ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > 'ಡಿಲೀಟ್' ಮಾಡಿದ್ರೂ ಈ-ಮೈಲ್ ಅಳಿಸಿ ಹೋಗಲ್ಲ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
'ಡಿಲೀಟ್' ಮಾಡಿದ್ರೂ ಈ-ಮೈಲ್ ಅಳಿಸಿ ಹೋಗಲ್ಲ
ಈ-ಮೈಲ್‌ಗಳು ಅಥವಾ ಪೇಸ್‌ಬುಕ್ ಪೋಸ್ಟ್‌ಗಳು ಅಥವಾ ಫೋಟೋಗಳನ್ನು ಅಳಿಸಿ ಹಾಕಿದ ನಂತರ ಹಲವಾರು ಕಾರಣಗಳಿಂದ ಮತ್ತೆ ಕಾಣಿಸಿಕೊಳ್ಳಬಹುದು ಎಂದು ಎಚ್ಚರಿಸಿರುವ ಸಂಶೋಧಕರು, ಇಂಟರ್ನೆಟ್ ಅಂದುಕೊಂಡಷ್ಟು ಸುರಕ್ಷಿತವಲ್ಲ ಎಂಬ ಸಂದೇಶವನ್ನು ರವಾನಿಸಿದ್ದಾರೆ.

ನಿಮಗೆ ಖಾಸಗಿತನ ಅಥವಾ ಗೌಪ್ಯತೆ ಬೇಕೆಂದಾದಲ್ಲಿ ಇಂಟರ್ನೆಟ್ ಈಗ ಭೀತಿಯ ಜಾಗ ಎಂದು ವಾಷಿಂಗ್ಟನ್ ಯುನಿವರ್ಸಿಟಿಯ ಕಂಪ್ಯೂಟರ್ ವಿಜ್ಞಾನಿ ತಡಾಯೋಷಿ ಕೋಹ್ನೋ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ತಮ್ಮ ಈ-ಮೈಲ್‌ಗಳು ಹೇಗೆ ಮತ್ತು ಎಲ್ಲಿ ಶೇಖರಿಸಲ್ಪಡುತ್ತವೆ ಎಂಬುದನ್ನು ಜನತೆ ತಿಳಿದುಕೊಂಡಲ್ಲಿ, ಅವರು ಖಂಡಿತಾ ಹೆಚ್ಚಿನ ಜಾಗರೂಕತೆ ವಹಿಸಬಹುದು ಅಥವಾ ಇಂಟರ್ನೆಟ್ ಬಳಕೆ ಕಡಿಮೆ ಮಾಡಬಹುದು ಎಂದು ತಜ್ಞರು ತಿಳಿಸಿದ್ದಾರೆ.

ಉದಾಹರಣೆಗೆ ಒಂದು ಮೊಬೈಲ್ ಕಳೆದು ಹೋದಲ್ಲಿ ವೈಯಕ್ತಿಕ ಫೋಟೋಗಳು ಅಥವಾ ಟೆಸ್ಟ್ ಮೆಸೇಜ್‌ಗಳು ಬಹಿರಂಗವಾಗಬಹುದು. ಕಾನೂನು ಪ್ರಕಾರ ತನಿಖೆ ನಡೆಸುವಾಗ ಮನೆಯಲ್ಲಿನ ಸಂಪೂರ್ಣ ಕಡತಗಳಿಂದ ಅಥವಾ ಕಂಪ್ಯೂಟರ್‌ನಿಂದ ಹಳೆಯ ವಿವರಣೆಗಳು ಲಭ್ಯವಾದರೆ ಆಪಾದನೆ ಹೊರಿಸಬಹುದು ಎಂದು ಅವರು ವಿವರಿಸಿದ್ದಾರೆ.

ಇಂತಹ ಅಚಾತುರ್ಯಗಳನ್ನು ತಪ್ಪಿಸುವ ಸಲುವಾಗಿ ಯುನಿವರ್ಸಿಟಿಯು ಹೊಸ ತಂತ್ರಾಂಶವೊಂದನ್ನು ಕಂಡು ಹಿಡಿದಿದೆ. 'ವ್ಯಾನಿಶ್' ಎಂದು ಕರೆಯಲಾಗಿರುವ ಈ ತಂತ್ರಾಂಶವು ಗೌಪ್ಯತೆಯನ್ನು ಕಾಪಾಡುವ ನಿಟ್ಟಿನಲ್ಲಿ ಗರಿಷ್ಠ ಕಾರ್ಯನಿರ್ವಹಣೆ ಮಾಡಬಲ್ಲುದು ಎಂದು ವಾಷಿಂಗ್ಟನ್ ಯುನಿವರ್ಸಿಟಿ ತಿಳಿಸಿದೆ.

ಆನ್-ಲೈನ್‌ನಲ್ಲಿರುವಾಗಲೇ ಕಡತಗಳನ್ನು ತನ್ನಲ್ಲಿ ಉಳಿಸಿಕೊಳ್ಳದೆ ನಿಗದಿತ ಸಮಯದೊಳಗೆ ತನ್ನಿಂತಾನೇ ಈ-ಮೈಲ್‌ಗಳನ್ನು ಸಹಿತ ಅಳಿಸಿ ಹಾಕುವ ವಿಶಿಷ್ಟತೆಯನ್ನು ಇದು ಹೊಂದಿದೆ.

ಹಾಗೆ ಲ್ಯಾಪ್‌ಟಾಪ್ ಅಥವಾ ಮೊಬೈಲುಗಳು ಕಳೆದು ಹೋದಾಗ ನಮ್ಮ ಕಡತಗಳನ್ನು ಅಥವಾ ಮಾಹಿತಿಗಳನ್ನು ಇತರರು ಬಳಸಿಕೊಳ್ಳಬಹುದು. ನ್ಯಾಯಾಲಯಗಳು ಕೂಡ ಅಗತ್ಯ ಬಿದ್ದರೆ ಈ-ಮೈಲ್ ಸಂದೇಶಗಳನ್ನು ಬಹಿರಂಗಪಡಿಸಲು ಈ-ಮೈಲ್ ಸೇವಾದಾರರನ್ನು ಕೇಳಿಕೊಳ್ಳಬಹುದು. ನೀವು ನಿಮ್ಮ ಸಂದೇಶವನ್ನು ಹೊರಗೆ ಕಳುಹಿಸದೇ ಇದ್ದರೆ ಹಾಗಾಗಲು ಸಾಧ್ಯವೇ ಇಲ್ಲ. ಈ ನಿಟ್ಟಿನಲ್ಲಿ ನಮ್ಮ ತಂತ್ರಾಂಶವು ಸಹಾಯಕವಾಗಲಿದೆ ಎಂದು ಯುನಿವರ್ಸಿಟಿ ತಿಳಿಸಿದೆ.

ಹಲವು ಜನ ಕೇವಲ 'ಡಿಲೀಟ್' ಗುಂಡಿಯನ್ನು ಒತ್ತಿದ ಕೂಡಲೇ ಮಾಹಿತಿ ಅಳಿಸಿ ಹೋಗುತ್ತದೆ ಎಂದು ನಂಬಿದ್ದಾರೆ. ಇಲ್ಲಿ ನಿಜ ವಿಚಾರವೆಂದರೆ ನೀವು ಡಿಲೀಟ್ ಬಟನ್ ಒತ್ತಿದ ನಂತರವೂ ಬಹುತೇಕ ವೆಬ್ ಸೇವಾದಾರ ಕಂಪನಿಗಳು ಹಳೆಯ ಮಾಹಿತಿಗಳನ್ನು ಉಳಿಸಿಕೊಂಡಿರುತ್ತವೆ ಎಂಬ ಆಘಾತಕಾರಿ ಅಂಶವನ್ನು ವಿಜ್ಞಾನಿಗಳು ಬಹಿರಂಗಪಡಿಸಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಗ್ರಹಣದ ಕ್ಷಣಗಳ ವೈಮಾನಿಕ ಅನುಭವಗಳು..
ಎಸ್‌ಬಿಐ ಪ್ರಮುಖರಿಂದ ಏರ್ ಇಂಡಿಯಾ ಪ್ರಗತಿ ನಕಾಶೆ
ಕಬ್ಬಿಣ ಅದಿರು ರಫ್ತಿಗೆ ನಿರ್ಬಂಧವಿಲ್ಲ: ಕೇಂದ್ರ ಸರಕಾರ
ಏರ್ ಇಂಡಿಯಾ ಜೆಪಿಸಿ ತನಿಖೆ ನಡೆಸಿ: ಶತ್ರುಘ್ನ ಸಿನ್ಹಾ
65 ಡಾಲರ್‌ಗೆ ಹತ್ತಿರವಾಗುತ್ತಿರುವ ಕಚ್ಚಾ ತೈಲ
ಗರಿಷ್ಠ ಕುಡುಕ ಪೈಲಟ್‌ಗಳಿರೋದು ಮಲ್ಯರ ಕಿಂಗ್‌ಫಿಶ‌‌ರ್‌ನಲ್ಲಿ..!