ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಗ್ರಹಣದ ಕ್ಷಣಗಳ ವೈಮಾನಿಕ ಅನುಭವಗಳು..
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಗ್ರಹಣದ ಕ್ಷಣಗಳ ವೈಮಾನಿಕ ಅನುಭವಗಳು..
ಅಪರೂಪದ ಖಗ್ರಾಸ ಸೂರ್ಯಗ್ರಹಣಕ್ಕೆ ಕೋಟ್ಯಂತರ ಮಂದಿ ಇಳೆಯಿಂದಲೇ ಕಣ್ತುಂಬಿಕೊಂಡರೆ, ಬೆರಳೆಣಿಕೆಯಷ್ಟು ವಿಜ್ಞಾನಿಗಳು ಮತ್ತು ಪ್ರಯಾಣಿಕರು ವಿಮಾನಗಳಲ್ಲಿ ತೆರಳಿ ನಭದ ವಿಸ್ಮಯವನ್ನು ಹತ್ತಿರದಿಂದ ನೋಡಿ ಸಂತಸಪಟ್ಟುಕೊಂಡಿದ್ದಾರೆ.

ಇಂದು ಮುಂಜಾನೆ ದೆಹಲಿಯಿಂದ 72 ಪ್ರಯಾಣಿಕರನ್ನು ಹೊತ್ತಿದ್ದ ವಿಶೇಷ ವಿಮಾನವು 41,000 ಅಡಿಗಳಷ್ಟು ಎತ್ತರಕ್ಕೆ ಹಾರಿ ಬಾಹ್ಯಾಕಾಶದ ಅದ್ಭುತ ಕ್ಷಣಗಳಿ ಸಾಕ್ಷಿಯಾಯಿತು. ಮುಂಜಾನೆ 4.57ಕ್ಕೆ ಹೊರಟಿದ್ದ ಈ ವಿಮಾನವು 8.10ಕ್ಕೆ ವಾಪಸ್ ಬಂದಿತ್ತು. 6.26ರ ಹೊತ್ತಿಗೆ ನಾಲ್ಕು ನಿಮಿಷಗಳ ಕಾಲ ಗ್ರಹಣವನ್ನು ಸಂಪೂರ್ಣವಾಗಿ ವಿಮಾನದಲ್ಲಿದ್ದವರು ವೀಕ್ಷಿಸಿದರು.

ಜೆಟ್ ಏರ್‌ವೇಸ್‌ನ 737-700 ಹೊಚ್ಚ ಹೊಸ ಬೋಯಿಂಗ್ ವಿಮಾನವು ಬಿಹಾರದ ಗಯಾ ಪ್ರದೇಶದ ಮೇಲೆ ಮೋಡಗಳ ನಡುವೆ ಪ್ರಯಾಣ ಬೆಳೆಸಿತ್ತು. ಈ ವಿಮಾನದಲ್ಲಿ ಸೂರ್ಯನ ಕಡೆಗಿನ ಕಿಟಕಿ ಬದಿಯಲ್ಲಿ 21 ಸೀಟುಗಳು ಹಾಗೂ ಭೂಮಿಯ ಕಡೆಗಿನ ಕಿಟಕಿ ಬದಿಯಲ್ಲಿ 21 ಸೀಟುಗಳಿದ್ದವು.

ಸೂರ್ಯನ ಕಡೆಗಿನ ಸೀಟುಗಳಿಗೆ 79,000, ಮಧ್ಯದ ಸೀಟುಗಳಿಗೆ 67,000, ಆ ನಂತರದ ಸೀಟುಗಳಿಗೆ 59,000 ಹಾಗೂ ಭೂಮಿಯ ಕಡೆಗಿನ ಸೀಟುಗಳಿಗೆ 29,000 ರೂಪಾಯಿಗಳ ಟಿಕೆಟು ದರ ವಿಧಿಸಲಾಗಿತ್ತು.

"ನಾನಂತೂ ಆ ದೃಶ್ಯಗಳಿಂದ ಸಮ್ಮೋಹನಗೊಂಡಿದ್ದೇನೆ" ಎಂದು ಈ ವಿಮಾನದಲ್ಲಿದ್ದ 'ಸ್ಪೇಸ್' ಸಂಸ್ಥೆಯ ಸಂಸ್ಥಾಪಕ ಸಚಿನ್ ಬಾಹಂಬಾ ಪ್ರತಿಕ್ರಿಯಿಸಿದ್ದಾರೆ.

"ಅದು ವಿದ್ಯುನ್ಮಾನ ಪ್ರಕೃತಿ ವೈಚಿತ್ರ್ಯ. ಗ್ರಹಣದ ಪ್ರಮಾಣ ಶೇಕಡಾ 15ರಲ್ಲಿದ್ದಾಗ ಪ್ರಯಾಣಿಕ ವಿಮಾನದ ಕಿಟಕಿಗಳ ಮೂಲಕ ನೋಡಬಹುದಾಗಿತ್ತು. 41,000 ಅಡಿ ಎತ್ತರದಲ್ಲಿ ಶೇಕಡಾ 75ರ ವಾಯುಮಂಡಲದಲ್ಲಿದ್ದಾಗ ವಿಮಾನದ ತಳ ಭಾಗದಲ್ಲಿ ಶೇಕಡಾ 99ರಷ್ಟು ನೀರಿನ ತೇವಾಂಶ ತುಂಬಿತ್ತು" ಎಂದು ಅವರು ವಿವರಿಸಿದ್ದಾರೆ.

ಮತ್ತೆರಡು ವಿಮಾನಗಳು ಕೇವಲ ವಿಜ್ಞಾನಿಗಳಿಗೆ ಮೀಸಲಾಗಿತ್ತು. ಮಿರೇಜ್-2000 ಫೈಟರ್ ಜೆಟ್ ಮತ್ತು ಎಎನ್-32 ವಿಮಾನಗಳು ಮುಂಜಾನೆ ಖಗೋಳವಿಜ್ಞಾನಿಗಳು ಮತ್ತು ಐಎಎಫ್ ಸಿಬ್ಬಂದಿಗಳನ್ನು ಹೊತ್ತು ಹೊರಟಿತ್ತು. ಈ ವೇಳೆ ವಿಜ್ಞಾನಿಗಳು ಕೆಲವು ಪ್ರಯೋಗಗಳನ್ನು ಮಾಡಿದ್ದಲ್ಲದೇ, ಗ್ರಹಣವನ್ನು ಚಿತ್ರಿಸಿಕೊಂಡಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಎಸ್‌ಬಿಐ ಪ್ರಮುಖರಿಂದ ಏರ್ ಇಂಡಿಯಾ ಪ್ರಗತಿ ನಕಾಶೆ
ಕಬ್ಬಿಣ ಅದಿರು ರಫ್ತಿಗೆ ನಿರ್ಬಂಧವಿಲ್ಲ: ಕೇಂದ್ರ ಸರಕಾರ
ಏರ್ ಇಂಡಿಯಾ ಜೆಪಿಸಿ ತನಿಖೆ ನಡೆಸಿ: ಶತ್ರುಘ್ನ ಸಿನ್ಹಾ
65 ಡಾಲರ್‌ಗೆ ಹತ್ತಿರವಾಗುತ್ತಿರುವ ಕಚ್ಚಾ ತೈಲ
ಗರಿಷ್ಠ ಕುಡುಕ ಪೈಲಟ್‌ಗಳಿರೋದು ಮಲ್ಯರ ಕಿಂಗ್‌ಫಿಶ‌‌ರ್‌ನಲ್ಲಿ..!
ವಿಪ್ರೋ ನಿವ್ವಳ ಲಾಭದಲ್ಲಿ ಶೇ.12ರ ಪ್ರಗತಿ