ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಧಾನ್ಯ ಬೆಲೆಯೇರಿಕೆ ಗಂಭೀರ ಸಮಸ್ಯೆ: ಪವಾರ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಧಾನ್ಯ ಬೆಲೆಯೇರಿಕೆ ಗಂಭೀರ ಸಮಸ್ಯೆ: ಪವಾರ್
ಉತ್ಪಾದನೆ ಮತ್ತು ಪೂರೈಕೆಯಲ್ಲಿನ ವ್ಯತ್ಯಯದಿಂದಾಗಿ ದ್ವಿದಳ ಧಾನ್ಯಗಳ ಬೆಲೆ ಗಗನಕ್ಕೇರುತ್ತಿರುವುದನ್ನು ಸರಕಾರ ಕೊಂಚ ಗಂಭೀರ ಸಮಸ್ಯೆಯೆಂದು ಪರಿಗಣಿಸಿದೆ.

ಉತ್ಪಾದನೆ ಕಡಿಮೆಯಾಗಿರುವುದೇ ಸಮಸ್ಯೆಗೆ ಕಾರಣ. ನಾವು ಹೆಚ್ಚು ಧಾನ್ಯಗಳನ್ನು ಪಡೆಯಬಹುದಾದ ಕಡೆ ಈ ವರ್ಷ ಕೂಡ ಮಳೆ ಕಡಿಮೆಯಾಗಿದೆ. ಇದು ಅಗತ್ಯವಾಗಿ ಮಳೆ ಬರಬೇಕಾಗಿದ್ದ ಪ್ರದೇಶಗಳು. ಹಾಗಾಗಿ ನಾವಿದನ್ನು ಕೊಂಚ ಗಂಭೀರ ಸಮಸ್ಯೆಯೆಂದೇ ಪರಿಗಣಿಸಬೇಕಾಗುತ್ತದೆ ಎಂದು ಕೃಷಿ ಸಚಿವ ಶರದ್ ಪವಾರ್ ತಿಳಿಸಿದ್ದಾರೆ.

ಪ್ರಸಕ್ತ ಬೇಳೆಕಾಳು ದರ ಪ್ರತೀ ಕಿಲೋವೊಂದಕ್ಕೆ 90 ರೂಪಾಯಿಗಳು. ಉಳಿದ ಕಾಳುಗಳ ಬೆಲೆ ಕೂಡ ತೀರಾ ದುಬಾರಿಯಾಗಿದೆ.

ಈ ಎಲ್ಲಾ ಸಮಸ್ಯೆಗಳ ಪರಿಹಾರಕ್ಕೆ ಸರಕಾರ ತಕ್ಕ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಪವಾರ್ ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.

"ಇಲ್ಲಿ ನಿಜಕ್ಕೂ ಪ್ರಶ್ನೆಯಿರುವುದು ಲಭ್ಯತೆ ಬಗ್ಗೆ. ನಾವು ಕೂಡ ಅದನ್ನೇ ಪರಿಹರಿಸಲು ಯತ್ನಿಸುತ್ತಿದ್ದೇವೆ. ಕೆಲವು ರಾಜ್ಯಗಳನ್ನು ಕೂಡ ಈ ಸಂಬಂಧ ನಾವು ಸಂಪರ್ಕಿಸುತ್ತಿದ್ದೇವೆ. ಕೆಲವು ಯೋಜನೆಗಳ ಬಗ್ಗೆಯೂ ಪ್ರಕ್ರಿಯೆ ನಡೆಯುತ್ತಿದೆ" ಎಂದರು.

ಆದರೆ ವಿವರಗಳನ್ನು ಹಂಚಿಕೊಳ್ಳಲು ಸಚಿವರು ನಿರಾಕರಿಸಿದ್ದಾರೆ. ಇದು ಮಾರುಕಟ್ಟೆಯ ಮೇಲೆ ಪರೋಕ್ಷ ಪರಿಣಾಮ ಬೀರಬಹುದೆಂಬ ಭೀತಿ ಅವರದ್ದು.

"ಈಗಲೇ ನಾನಿದನ್ನು ಬಹಿರಂಗಪಡಿಸಲಿಚ್ಛಿಸುವುದಿಲ್ಲ. ಯಾಕೆಂದರೆ ಇದರಿಂದಾಗಿ ಮಾರುಕಟ್ಟೆಯಲ್ಲಿ ಕೆಲವು ಪರೋಕ್ಷ ಪರಿಣಾಮಗಳು ಅಥವಾ ವ್ಯತ್ಯಯಗಳುಂಟಾಗಬಹುದು" ಎಂದರು.

ಭಾರತವು 2008-09ರ ಸಾಲಿನಲ್ಲಿ 14.66 ಮಿಲಿಯನ್ ಟನ್‌ ಧಾನ್ಯಗಳನ್ನು ಬೆಳೆದಿತ್ತು. ಆದರೆ ದೇಶೀಯ ಬಳಕೆಗೆ 18 ಮಿಲಿಯನ್ ಟನ್‌ಗಳ ಅಗತ್ಯವಿದೆ. ಇದನ್ನು ಭರ್ತಿ ಮಾಡಿಕೊಳ್ಳಲು ಇತರ ದೇಶಗಳಿಂದ ದ್ವಿದಳ ಧಾನ್ಯಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ.

ಅಧಿಕೃತ ಮಾಹಿತಿಗಳ ಪ್ರಕಾರ ದ್ವಿದಳ ಧಾನ್ಯಗಳ ಬೆಲೆಯಲ್ಲಿ ಶೇಕಡಾ 40ರ ಏರಿಕೆ ದೇಶದ ಪ್ರಮುಖ ನಗರಗಳಲ್ಲಿ ದಾಖಲಾಗಿದೆ. ಕೇವಲ ಒಂದು ತಿಂಗಳ ಹಿಂದೆ ರಾಷ್ಟ್ರ ರಾಜಧಾನಿಯಲ್ಲಿ ಪ್ರತಿ ಕೆ.ಜಿ. ಬೇಳೆಕಾಳಿಗೆ 63 ರೂಪಾಯಿಯಿದ್ದದ್ದು ಈಗ 88 ರೂಪಾಯಿಗಳನ್ನು ತಲುಪಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಏರ್ ಇಂಡಿಯಾ ವಿಮಾನ ಬೇಡ ಎಂದಿಲ್ಲ: ಬೋಯಿಂಗ್
ಕೆನರಾ ಬ್ಯಾಂಕ್‌ಗೆ 555 ಕೋಟಿ ರೂಪಾಯಿ ಲಾಭ
ವಿಪ್ರೋಗೆ 1016 ಕೋಟಿ ಲಾಭ
ಜನಸಂಖ್ಯೆ: 2050ರಲ್ಲಿ ಚೀನಾ ಮೀರಿಸಲಿದೆ ಭಾರತ
ಚಿನ್ನ 30 ರೂ. ತುಟ್ಟಿ; ಬೆಳ್ಳಿ 80 ರೂ. ಅಗ್ಗ
'ಡಿಲೀಟ್' ಮಾಡಿದ್ರೂ ಈ-ಮೈಲ್ ಅಳಿಸಿ ಹೋಗಲ್ಲ