ಒಂಬತ್ತನೇ ಶತಮಾನದ್ದು ಎಂದು ಹೇಳಲಾಗಿರುವ ಪ್ರಾಚೀನ ಕಲ್ಲಿನ ವಿಗ್ರಹವೊಂದನ್ನು ಮಾರಲೆತ್ನಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಸಿಬಿಐ ಬಂಧಿಸಿದ್ದು, ಒಂದು ಕೋಟಿ ರೂಪಾಯಿ ಬೆಲೆ ಬಾಳುವ ಶಿಲ್ಪವನ್ನು ವಶಪಡಿಸಿಕೊಂಡಿದ್ದಾರೆ.
ಕಲ್ಲಿನಿಂದ ಮಾಡಲ್ಪಟ್ಟಿರುವ ಈ ಶಿವಲಿಂಗವು ಅಮೂಲ್ಯವಾಗಿದ್ದು, ಶಿವ, ವಿಷ್ಣು, ಬ್ರಹ್ಮ ಮತ್ತು ಸೂರ್ಯ ದೇವರ ಕೆತ್ತನೆಗಳನ್ನು ನಾಲ್ಕು ದಿಕ್ಕುಗಳಲ್ಲಿ ಕಾಣಬಹುದಾಗಿದೆ.
ಪ್ರಾಚ್ಯ ವಸ್ತುಗಳ ಇಲಾಖೆಯ ಸಹಕಾರದೊಂದಿಗೆ ಈ ದಾಳಿ ನಡೆಸಿ ಅಮೂಲ್ಯ ಶಿಲ್ಪವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹಿರಿಯ ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.
ರಾಜಸ್ತಾನದ ಭಾರತ್ಪುರ್ ಜಿಲ್ಲೆಯ ಕಾಮಾ ತೆಹ್ಸಿಲ್ ಎಂಬಲ್ಲಿನ ಪೈ ಗ್ರಾಮದಲ್ಲಿನ ವ್ಯಕ್ತಿಯೊಬ್ಬನಿಂದ ಈ ಶಿಲ್ಪವನ್ನು ವಶಪಡಿಸಿಕೊಳ್ಳಲಾಗಿದೆ. ಆತ ಜೂನ್ 10ರಂದು ಇದನ್ನು ಮಾರಾಟ ಮಾಡಲು ಗ್ರಾಹಕರನ್ನು ಆಕರ್ಷಿಸುತ್ತಿದ್ದ ಎಂದು ಅವರು ವಿವರಿಸಿದ್ದಾರೆ.
47 ಇಂಚು ಅಡಿ ಎತ್ತರದ ಈ ಅಪರೂಪದ ಪುರಾತನ ಪ್ರತಿಮೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಕೋಟಿ ರೂಪಾಯಿಗಳನ್ನು ಬಾಳುತ್ತದೆ ಎಂದು ಪೊಲೀಸರು ಅಂದಾಜಿಸಿದ್ದಾರೆ.
|