ಹಬ್ಬಗಳ ಬೆನ್ನೇರಿದ ಚಿನಿವಾರ ಪೇಟೆಯಲ್ಲಿ ಚಿನ್ನ ದರವು 30 ರೂಪಾಯಿಗಳ ಏರಿಕೆ ಕಾಣುವ ಮೂಲಕ ಮತ್ತೆ ಚೇತರಿಸಿಕೊಂಡಿದ್ದು, ಪ್ರತಿ 10 ಗ್ರಾಂ ಚಿನ್ನದ ಬೆಲೆಯೀಗ 15,100 ರೂಪಾಯಿಗಳು. ಆದರೆ ಇದೇ ಬೆಂಬಲ ಬೆಳ್ಳಿಗೆ ದೊರೆಯದ ಕಾರಣ ಪ್ರತಿ ಕೇಜಿಯಲ್ಲಿ 80 ರೂಪಾಯಿಗಳ ಕುಸಿತ ಕಂಡಿದೆ.
ಆಭರಣ ತಯಾರಕರು ಹಬ್ಬಗಳ ಹಿನ್ನಲೆಯಲ್ಲಿ ತಮ್ಮ ಖರೀದಿಯ ಮಟ್ಟವನ್ನು ಏರಿಸಿದ್ದೇ ಚಿನ್ನ ದರ ಹೆಚ್ಚಳಕ್ಕೆ ಕಾರಣವಾಯಿತು ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಸಾಮಾನ್ಯವಾಗಿ ಜಾಗತಿಕ ಮಾರುಕಟ್ಟೆಯನ್ನು ಅವಲಂಭಿಸುತ್ತಾ ದೇಶೀಯ ಮಾರುಕಟ್ಟೆಯ ಗತಿ ಸಾಗುತ್ತದೆಯಾದರೂ ಇಂದಿನ ವ್ಯವಹಾರದಲ್ಲಿ ಹಾಗಾಗಲಿಲ್ಲ. ಪ್ರಮುಖ ಲಂಡನ್ ಮಾರುಕಟ್ಟೆಯಲ್ಲಿ ಚಿನ್ನ ದರವು ಪ್ರತಿ ಔನ್ಸ್‌ಗಳಿಗೆ ಎರಡು ಡಾಲರುಗಳ ಕುಸಿತ ಕಂಡಿದ್ದು, 945.85 ಡಾಲರುಗಳನ್ನು ತಲುಪಿದೆ.
ಉತ್ಕೃಷ್ಟ ಮತ್ತು ಆಭರಣ ಚಿನ್ನಗಳ ದರದಲ್ಲಿ 30 ರೂಪಾಯಿಗಳ ಏರಿಕೆ ಕಂಡಿದ್ದು, ಪ್ರತಿ 10 ಗ್ರಾಂಗಳಿಗೆ ಕ್ರಮವಾಗಿ 15,100 ಮತ್ತು 14,950 ರೂಪಾಯಿಗಳನ್ನು ದಾಖಲಿಸಿದೆ. ಪವನ್ ಚಿನ್ನದಲ್ಲಿ 25 ರೂಪಾಯಿಗಳ ಏರಿಕೆಯಾಗಿದೆ. ಇದೀಗ ಎಂಟು ಗ್ರಾಂ ಚಿನ್ನದ ಬೆಲೆ 12,475 ರೂಪಾಯಿಗಳು.
ಅತ್ತ ಬೆಳ್ಳಿಯು 80 ರೂಪಾಯಿಗಳ ಕುಸಿತ ಕಂಡಿದ್ದು, ಪ್ರತೀ ಕಿಲೋ ಗ್ರಾಂಗೆ 22,270 ರೂಪಾಯಿಗಳನ್ನು ದಾಖಲಿಸಿದೆ. ವಾರವನ್ನಾಧರಿಸಿದ ವಿತರಣೆಯು 100 ರೂಪಾಯಿಗಳ ಹಿನ್ನಡೆ ದಾಖಲಿಸಿ 22,150 ರೂಪಾಯಿಗಳನ್ನು ಮುಟ್ಟಿದೆ.
ಬೆಳ್ಳಿ ನಾಣ್ಯಗಳ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗದೆ ಪ್ರತೀ 100 ನಾಣ್ಯಗಳು ಖರೀದಿಗೆ 29,400 ಮತ್ತು ಮಾರಾಟದಲ್ಲಿ 29,500 ರೂಪಾಯಿಗಳಲ್ಲೇ ಮುಂದುವರಿದಿವೆ.
|