ಜಾಗತಿಕ ಆರ್ಥಿಕತೆಯಲ್ಲಿ ಸುಧಾರಣೆ ಕಾಣಲು ಕನಿಷ್ಠ ಎರಡು ವರ್ಷಗಳ ಬೇಕಾಗಬಹುದಾದ್ದರಿಂದ ಭಾರತದ ಅಭಿವೃದ್ಧಿ ದರವು 2012ರೊಳಗೆ ಶೇಕಡಾ 9ಕ್ಕೆ ವಾಪಸಾಗುವುದು ಅಸಾಧ್ಯ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಮಾಜಿ ಉಪ ಗವರ್ನರ್ ಎಸ್.ಎಸ್. ತರಾಪೋರೆ ಅಭಿಪ್ರಾಯಪಟ್ಟಿದ್ದಾರೆ.
"ಮುಂದಿನ ಐದು ವರ್ಷಗಳ ಕಾಲ ಅಭಿವೃದ್ಧಿ ದರದ ಸರಾಸರಿಯು ಶೇಕಡಾ 9ರಷ್ಟಿರಬಹುದು ಎನ್ನುವ ನಿರೀಕ್ಷೆಯು ತೀರಾ ಕಾಲ್ಪನಿಕವೆನಿಸಬಹುದು. 2011-12ರ ವೇಳೆಗೆ ಒಟ್ಟು ದೇಶೀಯ ಉತ್ಪಾದನೆಯ ದರವು ಶೇಕಡಾ 9ಕ್ಕೆ ವಾಪಸಾಗಬಹುದು ಎನ್ನುವುದು ವಾಸ್ತವವೆನಿಸುತ್ತದೆ" ಎಂದು ಅವರು ತಿಳಿಸಿದ್ದಾರೆ.
ಡನ್ & ಬ್ರಾಡ್‌ಸ್ಟ್ರೀಟ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು ಮಾತನಾಡುತ್ತಾ, ಆರ್ಥಿಕತೆಯು ಶೇ.8.5ರಿಂದ 9ರ ಅಭಿವೃದ್ಧಿ ಪಥದಲ್ಲಿ ಸಾಗುವ ಮೂಲಕ ಸಂಪೂರ್ಣ ಚೇತರಿಕೆ ಕಾಣುವುದು ಜಾಗತಿಕ ಆರ್ಥಿಕತೆಗೆ ಅಗತ್ಯವಾಗಿದೆ ಎಂದರು.
ಸಾರ್ವಜನಿಕ ಮತ್ತು ಖಾಸಗಿ ವಲಯಗಳ ಹೂಡಿಕೆಯನ್ನು ಹಿಂಪಡೆದುಕೊಳ್ಳುವ ಸರಕಾರದ ನಿರ್ಧಾರ ಸ್ವಾಗತಾರ್ಹ ಎಂದೂ ಅವರು ಶ್ಲಾಘಿಸಿದ್ದಾರೆ. ಈ ವಲಯಗಳು ಸುದೀರ್ಘ ಸಮಯದಿಂದ ಬೆಳವಣಿಗೆಯ ಮಂದಗತಿಯನ್ನು ಅನುಭವಿಸಿವೆ ಎನ್ನವುದು ಅವರ ಅಭಿಪ್ರಾಯ.
|