ಅಂದಿನ ಫ್ಲಾಪಿ ಡಿಸ್ಕ್‌ಗಳೆಲ್ಲಿ, ಇಂದು ರಾಶಿ ರಾಶಿ ಫೈಲ್‌ಗಳನ್ನು ಒಡಲಲ್ಲಿ ತುಂಬಿಕೊಳ್ಳುವ ಫ್ಲ್ಯಾಶ್ ಡ್ರೈವ್‌ಗಳೆಲ್ಲಿ? ತಂತ್ರಜ್ಞಾನ ದಿನದಿಂದ ದಿನಕ್ಕೆ ಹೊಸತನದ ಒನಪು ಪಡೆಯುತ್ತಿರುವುಂತೆಯೇ ಕಿಂಗ್‌ಸ್ಟನ್ 256 ಗಿಗಾ ಬೈಟ್ ಸಾಮರ್ಥ್ಯದ ವಿಶ್ವದ ಮೊತ್ತ ಮೊದಲ ಫ್ಲ್ಯಾಶ್ ಡ್ರೈವ್ ಪರಿಚಯಿಸಿದೆ.ಕೇವಲ 1.44 ಎಂಬಿ ಸಾಮರ್ಥ್ಯವುಳ್ಳ ಫ್ಲಾಪಿ ಡ್ರೈವ್‌ಗಳಲ್ಲಿ ಕಡತಗಳನ್ನು ಸೇವ್ ಮಾಡಲು ಪರದಾಡುವ ಕಾಲವೊಂದಿತ್ತು. ನಂತರದ ದಿನಗಳಲ್ಲಿ ಸೀಡಿಗಳು (700 ಎಂಬಿ) ಬಂದವಾದರೂ ಫೈಲ್‌ಗಳನ್ನು ಸೇವ್ ಮಾಡುವ ವಿಧಾನ ತೀರಾ ಕಠಿಣ ಮತ್ತು ಸಮಯವನ್ನೂ ನುಂಗುತ್ತಿತ್ತು. ಇಂತಿಪ್ಪ ಹೊತ್ತಿನಲ್ಲೇ ಬಂದದ್ದು ಫ್ಲ್ಯಾಶ್ ಡ್ರೈವ್. ಆರಂಭದಲ್ಲಿ ಕೇವಲ ಎಂಟು ಎಂಬಿಗಳಿಗೆ ಸೀಮಿತವಾಗಿದ್ದ ಇದೀಗ 256 ಜಿಬಿ ಸಾಮರ್ಥ್ಯವನ್ನು ತಲುಪಿದೆ. ಕಂಪ್ಯೂಟರ್ ಭಾಗಗಳ ತಯಾರಿಯಲ್ಲಿ ಅದರಲ್ಲೂ ಫ್ಲ್ಯಾಶ್ ಡ್ರೈವ್‌ಗಳ ಉತ್ಪಾದನೆಯಲ್ಲಿ ಜನಪ್ರಿಯವಾಗಿರುವ ತೈವಾನ್-ಅಮೆರಿಕಾ ಕಂಪನಿ 'ಕಿಂಗ್‌ಸ್ಟನ್' ಇದರ ಹಿಂದಿನ ರೂವಾರಿ.' ಕಿಂಗ್‌ಸ್ಟನ್ ಡಾಟಾ ಟ್ರಾವೆಲರ್ 300' ಬ್ರಾಂಡ್ ಹೆಸರಿನಲ್ಲಿ ಮಾರಾಟ ಮಾಡಲಾಗುವ ಈ ಫ್ಲ್ಯಾಶ್ ಡ್ರೈವ್ ಬೆಲೆ ಕೇವಲ 45,000 ರೂಪಾಯಿ ಮಾತ್ರ..! ಅದೂ ಮಾರುಕಟ್ಟೆಯಲ್ಲಿ ಲಭ್ಯವಿಲ್ಲ. ಕಂಪನಿಯಿಂದಲೇ ನಾವು ನೇರವಾಗಿ ಪಡೆದುಕೊಳ್ಳಬೇಕಾಗುತ್ತದೆ. ಐದು ವರ್ಷಗಳ ವಾರಂಟಿ ಮತ್ತು ಅಗತ್ಯ ಬಿದ್ದರೆ ತಂತ್ರಜ್ಞಾನ ಸಹಕಾರವನ್ನೂ ಕಂಪನಿ ನೀಡುತ್ತದೆ.ಫೋಟೋಗಳು, ಸಂಗೀತ ಫೈಲುಗಳು, ಸಿನಿಮಾ ಸೇರಿದಂತೆ ಯಾವುದೇ ರೀತಿಯ ದಾಖಲೆಗಳನ್ನು ಈ ಫ್ಲ್ಯಾಶ್ ಡ್ರೈವ್‌ನಲ್ಲಿ ಅತ್ತಿತ್ತ ತೆಗೆದುಕೊಂಡು ಹೋಗಬಹುದಾಗಿದೆ. 10 ಬ್ಲೂ ರೇ ಡಿಸ್ಕ್ ಅಥವಾ 54 ಸಿಂಗಲ್ ಲೇಯರ್ ಡೀವಿಡಿ ಅಥವಾ 365 ಸಿಡಿಗಳಲ್ಲಿ ತುಂಬಬಹುದಾದ ಫೈಲುಗಳನ್ನು 256 ಜಿಬಿ ಸಾಮರ್ಥ್ಯದ ಫ್ಲ್ಯಾಶ್ ಡ್ರೈವ್‌ನಲ್ಲಿ ಹೊತ್ತೊಯ್ಯಬಹುದಾಗಿದೆ.ಪ್ರತೀ ಸೆಕುಂಡಿಗೆ ಈ 256 ಜಿಬಿ ಸಾಮರ್ಥ್ಯದ ಫ್ಲ್ಯಾಶ್ ಡ್ರೈವ್ 20 ಎಂಬಿಯನ್ನು ರೀಡ್ ಅಥವಾ ಕಂಪ್ಯೂಟರ್‌ಗೆ ಕಾಪಿ ಮಾಡಬಲ್ಲುದು ಮತ್ತು ಸೆಕುಂಡಿಗೆ 10 ಎಂಬಿಯಂತೆ ರೈಟ್ ಅಥವಾ ಫ್ಲ್ಯಾಶ್ ಡ್ರೈವ್‌ಗೆ ಕಡತಗಳನ್ನು ಸೇರಿಸಬಲ್ಲುದು. |