್ ಇಂಡಿಯಾ ಪ್ರಗತಿ ನಕಾಶೆ
ಆರ್ಥಿಕ ಸಂಕಷ್ಟಕ್ಕೊಳಗಾಗಿರುವ ರಾಷ್ಟ್ರೀಯ ವಿಮಾನಯಾನ ಸಂಸ್ಥೆ ಏರ್ ಇಂಡಿಯಾಕ್ಕೆ ಉತ್ಕೃಷ್ಟ ಮಟ್ಟದ ಸಮಿತಿ ರಚಿಸುವುದಕ್ಕೂ ಮೊದಲು ಅಭಿವೃದ್ಧಿಯತ್ತ ಸಾಗಲು ಯೋಜನೆ ರೂಪಿಸುವಂತೆ ಎಸ್‌ಬಿಐ ಪ್ರಮುಖರನ್ನು ಸರಕಾರ ನೇಮಕಗೊಳಿಸಿದೆ.

"ನಾವು ಭಾರತೀಯ ಸ್ಟೇಟ್ ಬ್ಯಾಂಕ್ ಪ್ರಮುಖರನ್ನು ನೇಮಕಗೊಳಿಸಿದ್ದೇವೆ. ಏರ್ ಇಂಡಿಯಾದ ಪುನಶ್ಚೇತನಕ್ಕೆ ಅತ್ಯಲ್ಪ, ಮಧ್ಯಮ ಮತ್ತು ಸುದೀರ್ಘಾವಧಿಯ ಯಾವ ಯೋಜನೆಗಳು ಸೂಕ್ತವಾಗುತ್ತವೆ ಎಂಬ ಬಗ್ಗೆ ನಾವು ಶೀಘ್ರದಲ್ಲೇ ಪ್ರತಿಕ್ರಿಯೆ ಪಡೆಯಲಿದ್ದೇವೆ" ಎಂದು ಇಂಡಿಯಾ ಏವಿಯೇಷನ್ 2010 ಅಂತಾರಾಷ್ಟ್ರೀಯ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ನಾಗರಿಕ ವಿಮಾನಯಾನ ಸಚಿವ ಪ್ರಫುಲ್ ಪಟೇಲ್ ತಿಳಿಸಿದ್ದಾರೆ.

ರಾಷ್ಟ್ರೀಯ ವಿಮಾನಯಾನ ಸಂಸ್ಥೆಯು ಶೀಘ್ರದಲ್ಲೇ ಸಂಘಟನಾತ್ಮಕ ಪುನರ್ರಚನಾ ಯೋಜನೆಯನ್ನು ಪಡೆದುಕೊಳ್ಳಲಿದ್ದು, ಕೆಲವೇ ಸಮಯದಲ್ಲಿ ಪ್ರಮುಖ ಬದಲಾವಣೆಗಳಿಗೊಳಪಡಿಸಲಾಗುತ್ತದೆ ಎಂದು ಸಚಿವರು ಇದೇ ಸಂದರ್ಭದಲ್ಲಿ ಮುನ್ಸೂಚನೆ ನೀಡಿದ್ದಾರೆ.

"ನಾವು ಆಡಳಿತ ವ್ಯವಸ್ಥೆಯಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಲಿದ್ದೇವೆ. ಏರ್ ಇಂಡಿಯಾದ ಆಡಳಿತ ಮಂಡಳಿಯಲ್ಲಿ ಹಲವು ಪ್ರಮುಖ ಮತ್ತು ಪ್ರಸಿದ್ಧರನ್ನು ತರಲಿದ್ದೇವೆ. ವಿಶ್ವದಾದ್ಯಂತ ತನ್ನ ನೆಲೆಯನ್ನು ಭದ್ರಪಡಿಸುವ ಉದ್ದೇಶದಿಂದ ಅಂತಾರಾಷ್ಟ್ರೀಯ ಸಲಹಾ ಮಂಡಳಿಯನ್ನು ಕೂಡ ನಾವು ಸ್ಥಾಪಿಸಲಿದ್ದೇವೆ" ಎಂದು ಪಟೇಲ್ ತಿಳಿಸಿದ್ದಾರೆ.

ಅಲ್ಲದೆ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಡಿಯಲ್ಲಿ ಕಾರ್ಯನಿರ್ವಹಿಸುವ ಪ್ರಮುಖ ಕಾರ್ಯಾಧಿಕಾರಿ (ಸಿಓಓ)ಯನ್ನು ಹೊಂದುವ ಉದ್ದೇಶವೂ ನಮ್ಮಲ್ಲಿದೆ. ಆ ಮೂಲಕ ವಿಮಾನಯಾನ ಸಂಸ್ಥೆಯನ್ನು ಅತ್ಯುತ್ತಮ ತಂಡದೊಂದಿಗೆ ನಡೆಸಲಿದ್ದೇವೆ. ಇವೆಲ್ಲವೂ ಸಂಪೂರ್ಣವಾಗಿ ಜಾರಿಗೆ ಬರಬೇಕಿದ್ದರೆ ವರ್ಷಗಳೇ ಬೇಕಾಗಬಹುದು ಎಂದು ವಿವರಿಸಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕಬ್ಬಿಣ ಅದಿರು ರಫ್ತಿಗೆ ನಿರ್ಬಂಧವಿಲ್ಲ: ಕೇಂದ್ರ ಸರಕಾರ
ಏರ್ ಇಂಡಿಯಾ ಜೆಪಿಸಿ ತನಿಖೆ ನಡೆಸಿ: ಶತ್ರುಘ್ನ ಸಿನ್ಹಾ
65 ಡಾಲರ್‌ಗೆ ಹತ್ತಿರವಾಗುತ್ತಿರುವ ಕಚ್ಚಾ ತೈಲ
ಗರಿಷ್ಠ ಕುಡುಕ ಪೈಲಟ್‌ಗಳಿರೋದು ಮಲ್ಯರ ಕಿಂಗ್‌ಫಿಶ‌‌ರ್‌ನಲ್ಲಿ..!
ವಿಪ್ರೋ ನಿವ್ವಳ ಲಾಭದಲ್ಲಿ ಶೇ.12ರ ಪ್ರಗತಿ
ಕಚ್ಚಾ ಸಕ್ಕರೆ ಅಮುದಿಗೆ ಕೇಂದ್ರ ಅಸ್ತು