ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಜನಸಂಖ್ಯೆ: 2050ರಲ್ಲಿ ಚೀನಾ ಮೀರಿಸಲಿದೆ ಭಾರತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜನಸಂಖ್ಯೆ: 2050ರಲ್ಲಿ ಚೀನಾ ಮೀರಿಸಲಿದೆ ಭಾರತ
ಜನನ ಪ್ರಮಾಣ ನಿಯಂತ್ರಣಕ್ಕೆ ಲೇಟಾಗಿ ಮದ್ವೆಯಾಗಿ, ರಾತ್ರಿ ಹೆಚ್ಚು ಹೊತ್ತು ಟೀವಿ ನೋಡಿ ಎಂದೆಲ್ಲಾ ಸಲಹೆ ನೀಡಿದ್ದ ಕೇಂದ್ರ ಆರೋಗ್ಯ ಸಚಿವ ಗುಲಾಂ ನಬಿ ಆಜಾದ್, 2050ರ ವೇಳೆಗೆ ಭಾರತವು 153 ಕೋಟಿ ದಾಟುವ ಮೂಲಕ ಚೀನಾವನ್ನೂ ಹಿಂದಿಕ್ಕಲಿದೆ ಎಂದು ಎಚ್ಚರಿಸಿದ್ದಾರೆ.

2050ರಲ್ಲಿ ಭಾರತವು ಜಗತ್ತಿನಲ್ಲೇ ಅತೀ ಹೆಚ್ಚು ಜನಸಂಖ್ಯೆಯುಳ್ಳ ರಾಷ್ಟ್ರವಾಗಲಿದೆ ಎಂದು ರಾಷ್ಟ್ರೀಯ ಜನಸಂಖ್ಯಾ ಆಯೋಗವು ತನ್ನ ವರದಿಯಲ್ಲಿ ತಿಳಿಸಿದೆ.

ಈ ಲೆಕ್ಕಾಚಾರದ ಪ್ರಕಾರ 2011ರಲ್ಲಿ 1.19 ಬಿಲಿಯನ್, 2016ರಲ್ಲಿ 1.27 ಬಿಲಿಯನ್, 2021ರ ಹೊತ್ತಿಗೆ 1.34 ಬಿಲಿಯನ್ ಮತ್ತು 2026ರ ವೇಳೆಗೆ 1.4 ಬಿಲಿಯನ್ ಜನಸಂಖ್ಯೆ ಭಾರತದ್ದಾಗಲಿದೆ.

"ಭಾರತವು ಪ್ರತೀ ವರ್ಷ ಸುಮಾರು 18 ಮಿಲಿಯನ್ ಜನಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಿದೆ" ಎಂದು ಲೋಕಸಭೆಗೆ ಲಿಖಿತ ಹೇಳಿಕೆಯಲ್ಲಿ ಕೇಂದ್ರ ಸಚಿವ ಆಜಾದ್ ತಿಳಿಸಿದ್ದಾರೆ.

ಭಾರತದಲ್ಲಿ ಕುಟುಂಬ ಕಲ್ಯಾಣ ಯೋಜನೆಯು ಸ್ವಯಂ ಪ್ರೇರಿತವಾಗಿದ್ದು, ಯಾವುದೇ ದಂಪತಿಗಳು ಇದರ ವ್ಯಾಪ್ತಿಗೆ ಒಳಪಡಬಹುದಾಗಿದೆ ಮತ್ತು ಅವರು ತಮಗೆ ಸೂಕ್ತವಾದ ಮಾರ್ಗವನ್ನು ಆಯ್ದುಕೊಳ್ಳಬಹುದಾಗಿದೆ. ಕುಟುಂಬ ಕಲ್ಯಾಣ ಯೋಜನೆ ಸ್ವಯಂ ಪ್ರೇರಿತವೇ ಹೊರತು ಕಡ್ಡಾಯವಲ್ಲ ಎಂದು ಅವರು ವಿವರಿಸಿದರು.

2001ರ ಗಣತಿ ಪ್ರಕಾರ ಭಾರತವು 1,028,610,328 ಜನಸಂಖ್ಯೆಯನ್ನು ಹೊಂದಿತ್ತು. ಇದರಲ್ಲಿ ಹಿಂದೂಗಳ ಪಾಲು ಶೇಕಡಾ 82.4 ಅಂದರೆ 827,578,868, ಮುಸ್ಲಿಮರದ್ದು ಶೇ.11.4 ಅಂದರೆ 100,008,240, ಕ್ರಿಶ್ಚಿಯನ್ನರದ್ದು ಶೇ.2.3 ಅಂದರೆ 24,080,016, ಸಿಖ್ಖರದ್ದು ಶೇ.1.9 ಅಂದರೆ 19,215,730, ಬೌದ್ಧರದ್ದು ಶೇ.0.8 ಅಂದರೆ 7,955,207, ಜೈನರದ್ದು ಶೇ.0.4 ಅಂದರೆ 4,225,053, ಇತರ ಧರ್ಮದವರು ಮತ್ತು ಪರ್ಷಿಯನ್ನರದ್ದು ಶೇ. 0.6 ಅಂದರೆ 6,639,626 ಹಾಗೂ ಯಾವುದೇ ಧರ್ಮದೊಂದಿಗೆ ಗುರುತಿಸಲ್ಪಡದವರು ಶೇ.1 ಅಂದರೆ 727,588 ಜನ ಎಂದು ಹೇಳಲಾಗಿತ್ತು.

2005ರಲ್ಲಿ ಹಿಂದೂಗಳ ಜನಸಂಖ್ಯಾ ಏರಿಕೆಯ ಪ್ರಮಾಣದಲ್ಲಿ ಕುಸಿತ ಕಂಡು ಶೇ.80.5ನ್ನು ತಲುಪಿದ್ದರೆ, ಮುಸ್ಲಿಮ್ ಧರ್ಮೀಯರಲ್ಲಿ ಶೇ.2ರ ಏರಿಕೆ (ಶೇ.13.4) ದಾಖಲಾಗಿತ್ತು. ಉಳಿದ ಯಾವುದೇ ಧರ್ಮದ ಜನಸಂಖ್ಯಾ ಏರಿಕೆ ಪ್ರಮಾಣದಲ್ಲಿ ಯಾವುದೇ ಬದಲಾವಣೆ ಕಂಡು ಬಂದಿರಲಿಲ್ಲ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಚಿನ್ನ 30 ರೂ. ತುಟ್ಟಿ; ಬೆಳ್ಳಿ 80 ರೂ. ಅಗ್ಗ
'ಡಿಲೀಟ್' ಮಾಡಿದ್ರೂ ಈ-ಮೈಲ್ ಅಳಿಸಿ ಹೋಗಲ್ಲ
ಗ್ರಹಣದ ಕ್ಷಣಗಳ ವೈಮಾನಿಕ ಅನುಭವಗಳು..
ಎಸ್‌ಬಿಐ ಪ್ರಮುಖರಿಂದ ಏರ್ ಇಂಡಿಯಾ ಪ್ರಗತಿ ನಕಾಶೆ
ಕಬ್ಬಿಣ ಅದಿರು ರಫ್ತಿಗೆ ನಿರ್ಬಂಧವಿಲ್ಲ: ಕೇಂದ್ರ ಸರಕಾರ
ಏರ್ ಇಂಡಿಯಾ ಜೆಪಿಸಿ ತನಿಖೆ ನಡೆಸಿ: ಶತ್ರುಘ್ನ ಸಿನ್ಹಾ