ಮಾದಕ ಯುವತಿಯೊಬ್ಬಳ ಬೆತ್ತಲೆ ವಿಡಿಯೋವೊಂದನ್ನು ದುರ್ವಿನಿಯೋಗ ಮಾಡಲಾಗುತ್ತಿದ್ದು, ಆ ಹೆಸರಿನಲ್ಲಿ ಮಾರಕ ವೈರಸ್‌ಗಳನ್ನು ಹರಡಲಾಗುತ್ತಿದೆ ಎಂದು ಅಮೆರಿಕಾದ ಕಂಪ್ಯೂಟರ್ ಸೆಕ್ಯುರಿಟಿ ಸಂಸ್ಥೆಯೊಂದು ಬಳಕೆದಾರರನ್ನು ಎಚ್ಚರಿಸಿದೆ.
ಇತ್ತೀಚೆಗಷ್ಟೇ ಇಎಸ್ಪಿಎನ್ ಕ್ರೀಡಾ ಪತ್ರಕರ್ತೆ ಎರಿನ್ ಆಂಡ್ರ್ಯೂಸ್ ಎಂಬ 31ರ ಹರೆಯದ ಗ್ಲಾಮರಸ್ ಯುವತಿಯ ಬೆತ್ತಲೆ ಚಿತ್ರಗಳು ಎರ್ರಾಬಿರ್ರಿಯಾಗಿ ಇಂಟರ್ನೆಟ್‌ಗೆ ಅಪ್‌ಲೋಡ್ ಆಗಿದ್ದವು. ಹೊಟೇಲ್‌ವೊಂದರಲ್ಲಿ ತಂಗಿದ್ದಾಗ ಬಾಗಿಲ ಸಂದಿಯಿಂದ ಆಕೆಯ ಖಾಸಗಿ ಕ್ಷಣಗಳನ್ನು ಚಿತ್ರೀಕರಣ ಮಾಡಲಾಗಿತ್ತು. ಕೆಲವು ವೆಬ್‌ಸೈಟ್‌ಗಳು ಇದನ್ನು ಪ್ರಕಟಿಸುತ್ತಿದ್ದಂತೆ ಅತ್ತ ಆಂಡ್ರ್ಯೂಸ್ ಮತ್ತು ಆಕೆ ಕೆಲಸ ಮಾಡುತ್ತಿರುವ ಸಂಸ್ಥೆ ಇಎಸ್‌ಪಿಎನ್ ಗುರ್ರೆಂದ ಹಿನ್ನಲೆಯಲ್ಲಿ ವಿಡಿಯೋಗಳನ್ನು ಹಿಂಪಡೆಯಲಾಗಿತ್ತು. ಮತ್ತೂ ಮುಂದುವರಿದಲ್ಲಿ ಕಾನೂನು ಕ್ರಮ ಕೈಗೊಳ್ಳುವ ಬೆದರಿಕೆಯನ್ನೂ ವೆಬ್‌ಸೈಟ್‌ಗಳ ಮೇಲೆ ಆಂಡ್ರ್ಯೂಸ್ ಹಾಕಿದ್ದರು. ಇದೀಗ ಪ್ರಕರಣವು ನ್ಯಾಯಾಲಯದ ಮೆಟ್ಟಿಲೇರಿದೆ.
ಆದರೆ ಗೂಗಲ್ ಸರ್ಚ್ ಇಂಜಿನ್ ಸೇರಿದಂತೆ ಇತರ ಖ್ಯಾತ ಶೋಧ ತಾಣಗಳಲ್ಲಿ ಆಕೆಯ ಬೆತ್ತಲೆ ವಿಡಿಯೋಗಾಗಿ ಶೋಧ ನಡೆಸುತ್ತಿರುವುದು ನಿಂತಿಲ್ಲ. ಇದನ್ನೇ ಬಳಸಿಕೊಂಡ ದುಷ್ಕರ್ಮಿಗಳು ವೈರಸ್‌ಗಳನ್ನು ಹರಡಲು ಶುರು ಮಾಡಿದ್ದಾರಂತೆ.
ಬಳಕೆದಾರರು 'ಎರಿನ್ ಆಂಡ್ರ್ಯೂಸ್ ವಿಡಿಯೋ' ಎಂದು ಸರ್ಚ್‌ನಲ್ಲಿ ಟೈಪಿಸಿದ ಕೂಡಲೇ ಹಲವಾರು ಲಿಂಕ್‌ಗಳು ತೆರೆಯ ಮೇಲೆ ಕಾಣಿಸಿಕೊಳ್ಳುತ್ತವೆ. ಅದಕ್ಕೆ ಕ್ಲಿಕ್ ಮಾಡಿದ ಕೂಡಲೇ ವೈರಸ್‌ಗಳು ಬಳಕೆದಾರರ ಕಂಪ್ಯೂಟರ್‌ಗಳನ್ನು ಹ್ಯಾಕ್ ಮಾಡುವ ಸಾಧ್ಯತೆಗಳಿವೆ ಎಂದು ಇದೀಗ ಕಂಪ್ಯೂಟರ್ ಸುರಕ್ಷತಾ ಸಂಸ್ಥೆಗಳು ಎಚ್ಚರಿಕೆ ನೀಡಿವೆ.
ಮೊದಲಿಗೆ 'ವಿಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ' ಎಂಬ ಸಂದೇಶ ಕಾಣಿಸಿಕೊಳ್ಳುತ್ತದೆ. ಅಲ್ಲಿ ಕ್ಲಿಕ್ ಮಾಡಿದ ನಂತರ ಮತ್ತೊಂದು ಪಾಪ್-ಅಪ್ ವಿಂಡೋ ಕಾಣಿಸಿಕೊಂಡು, 'ವಿಡಿಯೋ ಪ್ಲೇಯರ್ ವಿಂಡೋವನ್ನು ಪಾಪ್-ಅಪ್ ತಡೆಯಿಂದ ನಿರ್ಬಂಧಿಸಲ್ಪಟ್ಟಿದೆ. ಹಾಗಾಗಿ ಮತ್ತೊಂದು ಪ್ಲೇಯರ್‌ನ್ನು ಹಾಕಿಕೊಳ್ಳಬೇಕು' ಎಂಬ ಸಂದೇಶ ಬರುತ್ತದೆ. ಹಾಗೆ ಮಾಡಿದಲ್ಲಿ ತನ್ನಿಂತಾನೇ ಟ್ರಾಜನ್ ಹಾರ್ಸ್ ವೈರಸ್‌ಗಳೊಂದಿಗೆ ಹ್ಯಾಕರ್‌ಗಳು ನಿಮ್ಮ ಕಂಪ್ಯೂಟರ್ ಕಡತಗಳನ್ನು ಗಂಡಾಂತರ ಮಾಡಲಿದ್ದಾರೆ ಎಂದು ಸಂಸ್ಥೆ ಎಚ್ಚರಿಸಿದೆ.
|