ಈ ಹಿಂದಿನ ವಾರ ಶೇ.(-)1.21ರಲ್ಲಿದ್ದ ಹಣದುಬ್ಬರ ದರವು ಜುಲೈ 11ಕ್ಕೆ ಅಂತ್ಯಗೊಂಡ ವಾರದಲ್ಲಿ ಶೇ.(-)1.17ನ್ನು ತಲುಪುವ ಮೂಲಕ ಆಂಶಿಕ ಏರಿಕೆ ದಾಖಲಿಸಿದ್ದರೂ ಋಣಾತ್ಮಕ ಹಾದಿಯಲ್ಲಿಯೇ ಮುಂದುವರಿದಿದೆ.
ಇದೇ ಅವಧಿಯ ಕಳೆದ ವರ್ಷ ಅಂದರೆ 2008, ಜುಲೈ 12ರಂದು ಮುಕ್ತಾಯವಾಗಿದ್ದ ವಾರದಲ್ಲಿ ಹಣದುಬ್ಬರ ದರವು ಶೇಕಡಾ 12.13ನ್ನು ದಾಖಲಿಸಿತ್ತು.
ಆಹಾರ ವಸ್ತುಗಳು ಕಳೆದ ವಾರದ ನಂತರ ದುಬಾರಿಯಾಗಿದ್ದವು. ಸಾಗರೋತ್ಪನ್ನಗಳ ದರದಲ್ಲಿ ಶೇಕಡಾ 9ರ ಏರಿಕೆ ಕಂಡಿತ್ತು. ಜತೆಗೆ ಫಲವಸ್ತುಗಳು ಮತ್ತು ತರಕಾರಿ ಬೆಲೆ ಶೇಕಡಾ 3ರ ಹೆಚ್ಚಳವಾಗಿತ್ತು.
ಉಳಿದಂತೆ ಈ ವಾರದಲ್ಲಿ ಕೊಬ್ಬರಿ ಶೇ.3, ಕಚ್ಚಾ ಉಣ್ಣೆ ಶೇ.2 ಮತ್ತು ವೈಮಾನಿಕ ಇಂಧನ ಶೇ.7ರಷ್ಟು ದುಬಾರಿಯಾಗಿದ್ದವು. ಸೋಯಾಬೀನ್, ಕಚ್ಚಾ ಹತ್ತಿ ದರದಲ್ಲೂ ಹೆಚ್ಚಳ ದಾಖಲಾಗಿತ್ತು.
1995ರಲ್ಲಿ ಸಗಟು ಸೂಚ್ಯಂಕ ದರ ಆರಂಭವಾದ ನಂತರ ಪ್ರಪ್ರಥಮ ಬಾರಿಗೆ ಜೂನ್ ಆರರಂದು ಕೊನೆಗೊಂಡ ವಾರದಲ್ಲಿ ಭಾರತದ ಹಣದುಬ್ಬರ ದರವು ಋಣಾತ್ಮಕವಾಗಿತ್ತು.
|